Site icon Vistara News

West Bengal Election: 42 ಸಾವು‌, ಹಿಂಸಾಚಾರ ಕಂಡ ಪಶ್ಚಿಮ ಬಂಗಾಳದ ಪಂಚಾಯತ್ ಚುನಾವಣೆ ಫಲಿತಾಂಶ ಇಂದು

west bengal violence

ಕೋಲ್ಕತ್ತಾ: ರಾಜ್ಯಾದ್ಯಂತ ಹಲವು ದಿನಗಳ ಕಾಲ ಹಿಂಸಾಚಾರಕ್ಕೆ (West Bengal Violence) ಕಾರಣವಾದ ಪಶ್ಚಿಮ ಬಂಗಾಳ ಪಂಚಾಯತ್ ಚುನಾವಣೆಯ (West Bengal Election) ಫಲಿತಾಂಶ (election result) ಇಂದು ಪ್ರಕಟವಾಗಲಿದೆ. ಕೇಂದ್ರ ಅರೆಸೇನಾ ಪಡೆಗಳು ಮತ್ತು ರಾಜ್ಯ ಪೊಲೀಸರು ಬಿಗಿ ಪಹರೆ ಏರ್ಪಡಿಸಿದ್ದಾರೆ.

2024ರ ಲೋಕಸಭೆ ಚುನಾವಣೆಗೆ ಮುನ್ನ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಮತ್ತು ಪ್ರತಿಪಕ್ಷ ಭಾರತೀಯ ಜನತಾ ಪಕ್ಷಕ್ಕೆ ಇದು ಅಗ್ನಿಪರೀಕ್ಷೆ ಎಂದು ಪರಿಗಣಿಸಲಾಗಿರುವ ಹಿನ್ನೆಲೆಯಲ್ಲಿ ಈ ಫಲಿತಾಂಶಕ್ಕೆ ಮಹತ್ವ ಬಂದಿದೆ. ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗಲಿದೆ. ಎಲ್ಲಾ ಎಣಿಕೆ ಕೇಂದ್ರಗಳಲ್ಲಿ ಕೇಂದ್ರ ಪಡೆಗಳನ್ನು ನಿಯೋಜಿಸಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

ಮೂರು ಹಂತದ ಸ್ಥಳೀಯ ಸಂಸ್ಥೆಗಳ ಚುನಾವಣೆ ಜೂನ್ 8ರಂದು ಘೋಷಣೆಯಾದಂದಿನಿಂದ ಹಿಂಸೆ ಆರಂಭವಾಗಿತ್ತು. ಜುಲೈ 8ರಂದು ನಡೆದ ಮತದಾನದ ವೇಳೆ ಭಯಾನಕ ಹಿಂಸಾಚಾರ, ಬೂತ್ ವಶೀಕರಣ ಯತ್ನ ಇತ್ಯಾದಿ ನಡೆದಿದ್ದವು. ಬೂತ್ ವಶಪಡಿಸಿಕೊಳ್ಳುವಿಕೆ, ರಿಗ್ಗಿಂಗ್, ಮತಪೆಟ್ಟಿಗೆಗಳ ಲೂಟಿ, ಮತಗಟ್ಟೆ ಅಧಿಕಾರಿಗಳ ಮೇಲೆ ಹಲ್ಲೆ, ಗುಂಡಿನ ದಾಳಿ ಮತ್ತು ಬಾಂಬ್ ದಾಳಿಯ ವ್ಯಾಪಕ ಆರೋಪಗಳ ನಡುವೆ ಕನಿಷ್ಠ 18 ಜನರು ಸಾವನ್ನಪ್ಪಿದ್ದಾರೆ.

ಇದರ ನಂತರ ಬಂಗಾಳದ 19 ಜಿಲ್ಲೆಗಳ 696 ಬೂತ್‌ಗಳಲ್ಲಿ ರಾಜ್ಯ ಚುನಾವಣಾ ಆಯೋಗವು ಮರು ಮತದಾನಕ್ಕೆ ಆದೇಶಿಸಿತ್ತು. ಉಳಿದ ಕಡೆ ಶೇ. 69.85 ಮತದಾನವಾಗಿದೆ. ನಿನ್ನೆ, ಸೋಮವಾರ, ಮತ್ತು ಕೆಲವೆಡೆ ನಡೆದ ಹಿಂಸಾಚಾರದಲ್ಲಿ ಇನ್ನೂ ನಾಲ್ವರು ಸಾವನ್ನಪ್ಪಿದ್ದಾರೆ. ಇದರೊಂದಿಗೆ ಇಲ್ಲಿನ ರಾಜಕೀಯ ಹಿಂಸೆ 42 ಮಂದಿಯನ್ನು ಬಲಿ ತೆಗೆದುಕೊಂಡಿದೆ.

ರಾಜೀವ ಸಿನ್ಹಾ ನೇತೃತ್ವದ ಚುನಾವಣೆ ಆಯೋಗ ಬಂಗಾಳದ ಮೂರು ಜಿಲ್ಲೆಗಳನ್ನು ಹೊರತುಪಡಿಸಿ ಎಲ್ಲಾ ಹಿಂಸಾಪೀಡಿತ ಬೂತ್‌ಗಳಲ್ಲಿ ಮರು ಮತದಾನಕ್ಕೆ ಆದೇಶಿಸಿತ್ತು. ಸೋಮವಾರ ಬಿಗಿ ಭದ್ರತೆಯ ನಡುವೆ ಮರುಮತದಾನ ನಡೆದಿತ್ತು. ಕೇಂದ್ರ ಸೇನಾ ಪಡೆಗಳನ್ನು ಭದ್ರತೆಗೆ ಬಳಸಿಕೊಳ್ಳಲಾಗಿತ್ತು. ನಿನ್ನೆ ಯಾವುದೇ ಹಿಂಸೆಯ ಪ್ರಕರಣಗಳು ನಡೆದಿರಲಿಲ್ಲ.

ಇದನ್ನೂ ಓದಿ: Bengal Panchayat Polls: ಪಶ್ಚಿಮ ಬಂಗಾಳ ರಣರಂಗ; ಟಿಎಂಸಿ ಕಾರ್ಯಕರ್ತನ ಕೊಲೆ

Exit mobile version