Site icon Vistara News

Madhavi Lata: ಓವೈಸಿ ವಿರುದ್ಧ ಹಿಂದು ಸಿಂಹಿಣಿಗೆ ಟಿಕೆಟ್‌ ಕೊಟ್ಟ ಬಿಜೆಪಿ; ಯಾರಿವರು ಮಾಧವಿ?

Election Results 2024

Election Results 2024: BJP's Madhavi Latha Leading In Early Trends Against Asaduddin Owaisi

ಹೈದರಾಬಾದ್:‌ ಲೋಕಸಭೆ ಚುನಾವಣೆ (Lok Sabha Election) ಹಿನ್ನೆಲೆಯಲ್ಲಿ ಬಿಜೆಪಿಯು 195 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದು, ದೇಶದ ಘಟಾನುಘಟಿ ಅಭ್ಯರ್ಥಿಗಳ ವಿರುದ್ಧ ಘಟಾನುಘಟಿ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಿದೆ. ಕೇರಳದ ತಿರುವನಂತಪುರಂ ಕ್ಷೇತ್ರದಲ್ಲಿ ಬಿಜೆಪಿಯ ರಾಜೀವ್‌ ಚಂದ್ರಶೇಖರ್‌ (Rajeev Chandrashekhar) ಅವರಿಗೆ ಟಿಕೆಟ್‌ ನೀಡಲಾಗಿದ್ದು, ಕಾಂಗ್ರೆಸ್‌ನ ಶಶಿ ತರೂರ್‌ (Shashi Tharoor) ಅವರಿಗೆ ತೀವ್ರ ಸ್ಪರ್ಧೆ ಎದುರಾಗಿದೆ. ಅದರಲ್ಲೂ, ಹೈದರಾಬಾದ್‌ ಲೋಕಸಭೆ ಕ್ಷೇತ್ರದಲ್ಲಿ ಹಿಂದು ಫೈರ್‌ಬ್ರ್ಯಾಂಡ್‌ ಡಾ. ಮಾಧವಿ ಲತಾ ಕೊಂಪೆಲ್ಲ (Madhavi Latha Kompella) ಅವರಿಗೆ ಟಿಕೆಟ್‌ ನೀಡಲಾಗಿದೆ. ಇದು ಎಐಎಂಐಎಂ ಮುಖ್ಯಸ್ಥ, ಹಾಲಿ ಸಂಸದ ಅಸಾದುದ್ದೀನ್‌ ಓವೈಸಿ (Asaduddin Owaisi) ಅವರಿಗೆ ಬಿಜೆಪಿ ಒಡ್ಡಿರುವ ಬಹುದೊಡ್ಡ ಸವಾಲು ಎಂದೇ ಹೇಳಲಾಗುತ್ತಿದೆ.

ಹಿಂದು ಧರ್ಮದ ಕುರಿತು ಪ್ರಖರವಾಗಿ ಮಾತನಾಡುವ, ಹೈದರಾಬಾದ್‌ನಲ್ಲಿ ಎಐಎಂಐಎಂ ಪಕ್ಷದ ವೈಫಲ್ಯಗಳನ್ನು ತೋರಿಸುವ ಛಾತಿ ಹೊಂದಿರುವ ಡಾ. ಮಾಧವಿ ಲತಾ ಕೊಂಪೆಲ್ಲ ಅವರು ಹಿಂದು ಫೈರ್‌ ಬ್ರ್ಯಾಂಡ್‌ ಎನಿಸಿದ್ದಾರೆ. ಇವರಿಗೆ ಅಚ್ಚರಿಯ ರೀತಿಯಲ್ಲಿ ಬಿಜೆಪಿಯು ಹೈದರಾಬಾದ್‌ ಲೋಕಸಭೆ ಕ್ಷೇತ್ರದಿಂದ ಟಿಕೆಟ್‌ ನೀಡಿದೆ. ಹಾಗಾಗಿ, ಈ ಬಾರಿ ಹೈದರಾಬಾದ್‌ನಲ್ಲಿ ಡಾ. ಮಾಧವಿ ಲತಾ ಕೊಂಪೆಲ್ಲ ಅವರು ಅಸಾದುದ್ದೀನ್‌ ಓವೈಸಿ ಅವರಿಗೆ ತೀವ್ರ ಪೈಪೋಟಿ ನೀಡುವುದು ನಿಶ್ಚಿತ ಎಂದೇ ಹೇಳಲಾಗುತ್ತಿದೆ.

ಯಾರಿವರು ಮಾಧವಿ ಲತಾ?

ರಾಜಕೀಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಮಾಧವಿ ಲತಾ ಅವರು ಬಹುಮುಖ ಪ್ರತಿಭೆ ಎನಿಸಿದ್ದಾರೆ. ವಿರಿಂಚಿ ಆಸ್ಪತ್ರೆಯ ಅಧ್ಯಕ್ಷೆಯಾಗಿರುವ ಇವರು ಉದ್ಯಮದ ಜತೆಗೆ ಸಮಾಜಮುಖಿಯಾಗಿ ಕೆಲಸ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಬೋಧನೆ, ಆರೋಗ್ಯ ಸೇವೆ ಹಾಗೂ ಆಹಾರ ವಿತರಣೆಯ ಮೂಲಕ ಇವರು ಜನಮಾನಸದಲ್ಲಿ ಜಾಗ ಪಡೆದಿದ್ದಾರೆ. ಭರತನಾಟ್ಯ ಪ್ರವೀಣೆಯೂ ಆಗಿರುವ ಇವರು ಹಿಂದು ಧರ್ಮದ ಕುರಿತು ಮಾಡುವ ಭಾಷಣಗಳು ಸಾಮಾಜಿಕ ಜಾಲತಾಣಗಳಲ್ಲಿ ಇವರಿಗೆ ಹೆಚ್ಚು ಅಭಿಮಾನಿಗಳನ್ನು ನೀಡಿದೆ.

ಇದನ್ನೂ ಓದಿ: Harsh Vardhan: ಬಿಜೆಪಿ ಟಿಕೆಟ್‌ ನಿರಾಕರಣೆ; ರಾಜಕೀಯವನ್ನೇ ತೊರೆದ ಹರ್ಷವರ್ಧನ್!

ತ್ರಿವಳಿ ತಲಾಕ್‌ ವಿರುದ್ಧ ಹೋರಾಟ

ಮುಸ್ಲಿಂ ಮಹಿಳೆಯರಿಗೆ ಕಂಟಕವಾಗಿದ್ದ ತ್ರಿವಳಿ ತಲಾಕ್‌ ವಿರುದ್ಧ ಮಾಧವಿ ಲತಾ ಅವರು ಹೋರಾಟ ನಡೆಸಿದ್ದರು. ಅದರಲ್ಲೂ, ಕೇಂದ್ರ ಸರ್ಕಾರವು ತ್ರಿವಳಿ ತಲಾಕ್‌ಅನ್ನು ಕೇಂದ್ರ ಸರ್ಕಾರವು ರದ್ದುಗೊಳಿಸಿದ ಬಳಿಕ ಅಸಾದುದ್ದೀನ್‌ ಓವೈಸಿ ಅವರು ಇದನ್ನು ಅಸಾಂವಿಧಾನಿಕ ಎಂದು ಕರೆದಿದ್ದರು. ಆಗ, ತ್ರಿವಳಿ ತಲಾಕ್‌ ಕುರಿತು ಜನರಿಗೆ ತಿಳಿವಳಿಕೆ, ಜಾಗೃತಿ ಮೂಡಿಸುವ ಕುರಿತು ಮಾಧವಿ ಲತಾ ಅವರು ಅಭಿಯಾನ ಆರಂಭಿಸಿದ್ದರು. ಆಗಲೇ ಅಸಾದುದ್ದೀನ್‌ ಓವೈಸಿ ಅವರಿಗೆ ಮಾಧವಿ ಲತಾ ಸೆಡ್ಡು ಹೊಡೆದಿದ್ದರು. ಈಗ ಅವರಿಗೆ ಬಿಜೆಪಿ ಟಿಕೆಟ್‌ ನೀಡಿದ್ದು, ಚುನಾವಣೆಯ ಕುತೂಹಲ ಜಾಸ್ತಿಯಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version