ನವದೆಹಲಿ: ನನ್ನ ಮಗ ಅಥವಾ ಆ ಹುಡುಗಿ ಮಾಡಿದ ಅಪರಾಧವಾದರೂ ಏನು? (done anything wrong?) ಅವರನ್ನು ಅಪಹರಿಸಿದ ವೇಳೆ ಅವರು ಪ್ರಯಾಣಿಸುತ್ತಿರುವುದೇ ತಪ್ಪಾಯ್ತಾ ಎಂದು ಶಸ್ತ್ರ ಸಜ್ಜಿತ ದುಷ್ಕರ್ಮಿಗಳಿಂದ ಹತ್ಯೆಗೀಡಾದ 17 ವರ್ಷದ ವಿದ್ಯಾರ್ಥಿಯ ತಂದೆ ಫಿಜಾಮ್ ಇಬುಂಗೋಬಿ ಅವರು ಪ್ರಶ್ನಿಸಿದ್ದಾರೆ(Parents Of Manipur Teens). ಶಸ್ತ್ರಸಜ್ಜಿತ ದುಷ್ಕರ್ಮಿಗಳಿಂದ ಹತ್ಯೆಗೀಡಾದ 17 ವರ್ಷದ ವಿದ್ಯಾರ್ಥಿಯ ಪೋಷಕರು ಎರಡು ತಿಂಗಳಿನಿಂದ ಪ್ರತಿದಿನ ಬೆಳಿಗ್ಗೆ ತಿಂಡಿಯ ತಟ್ಟೆಯನ್ನು ಅವನ ಟೇಬಲ್‌ಗೆ ಹಾಕುತ್ತಿದ್ದರು, ಅವನು ಮನೆಗೆ ಮರಳುತ್ತಾನೆ ಎಂದು ಆಶಿಸುತ್ತಿದ್ದರು. ಅವರು ಈಗ ಟೇಬಲ್‌ನಲ್ಲಿ ಆಹಾರ ತಟ್ಟೆ ಹಾಕುವುದನ್ನು ನಿಲ್ಲಿಸಿದ್ದಾರೆ. ಈ ವಿಷಯವನ್ನು ಕಣ್ಣೀರು ಹಾಕುತ್ತಲೇ ಅವರು ತಿಳಿಸಿದರು(Manipur Horror).
ಜುಲೈನಲ್ಲಿ ನಾಪತ್ತೆಯಾಗಿದ್ದ ಮೈತಿ ಸಮುದಾಯದ ಇಬ್ಬರು ವಿದ್ಯಾರ್ಥಿಗಳಾದ ಹಿಜಾಮ್ ಲಿಂಥೋಯಿಂಗಾಂಬಿ (17) ಮತ್ತು ಫಿಜಾಮ್ ಹೇಮ್ಜಿತ್ (20) ಅವರ ಕೊಲೆಯಾಗಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ವೈರಲ್ ಆಗಿರುವ ಫೋಟೋವೊಂದರಲ್ಲಿ ಸಶಸ್ತ್ರ ಗುಂಪೊಂದರ ಮುಂದೆ ಹುಲ್ಲುಗಾವಲಿನ ಕಾಂಪೌಂಡ್‌ನಲ್ಲಿ ವಿದ್ಯಾರ್ಥಿಗಳಿಬ್ಬರು ಕುಳಿತಿದ್ದಾರೆ. ಲಿಂಥೋಯಿಂಗಾಂಬಿ ಬಿಳಿ ಟೀ ಶರ್ಟ್ ಧರಿಸಿದ್ದರೆ, ಹೇಮ್ಜಿತ್ ಚೆಕ್ಸ್ ಶರ್ಟ್ ಧರಿಸಿದ್ದಾರೆ. ಅವರ ಹಿಂದೆ ಬಂದೂಕುಗಳನ್ನು ಹಿಡಿದುಕೊಂಡಿರುವ ಇಬ್ಬರು ನಿಂತಿದ್ದಾರೆ. ಇನ್ನೊಂದು ಫೋಟೋದಲ್ಲಿ ವಿದ್ಯಾರ್ಥಿಗಳ ದೇಹಗಳು ನೆಲದ ಮೇಲೆ ಬಿದ್ದಿರುವುದು ಕಾಣಬಹುದು.
ಈ ಫೋಟೋಗಳು ವೈರಲ್ ಆಗುತ್ತಿದ್ದಂತೆ ಭಾರೀ ಆಕ್ರೋಶವಾಗಿದ್ದು, ಸಿಬಿಐ ಈ ಪ್ರಕರಣದ ತನಿಖೆಯನ್ನು ಕೈಗೊಂಡಿದೆ. ಈ ಮಧ್ಯೆ, ಹತರಾದ ವಿದ್ಯಾರ್ಥಿಯ ತಂದೆ ಎನ್‌ಡಿ ಟಿವಿಯೊಂದಿಗೆ ಮಾತನಾಡಿ, ತಮ್ಮ ಅಳಲನ್ನು ಹೊರ ಹಾಕಿದ್ದಾರೆ.
17ರ ಹರೆಯದ ಬಾಲಕಿ ಜುಲೈ 6ರಂದು ಬೆಳಗ್ಗೆ ಕೆಲ ಗಂಟೆಗಳ ಕಾಲ ಕರ್ಫ್ಯೂ ಸಡಿಲಿಸಿದಾಗ ವೈದ್ಯಕೀಯ ಪೂರ್ವ ವ್ಯಾಸಂಗಕ್ಕೆ ಪ್ರವೇಶಕ್ಕಾಗಿ ನೀಟ್ ತರಗತಿಗಳಿಗೆ ಹಾಜರಾಗಲು ಮನೆಯಿಂದ ತೆರಳಿದ್ದಳು. ಆಕೆಯನ್ನು ಅವಳ ಸ್ನೇಹಿತ ಮೋಟಾರು ಸೈಕಲ್‌ನಲ್ಲಿ ಕರೆದುಕೊಂಡು ಹೋಗಿದ್ದ. ಪರಿಸ್ಥಿತಿ ಸುಧಾರಿಸಿದೆ ಎಂದು ಭಾವಿಸಿ, ಇಬ್ಬರೂ ಚುರಚಂದಪುರ ಮತ್ತು ಬಿಷ್ಣುಪುರ ಜಿಲ್ಲೆಗಳನ್ನು ಸಂಪರ್ಕಿಸುವ ಮುಖ್ಯ ರಸ್ತೆಗೆ ಹೋಗಿದ್ದರು. ಈ ಪ್ರದೇಶದಲ್ಲಿ ಮೇ ಮತ್ತು ಜೂನ್ ತಿಂಗಳಲ್ಲಿ ಭಾರೀ ಸಂಘರ್ಷ ನಡೆದಿತ್ತು. ಬಳಿಕ ಅವರು ಕಾಣೆಯಾಗಿದ್ದರು. ವಿದ್ಯಾರ್ಥಿಗಳಿಬ್ಬರ ತಂದೆ-ತಾಯಿ ಮಕ್ಕಳ ಕಾಣೆಯ ಬಗ್ಗೆ ಪೊಲೀಸರಿಗೆ ದೂರು ನೀಡಿದದ್ರು.
ಈ ಸುದ್ದಿಯನ್ನೂ ಓದಿ: Manipur Horror: ಮೈತಿ ವಿದ್ಯಾರ್ಥಿಗಳಿಬ್ಬರ ಶವಗಳ ಫೋಟೊ ವೈರಲ್; ಮಣಿಪುರ ಮತ್ತೆ ಉದ್ವಿಗ್ನ?
ಮಗಳು ಮನೆಗೆ ಬರಲಿಲ್ಲ. ಆಗ ಅವಳಿಗೆ ಕರೆ ಮಾಡಿದೆ. ಕರೆ ಸ್ವೀಕರಿಸಿದಳು. ಆದರೆ, ಭಯಭೀತಳಂತೆ ಕಂಡಳು. ಅಲ್ಲದೇ ನಂಬೋಲ್‌ನಲ್ಲಿದ್ದೇನೆ ಎಂದು ಹೇಳಿದಳು. ಅಲ್ಲಿಗೆ ಯಾಕೆ ಹೋಗಿರುವೆ ಎಂದು ಪ್ರಶ್ನಿಸಿದೆ. ಅಲ್ಲದೇ, ನಂಬೋಲ್‌ನಲ್ಲಿ ಎಲ್ಲಿದ್ದಿಯಾ ಸ್ಥಳ ಮಾಹಿತಿ ನೀಡು ಎಂದು ಕೇಳಿದೆ. ಅವಳು ಖೌಪುಮ್ (ನಂಬೋಲ್‌ನಿಂದ 20 ಕಿಮೀ) ಎಂದು ಗೊಣಗಿದಳು ಮತ್ತು ಅವಳ ಫೋನ್ ಸ್ವಿಚ್ ಆಫ್ ಆಯಿತು ಎಂದು ವಿದ್ಯಾರ್ಥಿನಿಯ ತಾಯಿ ಜಯಶ್ರೀ ಆಗಸ್ಟ್ 2 ರಂದು ಎನ್‌ಡಿಟಿವಿಗೆ ತಿಳಿಸಿದ್ದರು. ನಮಗೆ ನ್ಯಾಯ ದೊರೆಯಬೇಕು. ಕೊಲೆಗಾರರಿ ಶಿಕ್ಷೆಯಾಗಬೇಕು. ನಾನು ಈ ದಿನಗಳನ್ನು ಹೇಗೆ ಕಳೆದಿದ್ದೇನೆ ಎಂದು ನನಗೆ ಗೊತ್ತು ಎಂದು ಬಾಲಕಿಯ ತಂದೆ ಹಿಜಾಮ್ ಕುಲ್ಲಜಿತ್ ಹೇಳುತ್ತಾ ಕಣ್ಣೀರಾದರು.