Site icon Vistara News

Satnam Singh Sandhu: ಯಾರಿದು ರಾಜ್ಯಸಭೆಗೆ ನಾಮನಿರ್ದೇಶನಗೊಂಡ ಸತ್ನಮ್ ಸಿಂಗ್ ಸಂಧು?

Who is Satnam Singh Sandhu?

ನವದೆಹಲಿ: ದೇಶದ ಪ್ರಮುಖ ಶಿಕ್ಷಣ ತಜ್ಞರಲ್ಲಿ (educationist) ಒಬ್ಬರಾಗಿರುವ ಸತ್ನಮ್ ಸಿಂಗ್ ಸಂಧು (Satnam Singh Sandhu) ಅವರನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು (rashtrapati draupadi murmu) ಅವರು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದ್ದಾರೆ(nominated to Rajya Sabha). ಭಾರತದ ಸಂವಿಧಾನದ 80 ನೇ ವಿಧಿಯ(1)ನೇ ವಿಧಿಯ (1) ಉಪ-ಕಲಂ (ಎ) ಮೂಲಕ ನೀಡಲಾದ ಅಧಿಕಾರಗಳ ಅನುಸಾರ ರಾಷ್ಟ್ರಪತಿಗಳು ಸತ್ನಮ್ ಸಿಂಗ್ ಸಂಧು ಅವರನ್ನು ನಾಮನಿರ್ದೇಶನ ಮಾಡಿದ್ದಾರೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ರಾಜ್ಯಸಭೆಗೆ ನಾಮನಿರ್ದೇಶನಗೊಂಡ ಸತ್ನಮ್ ಸಿಂಗ್ ಸಂಧು ಅವರಿಗೆ ರಾಜ್ಯಸಭೆಯ ಚೇರ್ಮನ್ನರೂ ಆಗಿರುವ ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರು ಸ್ವಾಗತ ಕೋರಿದ್ದಾರೆ. ಸತ್ನಮ್ ಸಿಂಗ್ ಸಂಧು ಅವರನ್ನು ನಾನು ರಾಜ್ಯಸಭೆಗೆ ಸ್ವಾಗತಿಸುತ್ತೇನೆ. ಸಮುದಾಯ ಸೇವೆಯಲ್ಲಿನ ಅವರ ಹೆಚ್ಚುಗಾರಿಕೆ ಮತ್ತು ಶಿಕ್ಷಣದೆಡೆಗಿನ ಅವರ ಬದ್ಧತೆಯು, ನಾವೀನ್ಯತೆ ಮತ್ತು ಕಲಿಕೆಯು ರಾಜ್ಯಸಭೆಯ ಸಂಪನ್ಮೂಲಕ್ಕೆ ದೊಡ್ಡ ಬಲ ನೀಡಲಿದೆ. ಅವರ ರಾಜ್ಯಸಭೆ ಅವಧಿಗೆ ನಾನು ಶುಭಾಶಯ ಕೋರುತ್ತೇನೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಸತ್ನಮ್ ಸಿಂಗ್ ಸಂಧು ಅವರಿಗೂ ಶುಭಾಶಯ ಕೋರಿದ್ದಾರೆ.

ಯಾರಿದು ಸತ್ನಮ್ ಸಿಂಗ್ ಸಂಧು?

ದೇಶದ ಪ್ರಮುಖ ಶಿಕ್ಷಣತಜ್ಞರಲ್ಲಿ ಸತ್ನಮ್ ಸಿಂಗ್ ಸಂಧು ಅವರು ಒಬ್ಬರಾಗಿದ್ದಾರೆ. ಪಂಜಾಬ್ ರೈತನ ಪುತ್ರರಾಗಿರುವ ಸತ್ನಮ್ ಅವರು, ಶಿಕ್ಷಣ ತಜ್ಞರೂ ಮಾತ್ರವಲ್ಲದೇ ಕೃಷಿಕರೂ ಹೌದು. ಸತ್ನಮ್ ಸಿಂಗ್ ಸಂಧು ಅವರು 2001ರಲ್ಲಿ ಮೋಹಾಲಿಯಲ್ಲಿ ಚಂಡೀಗಢ ಗ್ರೂಪ್ ಆಫ್ ಕಾಲೇಜ್‌(ಸಿಜಿಸಿ) ಆರಂಭಿಸಿದರು. 2012ರಲ್ಲಿ ಚಂಡೀಗಢ ವಿಶ್ವವಿದ್ಯಾಲಯವನ್ನು ಶುರು ಮಾಡಿದರು.

ಅವರ ಜೀವನವು ಆರಂಭದಲ್ಲಿ ಕಷ್ಟದಾಯಕವಾಗಿತ್ತು. ಬಾಲ್ಯದಲ್ಲಿ ಅವರು ಶಿಕ್ಷಣ ಪಡೆಯಲು ಹರಸಾಹಸಪಟ್ಟಿದ್ದರು. ಬಾಲ್ಯದಲ್ಲಿ ಅನುಭವಿಸಿದ ತೊಂದರೆಗಳೇ ಅವರಿಗೆ ಮುಂದೆ ಜನೋಪಕಾರಿಯಾಗುವಲ್ಲಿ ಪ್ರೇರಣೆ ನೀಡಿದವು. ಸೌಲಭ್ಯ ವಂಚಿತ ಮಕ್ಕಳಿಗೆ ಅವರು ಶೈಕ್ಷಣಿಕ ನೆರವು ಒದಗಿಸುತ್ತಿದ್ದಾರೆ.

ಜನಸಾಮಾನ್ಯರ ಆರೋಗ್ಯ ಮತ್ತು ಕ್ಷೇಮವನ್ನು ಸುಧಾರಿಸುವ ಸಮುದಾಯದ ಪ್ರಯತ್ನಗಳಲ್ಲಿ ಅವರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಅವರು ದೇಶದಲ್ಲಿ ಕೋಮು ಸೌಹಾರ್ದತೆಯನ್ನು ಹೆಚ್ಚಿಸಲು ಇಂಡಿಯನ್ ಮೈನಾರಿಟೀಸ್ ಫೌಂಡೇಶನ್ ಮತ್ತು ನ್ಯೂ ಇಂಡಿಯಾ ಡೆವಲಪ್‌ಮೆಂಟ್ (ಎನ್‌ಐಡಿ) ಫೌಂಡೇಶನ್ ಎರಡು ಎನ್‌ಜಿಒಗಳನ್ನು ನಡೆಸುತ್ತಿದ್ದಾರೆ.

ಈ ಸುದ್ದಿಯನ್ನೂ ಓದಿ: Droupadi Murmu: ರಾಷ್ಟ್ರಪತಿ ದ್ರೌಪದಿ ಮುರ್ಮುರನ್ನು ಭೇಟಿಯಾದ ಎಫ್‍ಕೆಸಿಸಿಐ ನಿಯೋಗ

Exit mobile version