Site icon Vistara News

Delhi Mayor Shelly Oberoi: ಯಾರು ಈ ದಿಲ್ಲಿ ಮೇಯರ್ ಶೆಲ್ಲಿ ಒಬೆರಾಯ್? ರಾಜಕೀಯಕ್ಕೆ ಬರುವ ಮುಂಚೆ ಏನಾಗಿದ್ದರು?

Who is Delhi Mayor Shelly Oberoi?

ನವದೆಹಲಿ: ದಿಲ್ಲಿಯ ನೂತನ ಮೇಯರ್ ಆಗಿ ಆಮ್ ಆದ್ಮಿ ಪಕ್ಷ(ಆಪ್‌)ದ ಸದಸ್ಯೆ ಶೆಲ್ಲಿ ಒಬೆರಾಯ್ ಅವರು ಭರ್ಜರಿ ಜಯದೊಂದಿಗೆ ಆಯ್ಕೆಯಾಗಿದ್ದಾರೆ(Delhi Mayor Shelly Oberoi). 39 ವರ್ಷದ ಶೆಲ್ಲಿ ದಿಲ್ಲಿ ಮಹಾನಗರ ಪಾಲಿಕೆಯ ಪಟೇಲ್ ‌ನಗರದ ವಾರ್ಡ್ 86 ಅನ್ನು ಪ್ರತಿನಿಧಿಸುತ್ತಾರೆ. ನೂತನ ಮೇಯರ್ ಆಗುತ್ತಿದ್ದಂತೆ ಶೆಲ್ಲಿ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ನಿನ್ನೆಯವರೆಗೆ ಅಪರಿಚಿತರಾಗಿದ್ದ ಅವರೀಗ ಜನಪ್ರಿಯತೆಯ ತುದಿಗೆ ಹೋಗಿದ್ದಾರೆ.

ಶೆಲ್ಲಿ ಒಬೆರಾಯ್ ಮತ ಚಲಾಯಿಸಿದ ಕ್ಷಣದ ಟ್ವೀಟ್…

ಯಾರು ಈ ಶೆಲ್ಲಿ ಒಬೆರಾಯ್?

ಸದ್ಯಕ್ಕೆ ಎಲ್ಲರೂ ಕೇಳುತ್ತಿರುವ ಪ್ರಶ್ನೆ ಒಂದೇ- ಯಾರು ಈ ಶೆಲ್ಲಿ ಒಬೆರಾಯ್? 39 ವರ್ಷದ ಶೆಲ್ಲಿ ಅವರು ರಾಜಕೀಯಕ್ಕೆ ಬರುವುದಕ್ಕಿಂತಲೂ ಮುಂಚೆ ದಿಲ್ಲಿ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಸಹಾಯಕ ಪ್ರೊಫೆಸರ್ ಆಗಿದ್ದರು. ಅಲ್ಲದೇ, ಇಂಡಿಯನ್ ಕಾಮರ್ಸ್ ಅಸೋಶಿಯೇಷನ್‌ನ ಆಜೀವ ಸದಸ್ಯರೂ ಹೌದು. ಇಂದಿರಾ ಗಾಂಧಿ ನ್ಯಾಷನಲ್ ಓಪನ್ ವಿಶ್ವವಿದ್ಯಾಲಯ(IGNOU)ಯ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್‌ನಿಂದ ತತ್ವಜ್ಞಾನದಲ್ಲಿ ಡಾಕ್ಟರೇಟ್ ಪಡೆದುಕೊಂಡಿದ್ದಾರೆ. ದೆಹಲಿ ವಿಶ್ವವಿದ್ಯಾನಿಲಯದ ಜಾಂಕಿ ದೇವಿ ಮೆಮೋರಿಯಲ್ ಕಾಲೇಜಿನಲ್ಲಿ ಅವರು ತಮ್ಮ ಬಿಕಾಂ ಪದವಿಯನ್ನು ಪೂರ್ಣಗೊಳಿಸಿದರು.

ಶೆಲ್ಲಿಗೆ ಹಲವು ಪ್ರಶಸ್ತಿ

ಶೆಲ್ಲಿ ಒಬೆರಾಯ್ ಅವರು, ವಿವಿಧ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಸಂಶೋಧನಾ ಪೇಪರ್ ಮಂಡಿಸಿ, ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ICA ಸಮ್ಮೇಳನದಲ್ಲಿ ಚಿನ್ನದ ಪದಕವನ್ನು (ಪ್ರೊ ಮನುಭಾಯ್ ಶಾ ಪ್ರಶಸ್ತಿ) ಗೆದ್ದಿದ್ದಾರೆ.

ಇದನ್ನೂ ಓದಿ: Delhi Mayoral Poll: ಆಪ್‌ನ ಶೆಲ್ಲಿ ಒಬೆರಾಯ್ ದಿಲ್ಲಿಯ ನೂತನ ಮೇಯರ್, ಗೂಂಡಾಗಳಿಗೆ ಸೋಲಾಯಿತು ಎಂದ ದಿಲ್ಲಿ ಸಿಎಂ ಕೇಜ್ರಿವಾಲ್

ರಾಜಕೀಯಕ್ಕೆ ಬಂದಿದ್ದು ಯಾವಾಗ?

ಶೈಕ್ಷಣಿಕ ಕ್ಷೇತ್ರದಲ್ಲಿ ನಿರತವಾಗಿದ್ದ ಶೆಲ್ಲಿ ಒಬೆರಾಯ್ ಅವರು 2013ರಲ್ಲಿ ಆಮ್ ಆದ್ಮಿ ಪಾರ್ಟಿಯ ಸೇರಿ, ಆ ಮೂಲಕ ರಾಜಕೀಯಕ್ಕೆ ಎಂಟ್ರಿಕೊಟ್ಟರು. 2020ರಲ್ಲಿ ಆಪ್ ಮಹಿಳಾ ಘಟಕದ ಉಪಾಧ್ಯಕ್ಷೆಯಾಗಿ ಆಯ್ಕೆಯಾದರು. ಎಂಸಿಡಿ ಎಲೆಕ್ಷನ್‌ನಲ್ಲಿ ತಮ್ಮ ಪ್ರತಿಸ್ಪರ್ಧಿ ದೀಪಾಲಿ ಕುಮಾರಿ ಅವರನ್ನು 269 ಮತಗಳ ಅಂತದರಿಂದ ಸೋಲಿಸಿ ಪಾಲಿಕೆಗೆ ಪ್ರವೇಶ ಪಡೆದಿದ್ದರು. ಇದೀಗ ಬಿಜೆಪಿಯ ರೇಖಾ ಗುಪ್ತಾ ಅವರನ್ನು ಸೋಲಿಸಿ, ದಿಲಿಯ ಮಹಿಳಾ ಮೇಯರ್ ಆಗಿದ್ದಾರೆ.

ಶೆಲ್ಲಿ ಒಬೆರಾಯ್ ಅವರ ಟ್ವೀಟ್…

Exit mobile version