Site icon Vistara News

Twin Tower Demolition | ನೊಯ್ಡಾ ಕಟ್ಟಡಗಳಲ್ಲಿ ಫ್ಲ್ಯಾಟ್‌ ಖರೀದಿಸಿದವರ ಹಣಕ್ಕೆ ಯಾರು ಹೊಣೆ? ವಾಪಸ್‌ ಸಿಗುತ್ತಾ?

Tower

ನವದೆಹಲಿ: ಕಾನೂನುಬಾಹಿರವಾಗಿ ಕಟ್ಟಡ ನಿರ್ಮಿಸಿದರೆ ಏನಾಗುತ್ತದೆ ಎಂಬುದಕ್ಕೆ ಅವಳಿ ಕಟ್ಟಡಗಳ ನೆಲಸಮವೇ (Twin Tower Demolition) ಉದಾಹರಣೆಯಾಗಿದೆ. ಅಕ್ರಮವಾಗಿ ಕಟ್ಟಡ ನಿರ್ಮಿಸಿದ ಸೂಪರ್‌ಟೆಕ್‌ಗೆ ನೂರಾರು ಕೋಟಿ ರೂ. ನಷ್ಟವಾಗಿದೆ. ಇದಲ್ಲದೆ, ಬೃಹತ್‌ ಕಟ್ಟಡಗಳಲ್ಲಿ ಫ್ಲ್ಯಾಟ್‌ ಖರೀದಿಗಾಗಿ ಮುಂಗಡ ಹಣ ನೀಡಿದವರಿಗೆ ವಾಪಸ್‌ ಸಿಗುತ್ತಾ ಎಂಬ ಪ್ರಶ್ನೆಯೂ ಮೂಡಿದೆ.

ಎರಡೂ ಕಟ್ಟಡಗಳಲ್ಲಿ ಸುಮಾರು ೮೫೦ ಫ್ಲ್ಯಾಟ್‌ಗಳಿದ್ದವು. ೭೧೧ ಗ್ರಾಹಕರು ಫ್ಲ್ಯಾಟ್‌ಗಳನ್ನು ಖರೀದಿಸಲು ಮುಂಗಡವಾಗಿ ಹಣ ನೀಡಿದ್ದರು. ಇದರಿಂದಲೇ ಸೂಪರ್‌ಟೆಕ್‌ ಕಂಪನಿಯು ೧೮೦ ಕೋಟಿ ರೂ. ಖರೀದಿಸಿದೆ. ಸುಪ್ರೀಂ ಕೋರ್ಟ್‌ ಆದೇಶದ ಪ್ರಕಾರ ಕಂಪನಿಯು ಈಗ ಮುಂಗಡವಾಗಿ ನೀಡಿದ ಮೊತ್ತಕ್ಕೆ ಶೇ.೧೨ರಷ್ಟು ಬಡ್ಡಿ ಹಾಕಿ ವಾಪಸ್‌ ನೀಡಬೇಕಿದೆ. ಆ ಮೂಲಕ ನೂರಾರು ಜನರಿಗೆ ನ್ಯಾಯ ಒದಗಿಸಲಾಗಿದೆ.

ಅವಳಿ ಕಟ್ಟಡಗಳ ನೆಲಸಮದಿಂದ ಸೂಪರ್‌ಟೆಕ್‌ ಕಂಪನಿಗೆ ಅಂದಾಜು ೫೦೦ ಕೋಟಿ ರೂ. ನಷ್ಟವಾಗಿದೆ ಎಂದು ತಿಳಿದುಬಂದಿದೆ. ನೆಲಸಮಕ್ಕೇ ೨೦ ಕೋಟಿ ರೂ. ವ್ಯಯಿಸಲಾಗಿದೆ. ಒಟ್ಟಿನಲ್ಲಿ, ೨೦೦೫ರಲ್ಲಿ ನಿರ್ಮಾಣವಾದ ಕಟ್ಟಡಗಳು ಪೂರ್ಣವಾಗಿ, ಖರೀದಿಸಿದವರು ನೆಲೆಸುವ ಮುನ್ನವೇ ನೆಲಸಮಗೊಂಡಿವೆ.

ಇದನ್ನೂ ಓದಿ | Twin Towers Demolition | 9 ಸೆಕೆಂಡ್‌ಗಳಲ್ಲಿ ನೋಯ್ಡಾದ ಅವಳಿ ಕಟ್ಟಡ ನೆಲಸಮ!

Exit mobile version