Site icon Vistara News

ರಾಹುಲ್ ಗಾಂಧಿ ಜತೆ ಇರುವ ಮಹಿಳೆ ಯಾರು? ಫೋಟೊ ವೈರಲ್‌ ಮಾಡಿದವನಿಗೆ ಉಗಿದು ಉಪ್ಪಿನಕಾಯಿ ಹಾಕಿದ ನೆಟ್ಟಿಗರು!

Who is that woman standing next to Rahul Gandhi?

ನವದೆಹಲಿ: ಸೋಷಿಯಲ್ ಮೀಡಿಯಾಗಳಲ್ಲಿ(Social Media) ರಾಹುಲ್ ಗಾಂಧಿ (Rahul Gandhi) ಮೇಲೆ ನಿಗಾ ಇಡುವಷ್ಟು ಬೇರೆ ಯಾವ ನಾಯಕರ ಮೇಲೂ ಇಲ್ಲ ಅಂತಾ ಹೇಳಬಹುದು. ಅವರ ಒಂದು ಸಣ್ಣ ತಪ್ಪು ಹುಡುಕುವುದಕ್ಕಾಗಿಯೇ ಬಿಜೆಪಿ ಪಕ್ಷ, ಬಿಜೆಪಿ ಬೆಂಬಲಿತ ಹಾಗೂ ಸಿಂಪತೈಸರ್ ಐಟಿ ಸೆಲ್‌ಗಳು ಕಾದು ಕುಳಿತಿರುತ್ತವೆ! ಇದಕ್ಕೆ ಮತ್ತೊಂದು ತಾಜಾ ಉದಾಹರಣೆ ದೊರೆತಿದೆ. ರಾಹುಲ್ ಗಾಂಧಿ ಅವರು ಮಹಿಳೆಯೊಂದಿಗೆ ಕಾಣಿಸಿಕೊಂಡ ಫೋಟೋವನ್ನು ವೈರಲ್ (Photo Viral) ಮಾಡಿದ್ದು, ”ರಾಹುಲ್ ಗಾಂಧಿ ಅವರು ಭಾರತದಲ್ಲಿ ಚುನಾವಣೆಯ (Lok Sabha Election) ನಡುವೆ ಈ ಬಾರಿ ಉಜ್ಬೇಕಿಸ್ತಾನ್‌ಗೆ ಮತ್ತೊಂದು ರಹಸ್ಯ ಭೇಟಿಗೆ ತೆರಳಿದ್ದಾರೆ. ರಾಹುಲ್ ಜೊತೆಗೆ ಕಂದು ಬಣ್ಣದ ಶರ್ಟ್ ಧರಿಸಿರುವ ಈ ಮಹಿಳೆ (Woman) ಯಾರು? ಭಾರತದ ವಿರುದ್ಧ ಮತ್ತೊಂದು ಟೂಲ್‌ಕಿಟ್ (Toolkit) ನಿರೀಕ್ಷಿಸಿ!” ಎಂದು ಟ್ವೀಟ್ ಮಾಡಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಫಾಲೋ ಮಾಡುವ, ಬಾಲಾ ಎಂಬ ಹೆಸರಿನ @erbmjha ಖಾತೆಯಿಂದ ಈ ಫೋಟೋಗಳನ್ನು ಷೇರ್ ಮಾಡಿ, ”ರಾಹುಲ್ ಗಾಂಧಿ ಅವರು ಭಾರತದಲ್ಲಿ ಚುನಾವಣೆಯ ನಡುವೆ ಈ ಬಾರಿ ಉಜ್ಬೇಕಿಸ್ತಾನ್‌ಗೆ ಮತ್ತೊಂದು ರಹಸ್ಯ ಭೇಟಿಗೆ ತೆರಳಿದ್ದಾರೆ. ರಾಹುಲ್ ಜೊತೆಗೆ ಕಂದು ಬಣ್ಣದ ಶರ್ಟ್ ಧರಿಸಿರುವ ಈ ಮಹಿಳೆ ಯಾರು? ಭಾರತದ ವಿರುದ್ಧ ಮತ್ತೊಂದು ಟೂಲ್‌ಕಿಟ್ ನಿರೀಕ್ಷಿಸಿ!” ಎಂದು ಬರೆಯಲಾಗಿದೆ. ಈ ಟ್ವೀಟ್‌ಗೆ ಭಾರೀ ವಿರೋಧ ವ್ಯಕ್ತವಾಗಿದೆ.

ಪ್ರಧಾನಿ ಮೋದಿ ಫಾಲೋ ಮಾಡುತ್ತಿರುವ ಈ ಬಾಲಾ ಖಾತೆಯಲ್ಲಿ ಬರಹಗಾರ, ಬಫೂನ್ ಎಂದು ಪರಿಚಯ ಮಾಡಿಕೊಂಡಿದ್ದು, ಅನಿವಾರ್ಯವಲ್ಲದ್ದಕ್ಕೆ ಕಾಳಜಿ ಹಾಗೂ ನಾನು ಅಪಹಾಸ್ಯ ಮಾಡುತ್ತೇನೆ ಅಥವಾ ಅಪಹಾಸ್ಯ ಮಾಡುವ ಪದಗಳನ್ನು ಹೇಳುತ್ತೇನೆ ಬರೆದುಕೊಳ್ಳಲಾಗಿದೆ. ಈ ಖಾತೆಯಲ್ಲಿ ಸಾಕಷ್ಟು ಕಾಂಗ್ರೆಸ್ ವಿರೋಧಿಸುವ ಮತ್ತು ಬಿಜೆಪಿಯನ್ನು ಬೆಂಬಲಿಸುವ ಕಂಟೆಂಟ್ ಕಾಣಬಹುದು.

ಯಾರು ಆ ಹೆಣ್ಣು ಮಗಳು?

ವಾಸ್ತವದಲ್ಲಿ ವೈರಲ್ ಮಾಡಲಾಗಿರುವ ಫೋಟೋದಲ್ಲಿ ರಾಹುಲ್ ಗಾಂಧಿ ಅವರು ಬಾಲ್ಯದ ಗೆಳೆಯ ಅಮಿತಾಭ್ ದುಬೆ ಹಾಗೂ ಅವರ ಪತ್ನಿ ಅಮೂಲ್ಯ ಜತೆಗಿದ್ದಾರೆ. ಈ ವಾಸ್ತವದ ಸಂಗತಿ ಗೊತ್ತಿಲ್ಲದೇ, ಬಿಜೆಪಿಯ ಸಿಂಪಥೈಸರ್ ಬಾಲಾ ಹೆಸರಿನ ಖಾತೆಯಿಂದ ಈ ಫೋಟೋವನ್ನು ವೈರಲ್ ಮಾಡಲಾಗಿದೆ.

ಈ ಟ್ವೀಟ್‌ಗೆ ಖಡಕ್ಕಾಗಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನಾಥೆ ಅವರು, ಮೂರ್ಖ ಸಂಘಿಗಳು ಮತ್ತು 2 ರೂ. ಬಿಜೆಪಿ ಟ್ರೋಲ್‌ಗಳೇ… ಐ ಪಿಟಿ ಯೂ, ನಿಮಗೆ ಸ್ನೇಹಿತರಾಗಲಿ ಅಥವಾ ನಿಮ್ಮೊಂದಿಗೆ ಸುತ್ತಾಡಲು ಇಷ್ಟಪಡುವ ಜನರಾಗಲಿ ಇಲ್ಲ. ಚಿತ್ರದಲ್ಲಿನ ಸಂಭಾವಿತ ವ್ಯಕ್ತಿ ರಾಹುಲ್ ಗಾಂಧಿ ಅವರ ಬಾಲ್ಯದ ಗೆಳೆಯ ಅಮಿತಾಬ್ ದುಬೆ ಮತ್ತು ಮಹಿಳೆ ಅಮಿತಾಬ್ ಅವರ ಪತ್ನಿ ಅಮೂಲ್ಯ. ಶೋಚನೀಯ ಸ್ಥಿತಿಯಲ್ಲಿರುವ ನೀವು ಬದಕುವುದನ್ನು ಕಲಿಯಿರಿ ಎಂದು ತಿವಿದಿದ್ದಾರೆ.

ಸುಪ್ರಿಯಾ ಶ್ರೀನಾಥೆ ಮಾತ್ರವಲ್ಲದೇ, ಅನೇಕರು ಈ ಫೋಟೋ ಷೇರ್ ಮಾಡಿದವರ ವಿರುದ್ಧ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ನಿಮಗಂತೂ ತಾಯಿ, ತಂಗಿ, ಗೆಳೆಯರು, ಗೆಳತಿಯರ ಬಗ್ಗೆ ಅರಿವಿಲ್ಲ. ಬೇರೆಯವರ ಬಗ್ಗೆ ಮಾತನಾಡಿಕೊಳ್ಳದೇ ನಿಮಗೆ ಉಂಡ ಅನ್ನ ಕರಗುವುದಿಲ್ಲ ಎಂಬ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ. ಹೆಚ್ಚಿನವರು ಬಹುತೇಕ ಟೀಕಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Rahul Gandhi Pet: ಶ್ವಾನಕ್ಕೆ ‘ನೂರಿ’ ಎಂದು ಹೆಸರಿಟ್ಟ ರಾಹುಲ್‌ ಗಾಂಧಿಗೆ ‘ಧರ್ಮ’ಸಂಕಟ; ಬಿತ್ತು ಕೇಸ್!

ಬಿಯೋ ಎಸ್ ಜೋಸೆಫ್ ಎಂಬುವರು, ಅದಕ್ಕೆ ಹೇಳೋದು ನಾವು, ಮೋದಿ ಕನಿಷ್ಠ ಸಮಯವನ್ನಾದರೂ ತಮ್ಮ ಸ್ನೇಹಿತರು, ಕುಟುಂಬದ ಸದಸ್ಯರೊಂದಿಗೆ ಕಾಲ ಕಳೆಯಬೇಕು ಎಂದು. ಆಗ ಮಾತ್ರವೇ ಒಂದಿಷ್ಟಾದರೂ ಸಾಮಾನ್ಯ ಜನರ ಒಳ್ಳೆಯದು ಯಾವುದು ಕೆಟ್ಟದ್ದು ಯಾವುದು ಎಂಬುದು ತಿಳಿಯುತ್ತದೆ ಎಂದು ಪ್ರತಿಕ್ರಿಯಿಸಿದ್ದಾರೆ.

ಬಾಬಾ ಲಪೆಟು ನಾಥ್ ಎಂಬ ಖಾತೆಯಿಂದ, ಚಿತ್ರದಲ್ಲಿರುವವರು ರಾಹುಲ್ ಗಾಂಧಿ ಅವರು ಬಾಲ್ಯದ ಗೆಳೆಯ ಅಮಿತಾಭ್ ದುಬೆ ಮತ್ತು ಅವರ ಪತ್ನಿ ಅಮೂಲ್ಯ. ಆದರೆ, ಸೆಗಣಿ ಭಕ್ತರಿಗೆ ರಾಹುಲ್ ಗಾಂಧಿ ಅವರನ್ನು ಅಪಮಾನ ಮಾಡುವುದಕ್ಕಾಗಿ ತಮ್ಮ ಸಹೋದರಿಯನ್ನೂ ಅಪಮಾನ ಮಾಡುವುದನ್ನೂ ಹಿಂಜರಿಯುವುದಿಲ್ಲ ಎಂದು ಬರೆದುಕೊಂಡಿದ್ದಾರೆ. ಇದೇ ರೀತಿ ಅನೇಕ ಟ್ವಿಟರ್ ಬಳಕೆದಾರರು ಬಾಲಾ ಅವರು ಈ ಫೋಟೋಗಳನ್ನು ವೈರಲ್ ಮಾಡಿದ್ದಕ್ಕೆ ಮಂಗಳಾರತಿ ಮಾಡಿದ್ದಾರೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version