Site icon Vistara News

Project Tiger : ಹುಲಿಗಳಿಗೆ ಏಕೆ ಗಣತಿ? ನಮ್ಮ ದೇಶದ ಹುಲಿ ಸಂತತಿ ಕುರಿತು ಇಲ್ಲಿದೆ ವಿಶೇಷ ಮಾಹಿತಿ

why-census-for-tigers-here-is-the-special-information-about-the-tiger-breed-of-our-country

#image_title

ನವ ದೆಹಲಿ: ಭಾರತದಲ್ಲಿ ಹುಲಿಗಳಿಗೆ ರಾಜ ಮರ್ಯಾದೆ. ಅದನ್ನು ನಾವು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಿರುವ ಜತೆಗೆ ಅಳಿವಿನಂಚಿನಲ್ಲಿರುವ ಆ ಪ್ರಾಣಿಯನ್ನು ಉಳಿಸಲು ನಾನಾ ಯೊಜನೆ ರೂಪಿಸಿಕೊಂಡಿದ್ದೇವೆ. ಅದರಲ್ಲೊಂದು ಪ್ರಾಜೆಕ್ಟ್​ ಟೈಗರ್​. 1973ರಲ್ಲಿ ಅಂದಿನ ಪ್ರಧಾನ ಮಂತ್ರಿ ಇಂದಿರಾ ಗಾಂಧಿ ಅವರು ಈ ಯೋಜನೆಗೆ ಚಾಲನೆ ಕೊಟ್ಟಿದ್ದರು. ಯೋಜನೆಗೀಗ 50 ವರ್ಷ. ಈ ಯೋಜನೆಯ ಫಲವಾಗಿ ಒಂದು ಕಾಲದಲ್ಲಿ ಸಂಪೂರ್ಣ ನಿರ್ನಾಮವಾಯಿತು ಎಂದು ಅಂದುಕೊಂಡಿದ್ದ ವ್ಯಾಘ್ರ ಕುಲ ನಿಧಾನವಾಗಿ ಬೆಳೆಯುತ್ತಿದೆ. 2018ರ ಗಣತಿ ಪ್ರಕಾರ ಭಾರತದಲ್ಲಿ 2967 ಹುಲಿಗಳಿವೆ. ಏಪ್ರಿಲ್​ 9ರಂದು ಮೈಸೂರಿನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 2022ರ ಹುಲಿ ಗಣತಿಯ ವರದಿ ಅನಾವರಣ ಮಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ನಮ್ಮ ಪ್ರಕೃತಿಯೊಂದಿಗೆ ಬೆರೆತಿರುವ ಹುಲಿಗಳ ಬಗ್ಗೆ ತಿಳಿದುಕೊಳ್ಳೋಣ.

3000ದಷ್ಟು ಹುಲಿಗಳನ್ನು ಇರುವ ಹೊರತಾಗಿಯೂ ವಿಶ್ವದಲ್ಲಿ ಈಗಲೂ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ದೇಶವೆಂದರೆ ಭಾರತ. ಆದರೆ, ಬ್ರಿಟಿಷರು ಹಾಗೂ ಹೊರ ದೇಶದ ರಾಜರು ಭಾರತಕ್ಕೆ ದಂಡೆತ್ತಿರ ಬರುವ ಮೊದಲು ಹುಲಿಗಳ ಸಂಖ್ಯೆ ಹೇರಳವಾಗಿತ್ತು ಎನ್ನಲಾಗುತ್ತಿದೆ. ಭಾರತದ ಸಾಕಷ್ಟು ಊರುಗಳಿಗೆ ಹುಲಿಗಳ ಹೆಸರು ತಳುಕು ಹಾಕಿಕೊಂಡಿರುವುದೇ ಅದಕ್ಕೆ ಸಾಕ್ಷಿ. ಹುಲಿಗಳ ಹತ್ಯೆಯನ್ನು ಭಾರತದಲ್ಲಿ ಮೊದಲು ಆರಂಭಿಸಿದ್ದು ಮೊಘಲರು ಎನ್ನಲಾಗುತ್ತದೆ. ಸ್ವತಃ ಅಕ್ಬರ್​, ಹುಲಿ ಕೊಂದವರಿಗೆ ದೊಡ್ಡ ಮೊತ್ತ ಬಹುಮಾನ ಹಾಗೂ ಜಮೀನು ಉಡುಗೊರೆಯಾಗಿ ನೀಡುತ್ತಿದ್ದುದು ಇತಿಹಾಸದಲ್ಲಿ ದಾಖಲಾಗಿದೆ.

ಬ್ರಿಟಿಷರು ಕೂಡ ಹುಲಿಗಳನ್ನು ಕೊಲ್ಲುತ್ತಿದ್ದರು. ರಜಾ ಅವಧಿಯಲ್ಲಿ ಬೇಟೆಗೆ ಹೋಗಿ ಹುಲಿಗಳನ್ನು ಕೊಲ್ಲುವುದು ಅವರಿಗೆ ಮೋಜಿನ ವಿಷಯವಾಗಿತ್ತು. ಅಂತೆಯೇ ಭಾರತವನ್ನು ಆಳಿದ ಹಲವಾರು ರಾಜ, ಮಹಾರಾಜರು ಹುಲಿಗಳ ಬೇಟೆಯಾಡುವುದನ್ನು ದೊಡ್ಡ ಶಕ್ತಿ ಎಂದು ನಂಬಿದ್ದರು. ಸ್ವಾತಂತ್ರ್ಯದ ಬಳಿಕವೂ ಚರ್ಮ, ಉಗುರು ಹಾಗೂ ಮೂಳೆಗಳಿಗೋಸ್ಕರ ಹುಲಿಗಳನ್ನು ಕೊಲ್ಲುತ್ತಿದ್ದರು. ಈ ಪ್ರಾಣಿ ಸಂಪೂರ್ಣ ನಿರ್ನಾಮವಾಗುತ್ತದೆ ಎಂದು ಅರಿತ ಭಾರತ ಸರಕಾರ ಹಲವು ಯೋಜನೆಗಳ ಮೂಲಕ ಹುಲಿಗಳ ಉಳಿವಿಗಾಗಿ ಪ್ರಯತ್ನಿಸುತ್ತದೆ.

ಇದನ್ನೂ ಓದಿ : Tiger Census : ವಿಶ್ವದ ಹುಲಿಗಳ ಸಂಖ್ಯೆಯಲ್ಲಿ ಭಾರತದ್ದೇ ಸಿಂಹಪಾಲು!

ಪ್ರಾಜೆಕ್ಟ್​ ಟೈಗರ್​ನಲ್ಲಿ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಹುಲಿಗಳ ಗಣತಿ ಮಾಡಲಾಗುತ್ತದೆ. ಯಾವ ಪ್ರದೇಶದಲ್ಲಿ ಎಷ್ಟು ಹುಲಿಗಳಿವೆ, ಎಷ್ಟು ಸತ್ತಿವೆ ಎಂಬ ಮಾಹಿತಿ ದಾಖಲು ಮಾಡಲಾಗುತ್ತದೆ. ಇದರ ಮೂಲಕ ಹುಲಿಗಳ ಇರುವಿಕೆಯ ಸಮರ್ಪಕ ದಾಖಲೆಯನ್ನು ಸೃಷ್ಟಿಸಲಾಗುತ್ತಿದೆ.

ಭಾರತದ ಹುಲಿಗಳ ವಿಶೇಷತೆಗಳೇನು?

ಕರ್ನಾಟಕದಲ್ಲಿ ಹುಲಿ ಸಂರಕ್ಷಿತ ಪ್ರದೇಶಗಳು ಎಲ್ಲೆಲ್ಲಿವೆ?

ಹುಲಿಗಳ ಸಂಖ್ಯೆಯ ವಿಚಾರಕ್ಕೆ ಬಂದಾಗ ಕರ್ನಾಟಕ ಒಂದು ಅಥವಾ ಎರಡನೇ ಸ್ಥಾನ ಪಡೆಯುತ್ತದೆ. ಇಲ್ಲಿ ಮಧ್ಯ ಪ್ರದೇಶ ಹಾಗೂ ಕರ್ನಾಟಕ ನಡುವೆ ಪೈಪೋಟಿಯಿದೆ. ಹಾಗಾದರೆ ಕರ್ನಾಟಕದಲ್ಲಿ ಎಲ್ಲೆಲ್ಲಿ ಹುಲಿಗಳಿವೆ ಹಾಗೂ ಅವುಗಳು ಹುಲಿ ಸಂರಕ್ಷಿತ ಪ್ರದೇಶವಾಗಲು ಕಾರಣಗಳೇನು ಎಂಬುದನ್ನು ನೋಡೋಣ.

ಬಂಡೀಪುರ ನ್ಯಾಷನಲ್ ಪಾರ್ಕ್ ಮತ್ತು ಹುಲಿ ಅಭಯಾರಣ್ಯ
870 ಚದರ ಕಿಲೋಮೀಟರ್ ವಿಸ್ತೀರ್ಣದ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಇದು ಚಾಮರಾಜನಗರ ಜಿಲ್ಲೆಯಲ್ಲಿದೆ. ಇದು ಅತ್ಯಂತ ಹಳೆಯ ಹುಲಿ ಸಂರಕ್ಷಿತ ಪ್ರದೇಶ.

ನಾಗರಹೊಳೆ ನ್ಯಾಷನಲ್ ಪಾರ್ಕ್ ಮತ್ತು ಹುಲಿ ಅಭಯಾರಣ್ಯ
ರಾಜೀವ್ ಗಾಂಧಿ ನ್ಯಾಷನಲ್ ಪಾರ್ಕ್ ಎಂದೂ ಇದನ್ನು ಕರೆಯುತ್ತಾರೆ. ಇದು ಮೈಸೂರು ಮತ್ತು ಕೊಡಗು ಜಿಲ್ಲೆಯಲ್ಲಿ ವ್ಯಾಪಿಸಿದೆ. ಈ ಉದ್ಯಾನವು ಮೈಸೂರು ರಾಜರು ಬೇಟೆಯಾಡುವ ಸ್ಥಳವಾಗಿತ್ತು. 1988ರಲ್ಲಿ ರಾಷ್ಟ್ರೀಯ ಉದ್ಯಾನವನ್ನಾಗಿ ಘೋಷಿಸಲಾಯಿತು. ಬೆಂಗಾಲ್ ಟೈಗರ್ ಇಲ್ಲಿನ ಆಕರ್ಷಣೆ.

ಬಿಳಿಗಿರಿ ರಂಗನಾಥ ಟೆಂಪಲ್ ಹುಲಿ ಅಭಯಾರಣ್ಯ
ಇದು ಕರ್ನಾಟಕ ಮತ್ತು ತಮಿಳುನಾಡು ಗಡಿಯಲ್ಲಿದೆ, ಇದು ಚಾಮರಾಜನಗರ ಜಿಲ್ಲೆಗೆ ಸೇರುತ್ತದೆ. ಇದು ಪಶ್ಚಿಮ ಮತ್ತು ಪೂರ್ವ ಘಟ್ಟಗಳು ಸೇರುವ ಸ್ಥಳ.

ಕಾಳಿ ಹುಲಿ ಅಭಯಾರಣ್ಯ
ಕಾಳಿ ಹುಲಿ ಅಭಯಾರಣ್ಯ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯಲ್ಲಿದೆ. ಇದು ಬಂಗಾಳ ಹುಲಿಗಳಿಗೆ ಹೆಸರುವಾಸಿಯಾಗಿದೆ. ಈ ಮೀಸಲು ಪ್ರದೇಶವು 1300 ಚದರ ಕಿ.ಮೀ ಅರಣ್ಯ ಪ್ರದೇಶದಲ್ಲಿದೆ. ಈ ಹಿಂದೆ ಇದು ಅನ್ಶಿ ರಾಷ್ಟ್ರೀಯ ಉದ್ಯಾನವನ ಮತ್ತು ದಾಂಡೇಲಿ ವನ್ಯಜೀವಿ ಅಭಯಾರಣ್ಯ ಒಳಗೊಂಡಿತ್ತು. 2014ರಲ್ಲಿ ಈ ಮೀಸಲು ಪ್ರದೇಶವನ್ನು ಕಾಳಿ ಟೈಗರ್ ರಿಸರ್ವ್ ಎಂದು ಮರುನಾಮಕರಣ ಮಾಡಲಾಯಿತು.

ಭದ್ರಾ ಹುಲಿ ಅಭಯಾರಣ್ಯ
ಇದು ಚಿಕ್ಕಮಗಳೂರು ಜಿಲ್ಲೆಯಲ್ಲಿದೆ. ಇದು 492 ಚದರ ಕಿ.ಮೀ ವಿಸ್ತೀರ್ಣದಲ್ಲಿ ಹರಡಿದೆ. ಅಭಯಾರಣ್ಯವು ಅದರ ಮೂಲಕ ಹರಿಯುವ ಭದ್ರಾ ನದಿಯಿಂದ ಹೆಸರನ್ನು ಪಡೆದುಕೊಂಡಿದೆ.

Exit mobile version