Site icon Vistara News

WhatsApp : ನಿಮ್ಮ ವಾಟ್ಸ್​​​ಆ್ಯಪ್​ನಲ್ಲಿ ಈ ಫೀಚರ್ ಇಲ್ಲವೇ? ತಕ್ಷಣ ಅಪ್​ಡೇಟ್​ ಮಾಡಿಕೊಳ್ಳಿ

Whats app message

ಬೆಂಗಳೂರು: ಜಾಗತಿಕವಾಗಿ ಅತ್ಯಂತ ಹೆಚ್ಚು ಬಳಕೆಯಲ್ಲಿರುವ ಮೆಸೇಜಿಂಗ್​ ಆ್ಯಪ್​ ವಾಟ್ಸ್​ಆ್ಯಪ್​ (WhatsApp) ತನ್ನ ಯೂಸರ್​ ಇಂಟರ್​ಫೇಸ್​ನಲ್ಲಿ (User Interface) ಗಮನಾರ್ಹ ಬದಲಾವಣೆ ಮಾಡಿದೆ. ಮೆಟಾ ಒಡೆತನದ ಮೆಸೇಜಿಂಗ್ ಸೇವೆಯ ಆ್ಯಂಡ್ರಾಯ್ಡ್​ ಫೋನ್​ಗಳಿಗೆ (Android Smartphones) ಮೇಲ್ಭಾಗದಲ್ಲಿರುವ ನಾಲ್ಕು ನ್ಯಾವಿಗೇಷನ್ ಟ್ಯಾಬ್ ಗಳನ್ನು ಕೆಳಭಾಗಕ್ಕೆ ತಂದಿದೆ. ಅಪ್​ಡೇಟ್​ ಆಗಿರುವ ಇಂಟರ್​ಫೇಸ್​ ಅನ್ನು ಕಳೆದ ಕೆಲವು ತಿಂಗಳುಗಳಿಂದ ಅಪ್ಲಿಕೇಶನ್​ನ ಬೀಟಾ ಆವೃತ್ತಿಯಲ್ಲಿ ಸಕ್ರಿಯಗೊಳಿಸಲಾಗಿತ್ತು. ಇದೀಗ ಎಲ್ಲಾ ಬಳಕೆದಾರರಿಗೆ ನೀಡಲಾಗಿದೆ. ಹೊಸ ವಿನ್ಯಾಸವು ಬಳಕೆದಾರರಿಗೆ ಫೋನ್ ಅನ್ನು ಒಂದು ಕೈಯಿಂದ ಬಳಸಲು ಅನುಕೂಲ ಮಾಡಿಕೊಡುತ್ತದೆ. ಒಂದು ವೇಳೆ ನಿಮ್ಮ ಫೋನ್​ನಲ್ಲಿ ಈ ಫೀಚರ್​ ಬಂದಿಲ್ಲವಾದರೆ ತಕ್ಸಣವೇ ಅಪ್​ಡೇಟ್ ಮಾಡಿಕೊಳ್ಳಿ.

ಆಂಡ್ರಾಯ್ಡ್​ ಫೋನ್​ಗಳಲ್ಲಿ ಹೊಸ ಬಾಟಮ್ ನ್ಯಾವಿಗೇಷನ್ ಬಾರ್ ಅನ್ನು ಹೊರತಂದಿರುವುದಾಗಿ ವಾಟ್ಸ್​ಆ್ಯಪ್​ ಎಕ್ಸ್​ನಲ್ಲಿ ಘೋಷಿಸಿದೆ. ಹಳೆಯ ಇಂಟರ್ಫೇಸ್​ನ ಚಿತ್ರಗಳನ್ನು ಪೋಸ್ಟ್ ಮಾಡಿದೆ. ಹಳೆ ಟ್ಯಾಬ್​ನಲ್ಲಿ ಕಮ್ಯುನಿಟಿ, ಚಾಟ್​, ಸ್ಟೇಟಸ್ ಹಾಗೂ ಆಯ್ಕೆಯನ್ನು ನೀಡಲಾಗಿತ್ತು. ಕೆಳಕ್ಕೆ ತರಲಾದ ಟ್ಯಾಬ್​ನಲ್ಲಿ ಚಾಟ್​, ಅಪ್​ಟೇಡ್​, ಕಮ್ಯುನಿಟಿ ಮತ್ತು ಕಾಲ್​ ಆಯ್ಕೆಯನ್ನು ನೀಡಲಾಗಿದೆ.

ಇದು ನಿರೀಕ್ಷಿ ಸಮಯದ ಅವಧಿಯಲ್ಲಿ ಆಂಡ್ರಾಯ್ಡ್​ ಆಧಾರಿತ ಪೋನ್​ಗಳ ವಾಟ್ಸ್​​ಆ್ಯಪ್​ ಇಂಟರ್ಫೇಸ್​ನಲ್ಲಿ ಅತ್ಯಂತ ಗಮನಾರ್ಹ ಬದಲಾವಣೆಗಳಲ್ಲಿ ಒಂದು. ಅಪ್ಲಿಕೇಶನ್​ ಮೇನ್​ ನ್ಯಾವಿಗೇಷನ್ ಟ್ಯಾಬ್​ಗಳನ್ನು ಹೆಬ್ಬೆರಳಿನ ಹತ್ತಿರವಾಗುವಂತೆ ಮಾಡಲಾಗಿದೆ. ಕೇವಲ ಒಂದು ಕೈಯಿಂದ ಬಳಸುವುದಾದರೂ ಅನುಕೂಲವಾಗಲಿದೆ. ನೀವು ಏನನ್ನಾದರೂ ಸರ್ಚ್​ ಮಾಡಬೇಕಾದರೆ ಸ್ಕ್ರೀನ್​ ಮೇಲ್ಭಾಗಕ್ಕೆ ಹೋಗಬೇಕಾಗುತ್ತದೆ.

ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಡಿಜಿಟಲ್‌ ಇಂಡಿಯಾ ಬಗೆಗೆ ಬಿಲ್‌ ಗೇಟ್ಸ್‌ ಪ್ರಶಂಸೆ ಸ್ಫೂರ್ತಿದಾಯಕ

ಬೀಟಾ ಚಾನೆಲ್​ನಲ್ಲಿ ತಿಂಗಳುಗಳ ಪರೀಕ್ಷೆಯ ನಂತರ ಕೆಳಗಿನ ನ್ಯಾವಿಗೇಷನ್ ಟ್ಯಾಬ್​ಗಳನ್ನು ಅಂತಿಮವಾಗಿ ಬಳಕೆದಾರರಿಗೆ ನೀಡಲಾಗಿದೆ. ಭವಿಷ್ಯದಲ್ಲಿ ಅಪ್ಲಿಕೇಶನ್​ ಇನ್ನಷ್ಟು ಫೀಚರ್​ಗಳನ್ನು ಸೇರಿಸುವ ಸುಳಿವನ್ನು ಇದು ನೀಡಿದೆ. ಭಾರತದಲ್ಲಿ ಯುನಿಫೈಡ್​ ಪೇಮೆಂಟ್ಸ್ ಇಂಟರ್ಫೇಸ್ (ಯುಪಿಐ) ಬಳಸಿ ವಾಟ್ಸ್​ಆ್ಯಪ್​ ಅಪ್ಲಿಕೇಶನ್ ಮೂಲಕ ಅಂತಾರಾಷ್ಟ್ರೀಯ ಹಣಕಾಸು ವರ್ಗಾವಣೆಮಾಡುವ ಫೀಚರ್ ಅನ್ನು ಮೆಟಾ ಅಭಿವೃದ್ಧಿ ಮಾಡುತ್ತಿದೆ ಎನ್ನಲಾಗಿದೆ.

ಮೆಸೇಜಿಂಗ್ ಸೇವೆಯು ಅಪ್ಲಿಕೇಶನ್​ಗೆ ಹೊಸ ಎಐ-ಚಾಲಿತ (ಕೃತಕ ಬುದ್ಧಿಮತ್ತೆ) ಫೀಚರ್​ಗಳನ್ನು ಸೇರಿಸುವ ಕೆಲಸ ಮಾಡುತ್ತಿದೆ. ಅಪ್ಲಿಕೇಶನ್​ನಲ್ಲಿ ಕೃತಕ ಬುದ್ಧಿಮತ್ತೆ (ಎಐ) ಬಳಸಿ ಸ್ಟಿಕ್ಕರ್​ಗಳನ್ನು ರಚಿಸಲು ಬಳಕೆದಾರರಿಗೆ ಅನುಕೂಲ ಮಾಡಿಕೊಡಲಿದೆ. ಅಂತೆಯೇ, ವಾಟ್ಸಾಪ್ ಇತ್ತೀಚೆಗೆ ಎಐ-ಚಾಲಿತ ಇಮೇಜ್ ಎಡಿಟಿಂಗ್ ವೈಶಿಷ್ಟ್ಯಗಳನ್ನು ಅಭಿವೃದ್ಧಿಪಡಿಸುತ್ತಿರುವುದು ಮತ್ತು ಸರ್ಚ್ ಬಾರ್ ಮೂಲಕ ಮೆಟಾ ಎಐ ಪ್ರಶ್ನೆಗಳನ್ನೂ ಕೇಳುವ ಸೇವೆಯನ್ನೂ ಅಭಿವೃದ್ಧಿ ಮಾಡುತ್ತಿದೆ.

Exit mobile version