Site icon Vistara News

Rahul Gandhi: ಅಲ್ಲಿ ಮಣಿಪುರ ಹೊತ್ತಿ ಉರಿಯುತ್ತಿದ್ದರೆ, ಇಲ್ಲಿ ಪ್ರಧಾನಿ ಹಲ್ಲು ಕಿರಿಯುತ್ತಿದ್ದರು! ಮೋದಿಗೆ ರಾಗಾ ಗುದ್ದು

Rahul Gandhi In Parliament

ನವದೆಹಲಿ: ಮಣಿಪುರವು (Manipur Violence) ಕಳೆದ ನಾಲ್ಕು ತಿಂಗಳಿಂದ ಜನಾಂಗೀಯ ಹಿಂಸಾಚಾರದಿಂದ ತತ್ತರಿಸುತ್ತಿದ್ದರೆ, ಇಲ್ಲಿ ಸಂಸತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಹಲ್ಲು ಕಿರಿಯುತ್ತಾ, ಜೋಕ್ ಹೇಳುತ್ತಾ (Modi Joking in Parliament) ಕುಳಿತಿದ್ದರು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Congress Leader Rahul Gandhi ಅವರು ಪ್ರಧಾನಿ ಮೋದಿ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಪ್ರತಿಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯದ ಕುರಿತು ಗುರುವಾರ ಅಂತಿಮ ಚರ್ಚೆ ನಡೆಯಿತು. ಈ ವೇಳೆ, ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಿದ್ದರು. ಈ ವೇಳೆ, ಪ್ರತಿಪಕ್ಷಗಳ ನಿರ್ಣಯಕ್ಕೆ ಸೋಲಾಯಿತು.

ಶುಕ್ರವಾರ ದಿಲ್ಲಿಯಲ್ಲಿ ಕಾಂಗ್ರೆಸ್ ಪಕ್ಷದ ಪ್ರಧಾನ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ರಾಹುಲ್ ಗಾಂಧಿ ಅವರು, ಪ್ರಧಾನಿ ಮೋದಿ ಅವರಿಗೆ ಮಣಿಪುರ ಹೊತ್ತಿ ಉರಿಯಬೇಕಾಗಿದೆ. ಅದಕ್ಕೆ ಅವರು ಕಲ್ಪಿಸುತ್ತಿದ್ದಾರೆ. ಒಂದು ವೇಳೆ, ಮೋದಿ ಸರ್ಕಾರಕ್ಕೆ ಈ ಹಿಂಸೆಯನ್ನು ತಡೆಯುವ ಇಚ್ಛೆ ಇದ್ದರೆ ಅದಕ್ಕೆ ಬೇಕಾಗುವಷ್ಟು ಸಾಧನಗಳ ಸರ್ಕಾರದ ಬಳಿಯೇ ಇವೆ. ಸರ್ಕಾರ ಮನಸ್ಸು ಮಾಡಿದರೆ ತಕ್ಷಣವೇ ಹಿಂಸಾಚಾರವನ್ನು ತಡೆಯಬಹುದು. ಆದರೆ, ಸರ್ಕಾರ ಅದು ಬೇಕಾಗಿಲ್ಲ ಎಂದು ಗಂಭೀರ ಆರೋಪ ಮಾಡಿದರು.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸುದ್ದಿಗೋಷ್ಠಿ

ಮಣಿಪುರದಲ್ಲಿ ಮಹಿಳೆಯರು, ಮಕ್ಕಳು ಸಾಯುತ್ತಿದ್ದಾರೆ. ಮಹಿಳೆಯರ ಮೇಲೆ ದೌರ್ಜನ್ಯ ಎಸಲಾಗುತ್ತಿದೆ, ಅತ್ಯಾಚಾರ ಮಾಡಲಾಗುತ್ತಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ತಿನಲ್ಲಿ ಕುಳಿತು ನಗುತ್ತಿದ್ದಾರೆ. ಇದು ರಾಹುಲ್ ಗಾಂಧಿ ಅಥವಾ ಕಾಂಗ್ರೆಸ್ ಪಕ್ಷಕ್ಕೆ ಸಂಬಂಧಿಸಿದ್ದಲ್ಲ. ಅಥವಾ ಇದು ಪ್ರತಿಪಕ್ಷಗಳಿಗೆ ಸಂಬಂಧಿಸಿದ್ದಲ್ಲ. ಇದು ಭಾರತಕ್ಕೆ ಸಂಬಂಧಿಸಿದ್ದು. ಇದು ನಮ್ಮ ದೇಶಕ್ಕೆ ಸಂಬಂಧಿಸಿದ್ದು. ರಾಜ್ಯವನ್ನು ಸಂಪೂರ್ಣವಾಗಿ ನಾಶ ಮಾಡಲಾಗಿದೆ. ಒಡೆದು ಆಳುವ ನೀತಿ ಮತ್ತು ಬೆಂಕಿ ಹಚ್ಚುವ ಬಿಜೆಪಿಯ ರಾಜಕೀಯದಿಂದಾಗಿ ಮಣಿಪುರ ಸರ್ವನಾಶವಾಗುತ್ತಿದೆ ಎಂದು ರಾಹುಲ್ ಗಾಂಧಿ ಅವರು ಹೇಳಿದರು.

ನಾನು ನಿನ್ನೆ ಎರಡು ಗಂಟೆಗಳ ಕಾಲ ಸಂಸತ್ತಿನಲ್ಲಿ ನಗುವುದು, ತಮಾಷೆ ಮಾಡುವುದು ಮತ್ತು ಘೋಷಣೆಗಳನ್ನು ಕೂಗುವುದನ್ನು ನಾನು ನೋಡಿದೆ. ಪ್ರಧಾನಿ ಒಂದು ಸಾಲು ಹೇಳುತ್ತಾರೆ ಮತ್ತು ಬಿಜೆಪಿ (ನಾಯಕರು) ಮತ್ತೊಂದು ಘೋಷಣೆ ಕೂಗುತ್ತಾರೆ. ಆದರೆ, ಪ್ರಧಾನಿ ಮುಖ್ಯ ಸಮಸ್ಯೆಯನ್ನು ಮರೆತಿದ್ದಾರೆ. ಮಣಿಪುರ ರಾಜ್ಯವು ಹೊತ್ತಿ ಉರಿಯುತ್ತಿದೆ ರಾಹುಲ್ ಗಾಂಧಿ ಅವರು ಹೇಳಿದರು. ದೇಶದ ಒಂದು ರಾಜ್ಯವು ಹೊತ್ತಿ ಉರಿಯುತ್ತಿರುವಾಗ ಸಂಸತ್ತಿನಲ್ಲಿ ಜೋಕ್ ಕಟ್ ಮಾಡುವುದು, ಎರಡು ಗಂಟೆಗಳ ಕಾಲ ಮತ್ತೊಬ್ಬರನ್ನು ಹೀಯಾಳಿಸುವುದು ಪ್ರಧಾನಿಯಾದವರಿಗೆ ಸಲ್ಲುವುದಿಲ್ಲ ಎಂದು ಹೇಳಿದರು.

ಮಣಿಪುರದಲ್ಲಿ ಭಾರತ ಮಾತೆ ಹತ್ಯೆ-ರಾಹುಲ್ ಗಾಂಧಿ

ಅನರ್ಹತೆ ರದ್ದಾದ ಬಳಿಕ ಬುಧವಾರ ಮೊದಲ ಬಾರಿಗೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ಅವರು ಸಂಸತ್‌ನಲ್ಲಿ ಭಾಷಣ ಮಾಡಿದ್ದು, ಮಣಿಪುರ ವಿಚಾರಕ್ಕೆ (Manipur Violence) ಸಂಬಂಧಿಸಿದಂತೆ ಅವರು ನೀಡಿದ ಹೇಳಿಕೆಯು ಕೋಲಾಹಲ ಸೃಷ್ಟಿಸಿತು. “ಮಣಿಪುರದಲ್ಲಿ ಭಾರತ ಮಾತೆಯ ಹತ್ಯೆಯಾಗಿದೆ. ಮಣಿಪುರದಲ್ಲಿ ಭಾರತವನ್ನೇ ಹತ್ಯೆಗೈಯಲಾಗಿದೆ” ಎಂದು ರಾಹುಲ್‌ ಗಾಂಧಿ ಹೇಳಿದರು. ಇದಕ್ಕೆ ಬಿಜೆಪಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಇದರಿಂದಾಗಿ ಸಂಸತ್ತಿನಲ್ಲಿ ಗಲಾಟೆ ನಡೆಯಿತು.

ಈ ಸುದ್ದಿಯನ್ನೂ ಓದಿ: No Confidence Motion: ಮಣಿಪುರ ನಮ್ಮ ಅವಿಭಾಜ್ಯ ಅಂಗ ಎಂದ ಮೋದಿ; ಅವಿಶ್ವಾಸ ನಿರ್ಣಯ ಗೆದ್ದ ಪ್ರಧಾನಿ

“ಮಣಿಪುರದಲ್ಲಿ ಜನರ ಧ್ವನಿಯನ್ನು ಹುದುಗಿಸಲಾಗಿದೆ. ಇದರೊಂದಿಗೆ ಮಣಿಪುರದಲ್ಲಿ ಭಾರತವನ್ನು ಹತ್ಯೆ ಮಾಡಲಾಗಿದೆ. ನೀವು ದೇಶ ಭಕ್ತರಲ್ಲ, ನೀವು ದೇಶದ್ರೋಹಿಗಳು. ಇದೇ ಕಾರಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮಣಿಪುರಕ್ಕೆ ತೆರಳಲಿಲ್ಲ. ಮಣಿಪುರದಲ್ಲಿ ಹಿಂದುಸ್ಥಾನದ ಕಗ್ಗೊಲೆಯಾಗಿದೆ. ನೀವು ಭಾರತ ಮಾತೆಯನ್ನು ರಕ್ಷಿಸುವವರಲ್ಲ, ನೀವು ಹತ್ಯೆ ಮಾಡುವವರು” ಎಂದು ರಾಹುಲ್‌ ಗಾಂಧಿ ಹೇಳಿದರು. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ ಸದಸ್ಯರು, “ನಿಮಗೆ ನಾಚಿಕೆಯಾಗಬೇಕು” ಎಂದು ತಿರುಗೇಟು ನೀಡಿದರು.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version