Site icon Vistara News

Narendra Modi: ‘ದೇಶದಲ್ಲಿ ಏನಾಗ್ತಿದೆ’, ವಿದೇಶದಿಂದ ಬಂದ ಕೂಡಲೇ ನಡ್ಡಾಗೆ ಮೋದಿ ಹೀಗೆ ಕೇಳಿದ್ದೇಕೆ?

Narendra Modi And JP Nadda

ನವದೆಹಲಿ: ಅಮೆರಿಕ ಹಾಗೂ ಈಜಿಪ್ಟ್‌ ಪ್ರವಾಸ ಮುಗಿಸಿಕೊಂಡು ಪ್ರಧಾನಿ ನರೇಂದ್ರ ಮೋದಿ (Narendra Modi) ಭಾರತಕ್ಕೆ ಆಗಮಿಸಿದ್ದಾರೆ. ಅಮೆರಿಕದಲ್ಲಿ ಅದ್ಧೂರಿ ಸ್ವಾಗತ, ಹಲವು ಒಪ್ಪಂದ, ಅಮೆರಿಕ ಸಂಸತ್‌ನಲ್ಲಿ ಭಾಷಣ, ಈಜಿಪ್ಟ್‌ನಲ್ಲೂ ವಿವಿಧ ಒಡಂಬಡಿಕೆ ಮಾಡಿಕೊಂಡು ಮೋದಿ ವಾಪಸಾಗಿದ್ದಾರೆ. ಹೀಗೆ, ದೇಶಕ್ಕೆ ವಾಪಸಾಗುತ್ತಲೇ ನರೇಂದ್ರ ಮೋದಿ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರಿಗೆ, “ದೇಶದಲ್ಲಿ ಏನಾಗುತ್ತಿದೆ” ಎಂಬುದಾಗಿ ಕೇಳಿದ್ದಾರೆ.

ನರೇಂದ್ರ ಮೋದಿ ಅವರು ಭಾರತಕ್ಕೆ ಆಗಮಿಸುತ್ತಲೇ ಜೆ.ಪಿ. ನಡ್ಡಾ ಅವರು ಸೇರಿ ಪಕ್ಷದ ಹಲವು ನಾಯಕರಿಗೆ, “ದೇಶದಲ್ಲಿ ಏನಾಗುತ್ತಿದೆ? ಎಲ್ಲ ಕೆಲಸಗಳು ಹೇಗೆ ಸಾಗುತ್ತಿವೆ” ಎಂಬುದಾಗಿ ಕೇಳಿದರು. ಇದಕ್ಕೆ ಪಕ್ಷದ ನಾಯಕರು, “ದೇಶದಲ್ಲಿ ಎಲ್ಲವೂ ಸುಗಮವಾಗಿ ನಡೆಯುತ್ತಿದೆ. ಕಳೆದ ಒಂಬತ್ತು ವರ್ಷದಲ್ಲಿ ಕೇಂದ್ರ ಸರ್ಕಾರ ಮಾಡಿದ ಸಾಧನೆಗಳನ್ನು ಪಕ್ಷದ ಮುಖಂಡರು ಜನರಿಗೆ ತಿಳಿಸುತ್ತಿದ್ದಾರೆ. ಜನ ಇದರಿಂದ ಖುಷಿಯಾಗಿದ್ದಾರೆ” ಎಂದು ತಿಳಿಸಿದರು ಎಂಬುದಾಗಿ ಬಿಜೆಪಿ ಸಂಸದ ಮನೋಜ್‌ ತಿವಾರಿ ಸುದ್ದಿಗಾರರಿಗೆ ತಿಳಿಸಿದರು.

ಮೋದಿಯನ್ನು ಸ್ವಾಗತಿಸಿದ ಬಿಜೆಪಿ ನಾಯಕರು

ಬಿಜೆಪಿಯ ಮತ್ತೊಬ್ಬ ಸಂಸದ ಪರ್ವೇಶ್‌ ವರ್ಮಾ ಕೂಡ ಈ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದರು. ಮೋದಿ ಅವರು ಆಗಮಿಸುತ್ತಲೇ ದೇಶದ ಬೆಳವಣಿಗೆಗಳು, ಜನರನ್ನು ಸಂಪರ್ಕಿಸುವ ಯೋಜನೆಯ ಜಾರಿ ಸೇರಿ ಹಲವು ವಿಷಯಗಳ ಕುರಿತು ಮಾಹಿತಿ ಪಡೆದರು. ಎಲ್ಲ ಕಾರ್ಯಗಳು ಸುಗಮವಾಗಿ ಸಾಗುತ್ತಿವೆ ಎಂಬುದನ್ನು ತಿಳಿದುಕೊಂಡು ಮೋದಿ ಅವರು ಮುಂದಿನ ಕಾರ್ಯಕ್ಕೆ ಅಣಿಯಾದರು ಎಂದು ವಿವರಿಸಿದರು.

ಇದನ್ನೂ ಓದಿ: PM Modi Visit US: ಮೋದಿ ಅಮೆರಿಕ ಪ್ರವಾಸದ ಎಫೆಕ್ಟ್, ಅಗ್ಗವಾಗಲಿವೆ ಕಡಲೆ, ಬೇಳೆಕಾಳು, ಸೇಬು!

ಆರು ದಿನಗಳ ವಿದೇಶ ಪ್ರವಾಸ ಮುಗಿಸಿಕೊಂಡು ನರೇಂದ್ರ ಮೋದಿ ಅವರು ದೆಹಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಅವರನ್ನು ಸ್ವಾಗತಿಸಲು ವಿದೇಶಾಂಗ ಖಾತೆ ಸಹಾಯಕ ಸಚಿವೆ ಮೀನಾಕ್ಷಿ ಲೇಖಿ, ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ, ದೆಹಲಿ ಸಂಸದರಾದ ಹರ್ಷವರ್ಧನ್‌, ಗೌತಮ್‌ ಗಂಭೀರ್‌ ಸೇರಿ ಹಲವರು ವಿಮಾನ ನಿಲ್ದಾಣಕ್ಕೆ ತೆರಳಿದ್ದರು. ಆಗ ಮೋದಿ ಅವರು ದೇಶದ ಬೆಳವಣಿಗೆಗಳ ಕುರಿತು ಪಕ್ಷದ ನಾಯಕರಿಂದ ತಿಳಿದುಕೊಂಡಿದ್ದಾರೆ.

ಕೈರೋದಲ್ಲಿ ಈಜಿಪ್ಟ್‌ ಅಧ್ಯಕ್ಷ ಅಬ್ದೆಲ್‌ ಫತ್ತಾಹ್‌ ಅಲ್‌-ಸಿಸಿ (Abdel Fattah al-Sisi) ಅವರು ತಮ್ಮ ರಾಷ್ಟ್ರದ ಅತ್ಯುನ್ನತ ನರೇಂದ್ರ ಮೋದಿ ಅವರಿಗೆ ಆರ್ಡರ್‌ ಆಫ್‌ ದಿ ನೈಲ್‌ ಪ್ರಶಸ್ತಿ ನೀಡಿ ಗೌರವಿಸಿದರು. ಅಮೆರಿಕದಲ್ಲೂ ಮೋದಿ ಅವರಿಗೆ ಉತ್ತಮ ಆತಿಥ್ಯ ದೊರೆತಿದೆ.

Exit mobile version