Site icon Vistara News

Masks Not Mandatory | ವಿಮಾನದಲ್ಲಿ ಈಗ ಮಾಸ್ಕ್‌ ಧರಿಸುವುದು ಕಡ್ಡಾಯವಲ್ಲ, ಆದರೆ ಕೆಲ ನಿಯಮ ಅನ್ವಯ

Wearing Masks On Flights

ನವದೆಹಲಿ: ಭಾರತ ಸೇರಿ ಜಗತ್ತಿನಾದ್ಯಂತ ಕೊರೊನಾ ನಿಯಂತ್ರಣಕ್ಕೆ ಬಂದರೂ ವಿಮಾನಗಳಲ್ಲಿ ಪ್ರಯಾಣಿಸುವವರು ಮಾಸ್ಕ್‌ ಧರಿಸುವುದು ಕಡ್ಡಾಯ ಎಂಬ ನಿಯಮದಿಂದ ಪ್ರಯಾಣಿಕರು ಬೇಸರ ವ್ಯಕ್ತಪಡಿಸುವುದು ಸಾಮಾನ್ಯವಾಗಿದೆ. ಆದರೆ, ಈಗ ಕೇಂದ್ರ ಸರ್ಕಾರವು ವಿಮಾನಗಳಲ್ಲಿ ಮಾಸ್ಕ್‌ ಧರಿಸುವುದು ಕಡ್ಡಾಯ ಎಂಬ ನಿಯಮವನ್ನು (Masks Not Mandatory) ತೆಗೆದುಹಾಕಿದೆ. ಇದರಿಂದ ವಿಮಾನ ಪ್ರಯಾಣಿಕರಿಗೆ ರಿಲೀಫ್‌ ಸಿಕ್ಕಂತಾಗಿದೆ.

“ಕೊರೊನಾ ಭೀತಿ ಹಿನ್ನೆಲೆಯಲ್ಲಿ ವಿಮಾನದಲ್ಲಿ ಪ್ರಯಾಣಿಸುವವರು ಮಾಸ್ಕ್‌ ಧರಿಸಬೇಕು. ಇದನ್ನು ವಿಮಾನಯಾನ ಸಂಸ್ಥೆಗಳೂ ಪ್ರಯಾಣಿಕರಿಗೆ ಮನವರಿಕೆ ಮಾಡಬೇಕು. ಆದರೆ, ಹಲವು ಕಾರಣಗಳಿಂದಾಗಿ ಮಾಸ್ಕ್‌ ಧರಿಸದೆ ಇದ್ದವರಿಗೆ ದಂಡ ಅಥವಾ ಶಿಕ್ಷೆ ವಿಧಿಸುವ ಹಾಗಿಲ್ಲ. ಇದು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ವಿಮಾನ ಪ್ರಯಾಣಿಕರಿಗೆ ಅನ್ವಯವಾಗಲಿದೆ” ಎಂದು ಅಡ್ವೈಸರಿ ಹೊರಡಿಸಿದೆ.

ಕೊರೊನಾ ಹಿನ್ನೆಲೆಯಲ್ಲಿ ವಿಮಾನಗಳಲ್ಲಿ ಮಾಸ್ಕ್‌ ಧರಿಸುವುದು ಕಡ್ಡಾಯವಾಗಿತ್ತು. ಆದರೆ, ಕೇಂದ್ರ ಸರ್ಕಾರವು ಕೇಂದ್ರ ಆರೋಗ್ಯ ಸಚಿವಾಲಯದ ಸಲಹೆ ಪಡೆದು ಈಗ ಕಡ್ಡಾಯ ನಿಯಮವನ್ನು ಪರಿಷ್ಕರಣೆಗೊಳಿಸಿದೆ. ಆದಾಗ್ಯೂ, ವಿಮಾನ ಹಾಗೂ ವಿಮಾನ ನಿಲ್ದಾಣಗಳಲ್ಲಿ ಕೊರೊನಾ ನಿಯಂತ್ರಣ ಕುರಿತ ಶಿಷ್ಟಾಚಾರಗಳನ್ನು ಮುಂದುವರಿಸಬೇಕು ಎಂದು ಸರ್ಕಾರ ಸೂಚಿಸಿದೆ.

ಇದನ್ನೂ ಓದಿ | ಯುವಕನ ಪತ್ತೆ ಹಚ್ಚಲು ಸಹಕರಿಸಿದ್ದು ಮಾಸ್ಕ್‌ !: ಆತ್ಮಹತ್ಯೆಗೆ ಇನ್‌ಸ್ಟಾಗ್ರಾಂ ಮೂಲ

Exit mobile version