Site icon Vistara News

Sivasri Skandaprasad : ಮೋದಿ ಮೆಚ್ಚಿದ ‘ಪೂಜಿಸಲೆಂದೇ’ ಹಾಡಿನ ಗಾಯಕಿ ಶಿವಶ್ರೀ ಯಾರು?

Siva sri

ವಿಸ್ತಾರ ನ್ಯೂಸ್​ ಬೆಂಗಳೂರು : ರಾಮ ಮಂದಿರದಲ್ಲಿ ರಾಮ್​ಲಲ್ಲಾನ ಪ್ರಾಣ ಪ್ರತಿಷ್ಠೆ (Ram Mandir) ಮಾಡಲು ಅಣಿಯಾಗಿರುವ ಪ್ರಧಾನಿ ಮೋದಿ ಅವರು ರಾಮನ ಕುರಿತ ಕನ್ನಡ ಹಾಡೊಂದನ್ನು ಜನವರಿ 16ರಂದು ಪೋಸ್ಟ್​ ಮಾಡಿದ್ದಾರೆ. ಇದು ಕನ್ನಡಿಗರ ಪಾಲಿಗೆ ಅತ್ಯಂತ ಸಂಭ್ರಮದ ಸುದ್ದಿ. ಅದುವೇ ‘ಎರಡು ಕನಸು’ ಸಿನಿಮಾದ ‘ಪೂಜಿಸಲೆಂದೇ ಹೂಗಳ ತಂದೆ’ . ಈ ಹಾಡು ರಾಮನ ಭಕ್ತಿಯನ್ನು ಸಾರುತ್ತದೆ . ಆದರೆ, ಮೋದಿ ಪೋಸ್ಟ್​ ಮಾಡಿರುವ ಹಾಡನ್ನು ಹಾಡಿರುವುದು ತಮಿಳುನಾಡು ಮೂಲದ ಶಿವಶ್ರೀ ಸ್ಕಂದಪ್ರಸಾದ್​ (Sivasri Skandaprasad). ಮೋದಿ ಹಾಡು ಮೆಚ್ಚುತ್ತಿದ್ದಂತೆ ಸ್ಕಂದಶ್ರೀ ಯಾರು ಎಂಬ ಕೌತುಕ ಜನರಲ್ಲಿ ಹೆಚ್ಚಾಗಿದೆ. ಅವರ ಕುರಿತು ಹುಡುಕಾಟವೂ ಶುರುವಾಗಿದೆ. ಅವರ ಜನಪ್ರಿಯತೆಯೂ ಹೆಚ್ಚಾಗಲಿದೆ.

ಶಿವಶ್ರೀ ಅವರು ಕಲಾವಿದರ ಕುಟುಂಬದ ಕುಡಿ ಹೀಗಾಗಿ, ಅವರಿಗೆ ಸಣ್ಣ ವಯಸ್ಸಿನಿಂದಲೇ ಸಂಗೀತದ ಬಗ್ಗೆ ಒಲವು ಇತ್ತು. ಶಾಸ್ತ್ರೀಯ ಸಂಗೀತ, ಭರತನಾಟ್ಯವನ್ನು ತಮಗೆ 3 ವರ್ಷ ಇದ್ದಾಗಲೇ ಕಲಿಯಲು ಆರಂಭಿಸಿದ್ದರು. ಶಿವಶ್ರೀ ಅವರ ತಾತ ಖ್ಯಾತ ಸಂಗೀತಕಾರರಾಗಿದ್ದರು. ಶಿವಶ್ರೀ ಅವರ ತಂದೆ ಖ್ಯಾತ ಮೃದಂಗ ವಾದಕ ವಿದ್ವಾನ್ ಸೀರ್ಕಾಜಿ ಜೆ. ಸ್ಕಂದಪ್ರಸಾದ್. ಶಿವಶ್ರೀ ಅವರು ಎ.ಎಸ್. ಮುರಳಿ ಮತ್ತು ಆಚಾರ್ಯ ಚೂಡಾಮಣಿ ಅವರಲ್ಲಿ ಸಂಗೀತ ಕಲಿತಿದ್ದಾರೆ. ರೋಜಾ ಕಣ್ಣನ್ ಅವರಿಂದ ಭರತನಾಟ್ಯವನ್ನೂ ಕಲಿತುಕೊಂಡಿದ್ದಾರೆ.

ಶಿವಶ್ರೀ ಅವರು ಬಯೋ-ಇಂಜಿನಿಯರಿಂಗ್ ಪದವೀಧರೆ. ಮದ್ರಾಸ್ ವಿಶ್ವವಿದ್ಯಾಲಯದಲ್ಲಿ ಎಂಎ ಭರತನಾಟ್ಯ ಮತ್ತು ಮದ್ರಾಸ್ ಸಂಸ್ಕೃತ ಕಾಲೇಜಿನಲ್ಲಿ ಸಂಸ್ಕೃತ ಡಿಪ್ಲೊಮಾ ಪಡೆದಿದ್ದಾರೆ. ಸಂಗೀತವು ತಮಗೆ ಸಹಜವಾಗಿ ಬಂದಿದೆ. ಎಂದು ಶಿವಶ್ರೀ ನಂಬುತ್ತಾರೆ. “ನಾನು ಕೇವಲ 3 ವರ್ಷದವಳಿದ್ದಾಗ ನೃತ್ಯ ತರಗತಿಗೆ ಸೇರಿಕೊಂಡೆ ಎಂದು ಅವರು ಹೇಳಿಕೊಂಡಿದ್ದಾರೆ.

ಮ್ಯೂಸಿಕ್ ಅಕಾಡೆಮಿ, ನಾರದ ಗಾನ ಸಭಾ, ಶ್ರೀ ಕೃಷ್ಣ ಗಾನ ಸಭಾ ಮತ್ತು ಬ್ರಹ್ಮ ಗಣ ಸಭಾದಂತಹ ಪ್ರಸಿದ್ಧ ಸಭಾಗಳಲ್ಲಿ ಅವರು ಒಂದು ದಶಕಕ್ಕೂ ಹೆಚ್ಚು ಕಾಲದಿಂದ ವೈಯಕ್ತಿಕ ಪ್ರದರ್ಶನಗಳು ಮತ್ತು ಏಕವ್ಯಕ್ತಿ ನೃತ್ಯ ಪ್ರದರ್ಶನಗಳನ್ನು ನೀಡುತ್ತಿದ್ದಾರೆ. ಸಾಂಪ್ರದಾಯಿಕ ಮೌಲ್ಯಗಳನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಶಿವಶ್ರೀ ಪ್ರಸ್ತುತ ಭರತನಾಟ್ಯ ಮತ್ತು ಕರ್ನಾಟಕ ಸಂಗೀತಕ್ಕಾಗಿ ‘ಆಹುತಿ’ ಎಂಬ ಇ-ಶಾಲೆಯನ್ನು ನಡೆಸುತ್ತಿದ್ದಾರೆ.

ತಂಜಾವೂರಿನ ಶಾಸ್ತ್ರ ವಿಶ್ವವಿದ್ಯಾಲಯದಲ್ಲಿ ಅವರು ಬಿ .ಟೆಕ್ ಪದವೀಧರರು ಗೋಲ್ಡ್ ವಿನ್ನರ್, ಸರವಣ ಸ್ಟೋರ್ಸ್ ಮತ್ತು ಶಕ್ತಿ ಮಸಾಲಾಗಾಗಿ ಅನೇಕ ಜಾಹೀರಾತುಗಳಿಗೆ ಜಿಂಗಲ್ಸ್ ಹಾಡಿದ್ದಾರೆ.

ಮಂತ್ರಾಲಯದಲ್ಲಿ ಹಾಡಿದ್ದರು

ನನ್ನ ಜೀವನದಲ್ಲಿ ಕೆಲವು ತಿರುವುಗಳಿವೆ, ಅದು ಸಂಗೀತದ ಮೇಲಿನ ನನ್ನ ಉತ್ಸಾಹವನ್ನು ಹೆಚ್ಚಿಸಿತ್ತು. ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠದಲ್ಲಿ ನಾನು ಭಾಗವಹಿಸಿದ ಸಂಗೀತ ಕಾರ್ಯಕ್ರಮವು ನನಗೆ ಕಣ್ಣೀರು ತರಿಸಿತ್ತು. ಇದು ನನಗೆ ಸ್ಮರಣೀಯವಾದವುಗಳಲ್ಲಿ ಒಂದಾಗಿದೆ ಎಂದು ಮಾಡೆಲಿಂಗ್ ಕ್ಷೇತ್ರದಲ್ಲೂ ತೊಡಗಿಸಿಕೊಂಡಿರುವ ಶಿವಶ್ರೀ ಹೇಳುತ್ತಾರೆ. 2008 ರಲ್ಲಿ ಅಮೆರಿಕದ ಕ್ಲೀವ್​​​ಲ್ಯಾಂಡ್ಸ್​ನಲ್ಲಿ ನಡೆದ ವಾರ್ಷಿಕ ತ್ಯಾಗರಾಜ ಉತ್ಸವದಲ್ಲಿ ಪ್ರದರ್ಶನ ನೀಡಿದ್ದಾಎರ. ದೇಶಾದ್ಯಂತ ಅತ್ಯಂತ ಪ್ರತಿಷ್ಠಿತ ಸ್ಪರ್ಧೆಗಳಲ್ಲಿ ಹಲವಾರು ಬಹುಮಾನಗಳನ್ನು ಗೆದ್ದಿದ್ದಾರೆ.

ದಕ್ಷಿಣ ಭಾರತದಾದ್ಯಂತದ ಸುಮಾರು 8,000 ವಿದ್ಯಾರ್ಥಿಗಳು ನೃತ್ಯ ಸಂಯೋಜನೆ, ಬೋಧನೆ ಮತ್ತು ಭರತನಾಟ್ಯ ಪ್ರಸ್ತುತಿಯನ್ನು ನಡೆಸಿಕೊಟ್ಟಿದ್ದಕ್ಕಾಗಿ ಚಿದಂಬರಂ ಕನಕಸಭಾಪತಿ ಟ್ರಸ್ಟ್ ಅವರಿಗೆ “ಭಾರತ ಕಲಾ ಚೂಡಾಮಣಿ” ಪ್ರಶಸ್ತಿಯನ್ನು ನೀಡಿದೆ.

ಮಣಿರತ್ನಂ ಸಿನಿಮಾಕ್ಕೆ ಹಾಡಿದ್ದರು

ಮಣಿರತ್ನಂ ನಿರ್ದೇಶನದ ‘ಪೊನ್ನಿಯಿನ್ ಸೆಲ್ವನ್’ ಚಿತ್ರದ ‘ಹೇಳೆ ನೀನು..’ (ಕನ್ನಡ ವರ್ಷನ್) ಹಾಡನ್ನು ಶಿವಶ್ರೀ ಹಾಡಿದ್ದಾರೆ. ಮೋದಿ ಟ್ವೀಟ್​ನಿಂದ ಅವರ ಜನಪ್ರಿಯತೆ ಮತ್ತಷ್ಟು ಹೆಚ್ಚಲಿದೆ. ಇನ್​ಸ್ಟಾಗ್ರಾಮ್​ನಲ್ಲಿ ಅವರನ್ನು 80 ಸಾವಿರ ಜನರು ಫಾಲೋ ಮಾಡುತ್ತಿದ್ದಾರೆ. ಯೂಟ್ಯೂಬ್​ನಲ್ಲಿ ಅವರಿಗೆ ಒಂದೂವರೆ ಲಕ್ಷ ಚಂದಾದಾರರು ಇದ್ದಾರೆ.

Exit mobile version