Site icon Vistara News

LGBT community: ಯಾವ ಸಲಿಂಗಕಾಮಿಗೆ ಋತುಚಕ್ರವಿದೆ ಹೇಳಿ? ಸಚಿವೆ ಸ್ಮೃತಿ ಇರಾನಿ ಪ್ರಶ್ನೆ

Smriti Irani

Hugging In Delhi, Begging In Kerala, Thugging In Karnataka: Smriti Irani Attacks On Congress

ನವದೆಹಲಿ: ಇತ್ತೀಚೆಗಷ್ಟೇ ವೇತನ ಸಹಿತ ಮುಟ್ಟಿನ ರಜೆ (paid menstrual leave) ವಿರುದ್ಧ ಹೇಳಿಕೆ ನೀಡಿದ್ದ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ಮೃತಿ ಇರಾನಿ (Union Minister Smriti Irani) ಅವರು ಎಲ್‌ಜಿಬಿಟಿಕ್ಯೂಐಎ ಪ್ಲಸ್ (LGBTQIA+) ಸಮುದಾಯದ ಬಗ್ಗೆ ಮತ್ತೊಂದು ಆಕ್ಷೇಪಾರ್ಹ ಹೇಳಿಕೆಯನ್ನು ನೀಡಿದ್ದಾರೆ. ಕೇಂದ್ರ ಸರ್ಕಾರ ರಚಿಸುತ್ತಿರುವ ಮುಟ್ಟಿನ ನೈರ್ಮಲ್ಯ ನೀತಿಯಲ್ಲಿ ಎಲ್‌ಜಿಬಿಟಿಕ್ಯೂಐಎ ಪ್ಲಸ್ ಸಮುದಾಯ ಕೂಡ ಒಳಗೊಂಡಿದೆಯೇ ಎಂಬ ಪ್ರಶ್ನೆಗೆ ಸಚಿವೆ ಸ್ಮೃತಿ ಇರಾನಿ ಅವರು, ಗರ್ಭಾಶಯ ಇಲ್ಲದ ಯಾವ ಸಲಿಂಗ ಕಾಮಿಗೆ ಋತುಚಕ್ರವಿದೆ(Which gay man has menstrual cycle) ಎಂದು ಪ್ರಶ್ನಿಸಿದ್ದಾರೆ.

ಎಎನ್ಐ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಸ್ಮೃತಿ ಇರಾನಿ ಅವರು, ಮುಟ್ಟಿನ ನೈರ್ಮಲ್ಯ ನೀತಿಯಲ್ಲಿ ಎಲ್‌ಜಿಬಿಟಿಕ್ಯೂಐಎ ಪ್ಲಸ್ ಸಮುದಾಯದ ಸೇರಿದೆಯೇ ಎಂಬ ಪ್ರಶ್ನೆಯು ಗಮನ ಸೆಳೆಯಲು ಅಥವಾ ಪ್ರಚೋದಿಸಲು ಕೇಳಿದಂತಿತ್ತು ಎಂದು ಹೇಳಿದ್ದಾರೆ. ಮನೋಜ್ ಝಾ, ನಾನು ಎಲ್‌ಜಿಬಿಟಿಕ್ಯೂಐಎ ಸಮುದಾಯ ಮುಟ್ಟಿನ ನೈರ್ಮಲ್ಯವನ್ನು ಹೇಗೆ ಒದಗಿಸಬಹುದು ಎಂಬುದರ ಕುರಿತು ನಾನು ಉತ್ತರಿಸಲು ಬಯಸುತ್ತಾರೆ. ಸಲಿಂಗಕಾಮಿ ಪುರುಷರಿಗೆ ಇದು ಅನ್ವಯಿಸುತ್ತದೆಯೇ?” ಎಂದು ಸ್ಮೃತಿ ಇರಾನಿ ಕೇಳಿದರು.

ಎಲ್‌ಜಿಬಿಟಿಕ್ಯೂಐಎ ಸಮುದಾಯ ಎಂದರೆ ಲೆಸ್ಬಿಯನ್, ಗೇ, ದ್ವಿಲಿಂಗಿ, ಟ್ರಾನ್ಸ್ಜೆಂಡರ್ಸ್, ಕ್ವೀರ್, ಇಂಟರ್ಸೆಕ್ಸ್ ಮತ್ತು ಅಲೈಂಗಿಕನ ಸಂಕ್ಷಿಪ್ತ ರೂಪದಲ್ಲಿರುವ ‘+’ ಎಲ್ಲಾ ಗುರುತುಗಳನ್ನು ಸಮುದಾಯದಲ್ಲಿ ಸೇರಿಸಲಾಗಿದೆ ಎಂದು ಖಚಿತಪಡಿಸುತ್ತದೆ.

ಸ್ಮೃತಿ ಇರಾನಿ ಬೆಂಬಲಕ್ಕೆ ನಿಂತ ಕಂಗನಾ ರಣಾವತ್

ಮುಟ್ಟು (menstrual) ಎಂಬುದು ಅಂಗವೈಕಲ್ಯ ಅಲ್ಲ. ಹಾಗಾಗಿ ಅದು ದುಡಿಯುವ ಮಹಿಳೆಗೆ ವೇತನ ಸಹಿತ ರಜೆಗೆ ನೀತಿಯಾಗಬಾರದು(paid menstrual leave) ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ಮೃತಿ ಇರಾನಿ(Smriti Irani) ಹೇಳಿದ್ದರು. ಈ ಹೇಳಿಕೆಗೆ ದನಿಗೂಡಿಸಿರುವ ಬಾಲಿವುಡ್ ನಟಿ ಕಂಗನಾ ರಣಾವತ್(Kangana Ranaut), ಮಹಿಳೆಯರು ಯಾವಾಗಲೂ ಕೆಲಸ ಮಾಡುತ್ತಿದ್ದಾರೆ ಮತ್ತು ಅವರ ಕುಟುಂಬ ಅಥವಾ ಸಮುದಾಯ ಅಥವಾ ರಾಷ್ಟ್ರಕ್ಕೆ ಅವರ ಬದ್ಧತೆಯ ದಾರಿಯಲ್ಲಿ ಇದಾವುದೂ ಅಡ್ಡ ಬಂದಿಲ್ಲ. ಕೆಲಸ ಮಾಡುತ್ತಿರುವ ಮಹಿಳೆ ಎನ್ನುದವುದೇ ಒಂದು ದೊಡ್ಡು ಸುಳ್ಳು(Working woman is a myth). ವೇತನ ಸಹಿತ ಮಟ್ಟಿನ ರಜೆ ನೀಡುವ ಅಗತ್ಯ ಇಲ್ಲ ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.

ವರ್ಕಿಂಗ್ ವುಮನ್ ಎನ್ನುವುದೇ ದೊಡ್ಡ ಸುಳ್ಳು. ಪುರಾಣ, ಮನುಕುಲದ ಇತಿಹಾಸದಲ್ಲಿ ಒಬ್ಬ ಕೆಲಸ ಮಾಡದ ಮಹಿಳೆಯನ್ನು ತೋರಿಸಿ ನೋಡೋಣ. ಬೇಸಾಯದಿಂದ ಹಿಡಿದು ಮನೆಕೆಲಸಗಳವರೆಗೆ ಮಕ್ಕಳನ್ನು ಬೆಳೆಸುವವರೆಗೆ, ಮಹಿಳೆಯರು ಯಾವಾಗಲೂ ಕೆಲಸ ಮಾಡುತ್ತಿದ್ದಾರೆ. ಅವರ ಕುಟುಂಬಗಳು ಅಥವಾ ಸಮುದಾಯ ಅಥವಾ ರಾಷ್ಟ್ರಕ್ಕೆ ಅವರ ಬದ್ಧತೆಗೆ ಏನೂ ಅಡ್ಡಿಯಾಗುವುದಿಲ್ಲ. ಇದು ಕೆಲವು ನಿರ್ದಿಷ್ಟ ವೈದ್ಯಕೀಯ ಸ್ಥಿತಿಯ ಹೊರತು, ಮಹಿಳೆಯರಿಗೆ ಪಿರಿಯಡ್ಸ್‌ಗಾಗಿ ಪಾವತಿಸಿದ ರಜೆಗಳ ಅಗತ್ಯವಿಲ್ಲ, ದಯವಿಟ್ಟು ಅರ್ಥಮಾಡಿಕೊಳ್ಳಿ. ಇದು ಮುಟ್ಟು ಅಷ್ಟೇ.ಕೆಲವು ಅನಾರೋಗ್ಯ ಅಥವಾ ಅಂಗವೈಕಲ್ಯವಲ್ಲ ಎಂದು ನಟಿ ಕಂಗನಾ ರಣಾವತ್ ಹೇಳಿದ್ದಾರೆ.

ಸಚಿವ ಸ್ಮೃತಿ ಇರಾನಿ ಹೇಳಿದ್ದೇನು?

ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಸ್ಮೃತಿ ಇರಾನಿ, ಋತುಸ್ರಾವದ ಮಹಿಳೆಯಾಗಿ ನಾನು ಹೇಳುತ್ತಿದ್ದೇನೆ, ಮಟ್ಟು ಮತ್ತು ಋತುಚಕ್ರವು ಅಂಗವೈಕಲ್ಯವಲ್ಲ, ಇದು ಮಹಿಳೆಯರ ಜೀವನ ಪಯಣದ ಸಹಜ ಭಾಗವಾಗಿದೆ. ಮಹಿಳೆಯರಿಗೆ ಸಮಾನತೆಯನ್ನು ನಿರಾಕರಿಸುವ ವಿಷಯಗಳನ್ನು ನಾವು ಪ್ರಸ್ತಾಪಿಸಬಾರದು. ಋತುಸ್ರಾವವಾಗದ ಯಾರಾದರೂ ಮುಟ್ಟಿನ ಬಗ್ಗೆ ನಿರ್ದಿಷ್ಟ ದೃಷ್ಟಿಕೋನವನ್ನು ಹೊಂದಿದ್ದಾರೆಂದು ಮಾತ್ರಕ್ಕೆ ವಿರೋಧಿಸುವುದು ಸರಿಯಲ್ಲ ಎಂದು ಹೇಳಿದ್ದರು.

ಈ ಸುದ್ದಿಯನ್ನೂ ಓದಿ: Pope Francis: ಸಲಿಂಗ ಅಪರಾಧವಲ್ಲ, ನಾವೆಲ್ಲರೂ ದೇವರ ಮಕ್ಕಳು: ಪೋಪ್ ಫ್ರಾನ್ಸಿಸ್

Exit mobile version