Site icon Vistara News

West Bengal: ಶಾಸಕರ ಸಂಬಳದಲ್ಲಿ ತಿಂಗಳಿಗೆ 40 ಸಾವಿರ ರೂ. ಹೆಚ್ಚಳ!

Mamata Banerjee

#image_title

ಕೋಲ್ಕೊತಾ, ಪಶ್ಚಿಮ ಬಂಗಾಳ: ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Chief Minister Mamata Banerjee) ಅವರು ಪಶ್ಚಿಮ ಬಂಗಾಳದ ಶಾಸಕರಿಗೆ (West Bengal MLAs) ಖುಷಿ ನೀಡುವ ಸುದ್ದಿಯನ್ನು ನೀಡಿದ್ದಾರೆ. ಎಲ್ಲ ಶಾಸಕರ ಸಂಬಳವನ್ನು ತಿಂಗಳಿಗೆ 40 ಸಾವಿರ ರೂ. ಹೆಚ್ಚಳ ಮಾಡಲಾಗಿದೆ. ಪಶ್ಚಿಮ ಬಂಗಾಳದ ವಿಧಾನಸಭೆಯಲ್ಲಿ (West Bengal Assembly) ಈ ಕುರಿತು ಘೋಷಣೆ ಮಾಡಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ಮುಖ್ಯಮಂತ್ರಿಯ ಸಂಬಳದಲ್ಲಿ ಯಾವುದೇ ಪರಿಷ್ಕರಣೆ ಮಾಡಿಲ್ಲ ಎಂದು ಹೇಳಿದರು. ಅಲ್ಲದೇ, ಸಿಎಂ ಆಗಿ ಸಂಬಳ ಕೂಡ ಪಡೆಯುತ್ತಿಲ್ಲ ಎಂದು ಹೇಳಿದರು.

ಬೇರೆ ರಾಜ್ಯಗಳಿಗೆ ಹೋಲಿಸಿದರೆ ಪಶ್ಚಿಮ ಬಂಗಾಳದ ವಿಧಾನಸಭೆಯ ಶಾಸಕರ ವೇತನವು ತುಂಬಾ ಕಡಿಮೆಯಾಗಿತ್ತು. ಆದ್ದರಿಂದ ಅವರ ವೇತನವನ್ನು ತಿಂಗಳಿಗೆ 40,000 ರೂಪಾಯಿ ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಪ್ರಕಟಿಸಿದರು.

ಈ ಸುದ್ದಿಯನ್ನೂ ಓದಿ:MLAs Salary: ಶಾಸಕರಿಗೆ 84 ಸಾವಿರ ರೂ. ಸಂಬಳ ಸಾಲದು, ಹೆಚ್ಚಿಸಿ ಎಂದ ಪಂಜಾಬ್‌ ಎಂಎಲ್‌ಎ, ವಿಧೇಯಕಕ್ಕೆ ಅಸ್ತು

ಸ್ಯಾಲರಿ ಬ್ರೇಕ್‌ಅಪ್ ಮಾಹಿತಿ ಇಲ್ಲ

ಸಂಬಳದ ಹೆಚ್ಚಳದ ನಂತರ ಎಲ್ಲಾ ಭತ್ಯೆಗಳು ಮತ್ತು ವಿವಿಧ ಸ್ಥಾಯಿ ಸಮಿತಿಗಳ ಸದಸ್ಯರಾಗಿ ಹೆಚ್ಚುವರಿ ವೇತನವನ್ನು ಒಳಗೊಂಡಂತೆ ಶಾಸಕರ ನಿಜವಾದ ಸಂಬಳದ ಬ್ರೇಕ್‌ ಅಪ್ ಕುರಿತಾದ ಮಾಹಿತಿಯನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ನೀಡಿಲ್ಲ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version