Site icon Vistara News

Parliament Budget Session: ಮೋದಿ-ಅದಾನಿ ನಡುವಿನ ಸಂಬಂಧ ಎಂಥದ್ದು? ಪಿಎಂಗೆ 6 ಪ್ರಶ್ನೆ ಎಸೆದ ರಾಹುಲ್ ಗಾಂಧಿ

What is the relationship between Modi-Adani? Rahul Gandhi asked at Parliament Budget Session

ನವದೆಹಲಿ: ಮಂಗಳವಾರ ಮಧ್ಯಾಹ್ನ ಲೋಕಸಭೆ ಕಲಾಪ (Parliament Budget Session) ಆರಂಭವಾಗುತ್ತಿದ್ದಂತೆ ಮಾತನಾಡಲು ಮುಂದಾದ ರಾಹುಲ್ ಗಾಂಧಿ(Rahul Gandhi), ಅದಾನಿ, ಮೋದಿ ಮತ್ತು ಬಿಜೆಪಿ ವಿರುದ್ಧ ಹರಿಹಾಯ್ದರು ‘ಸಂಸತ್ತಿನಲ್ಲಿ ಅದಾನಿಯವರ ಕುರಿತು ಚರ್ಚೆ ಆಗುವುದನ್ನು ತಪ್ಪಿಸಲು ಪ್ರಧಾನಿ ಮೋದಿಯವರು (Narendra Modi) ಎಲ್ಲ ಪ್ರಯತ್ನ ಮಾಡುತ್ತಿದ್ದಾರೆ. ಅದ್ಯಾಕೆ ಎಂದು ಎಲ್ಲರಿಗೂ ಗೊತ್ತಿದೆ. ಆದರೆ ನಾನು ಅದಾನಿ ವಿಷಯದ ಬಗ್ಗೆ ಚರ್ಚೆ ಆಗಬೇಕು ಎಂದು ಬಯಸುತ್ತೇನೆ ಮತ್ತು ಸತ್ಯ ಹೊರಬರಬೇಕು ಎಂದು ಆಶಿಸುತ್ತೇನೆ’ ಎಂದು ಹೇಳಿದ್ದಾರೆ. ಆ ಮೂಲಕ ಮೋದಿ ಮತ್ತು ಅದಾನಿ ಮಧ್ಯೆ ನಂಟಿದೆ ಎಂದರ್ಥದಲ್ಲಿ ಮಾತನಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ನಾಳೆ (ಬುಧವಾರ) ಸದನದಲ್ಲಿ ಮಾತನಾಡಲಿದ್ದಾರೆ. ನನ್ನ ಕೆಲವೊಂದು ಪ್ರಶ್ನೆಗಳಿವೆ. ಈ ಪ್ರಶ್ನೆಗಳಿಗೆ ಮೋದಿ ಉತ್ತರಿಸಲಿ ಎಂದು ಸವಾಲು ಹಾಕಿದ್ದಾರೆ.

ಮೋದಿಗೆ ಸವಾಲು ಹಾಕಿದ ರಾಹುಲ್ ಗಾಂಧಿ

  1. ಪ್ರಧಾನಿ ವಿದೇಶಿ ಪ್ರವಾಸಕ್ಕೆ ತೆರಳುವಾಗ ಅದಾನಿ ನಿಮ್ಮ ವಿಮಾನದಲ್ಲಿ ಎಷ್ಟು ಬಾರಿ ಪ್ರಯಾಣ ಮಾಡಿದ್ದಾರೆ?
  2. ಪ್ರಧಾನಿ ವಿದೇಶಿ ಪ್ರವಾಸದ ಸಂದರ್ಭದಲ್ಲಿ ಬೇರೆ ವಿಮಾನದಿಂದ ಅದಾನಿ ಎಷ್ಟು ಬಾರಿ ಪ್ರಯಾಣ ಮಾಡಿದ್ದಾರೆ?
  3. ಪ್ರಧಾನಿ ವಿದೇಶಿ ಪ್ರವಾಸದ ಕೆಲ ದಿನಗಳಲ್ಲೇ ಆ ದೇಶಗಳಿಗೆ ಎಷ್ಟು ಬಾರಿ ಪ್ರವಾಸ ಮಾಡಿದ್ದಾರೆ?
  4. ಕಳೆದ 20 ವರ್ಷಗಳಲ್ಲಿ ಅದಾನಿ ಬಿಜೆಪಿಗೆ ಎಷ್ಟು ಹಣ ನೀಡಿದ್ದಾರೆ?
  5. ಎಲೆಕ್ಟ್ರೋಲ್ ಬಾಂಡ್ ಮೂಲಕ ಎಷ್ಟು ಹಣ ನೀಡಿದ್ದಾರೆ?
  6. ರಾಜಕಾರಣಿಗಳು ಮತ್ತು ವ್ಯವಹಾರಸ್ಥರ ನಡುವಿನ ಸಂಬಂಧ ಎಂಥದ್ದು?

ಇದನ್ನೂ ಓದಿ: Parliament Session: ಬಜೆಟ್​ ಅಧಿವೇಶನಕ್ಕೆ ಅದಾನಿ ಅಡ್ಡಿ; ಎರಡೂ ಸದನಗಳ ಕಲಾಪ ಫೆ.6ಕ್ಕೆ ಮುಂದೂಡಿಕೆ

ಈ ಎಲ್ಲ ಪ್ರಶ್ನೆಗಳಿಗೆ ನರೇಂದ್ರ ಮೋದಿ ಅವರು ಉತ್ತರಿಸಲಿ. ಈ ಎಲ್ಲ ಕುರಿತು ಹಾರ್ವರ್ಡ್ ಯುನಿವರ್ಸಿಟಿಯಿಂದ ಸ್ಟಡಿ ಮಾಡಬೇಕಿದೆ. ಬಹುಶಃ ಇದರಲ್ಲಿ ಪ್ರಧಾನಿ ಮೋದಿ ಅವರಿಗೆ ಗೋಲ್ಡ್ ಮೆಡಲ್ ಸಿಗಬಹುದು ಎಂದು ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದಾರೆ.

Exit mobile version