Site icon Vistara News

Kolkata Airport | 90 ನಿಮಿಷ, 11 ವಿಮಾನ ಲ್ಯಾಂಡ್‌ ಮಾಡಲು ಪೈಲಟ್‌ಗಳು ಯತ್ನಿಸಿದರೂ ಆಗಲಿಲ್ಲವೇಕೆ?

Flight

ಕೋಲ್ಕೊತಾ: ನಿಸರ್ಗ, ಹವಾಮಾನದ ಎದುರು ಮನುಷ್ಯನ ಯಾವ ಪ್ರಯತ್ನವೂ ನಡೆಯುವುದಿಲ್ಲ ಎಂಬುದು ಪ್ರತಿ ಬಾರಿಯೂ ಸಾಬೀತಾಗುತ್ತದೆ. ಈ ಮಾತು ಈಗ ಮತ್ತೊಮ್ಮೆ ಸಾಬೀತಾಗಿದ್ದು, ಹವಾಮಾನ ವೈಪರೀತ್ಯದಿಂದಾಗಿ ಕಳೆದ ಶುಕ್ರವಾರ ೧೧ ವಿಮಾನಗಳ ಪೈಲಟ್‌ಗಳು ೯೦ ನಿಮಿಷಗಳವರೆಗೆ ಸತತವಾಗಿ ಪ್ರಯತ್ನಿಸಿದರೂ ಕೋಲ್ಕೊತಾ ಏರ್‌ಪೋರ್ಟ್‌ನಲ್ಲಿ (Kolkata Airport) ವಿಮಾನ ಲ್ಯಾಂಡ್‌ ಮಾಡಲು ಆಗಿಲ್ಲ.

ಕಳೆದ ಶುಕ್ರವಾರ ಸಂಜೆ ೫ ಗಂಟೆಯಿಂದ ೬.೩೦ರ ಅವಧಿಯಲ್ಲಿ ಸುಮಾರು ೧೧ ವಿಮಾನಗಳು ಕೋಲ್ಕೊತಾ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್‌ ಆಗಬೇಕಿತ್ತು. ಆದರೆ, ಜೋರಾಗಿ ಕ್ರಾಸ್‌ವಿಂಡ್‌ (Crosswind- ವಿಮಾನ ಚಲಿಸುವ ದಿಕ್ಕಿಗೆ ವಿರುದ್ಧವಾಗಿ ಗಾಳಿ ಬೀಸುವುದು) ಬೀಸಿದ ಕಾರಣ ೧೧ ವಿಮಾನಗಳ ಪೈಲಟ್‌ಗಳು ಎಷ್ಟು ಪ್ರಯತ್ನಿಸಿದರೂ ವಿಮಾನ ಲ್ಯಾಂಡ್‌ ಮಾಡಲು ಆಗಿಲ್ಲ.

ಹೀಗೆ ಕ್ರಾಸ್‌ವಿಂಡ್‌ ಬೀಸುವಾಗ ವಿಮಾನಗಳನ್ನು ಲ್ಯಾಂಡ್‌ ಮಾಡಲು ಆಗುವುದಿಲ್ಲ ಇಲ್ಲವೇ ಆಗ ಲ್ಯಾಂಡ್‌ ಮಾಡುವುದು ಅಪಾಯಕಾರಿಯಾಗಿದೆ. ಪೈಲಟ್‌ಗಳು ಒಂದೋ ಬೇರೆ ವಿಮಾನ ನಿಲ್ದಾಣಗಳಿಗೆ ಮಾರ್ಗ ಬದಲಾಯಿಸಬೇಕಾಗುತ್ತದೆ, ಇಲ್ಲವೇ ಗಾಳಿಯ ತೀವ್ರತೆ ಕಡಿಮೆಯಾಗುವವರೆಗೆ ಆಗಸದಲ್ಲಿಯೇ ಇರಬೇಕಾಗುತ್ತದೆ. ಕಳೆದ ಶುಕ್ರವಾರವೂ, ಸುಮಾರು ೯೦ ನಿಮಿಷಗಳವರೆಗೆ ಕ್ರಾಸ್‌ವಿಂಡ್‌ ಬೀಸಿದ ಕಾರಣ ಒಂದಷ್ಟು ವಿಮಾನಗಳು ಬೇರೆ ವಿಮಾನ ನಿಲ್ದಾಣಕ್ಕೆ ತೆರಳಿದರೆ, ಕೆಲ ವಿಮಾನಗಳು ಗಾಳಿಯ ತೀವ್ರತೆ ಕಡಿಮೆಯಾದ ಬಳಿಕ ಲ್ಯಾಂಡ್‌ ಆಗಿವೆ.

ಇದನ್ನೂ ಓದಿ | ನಿದ್ದೆಗೆ ಜಾರಿದ್ದ ಇಬ್ಬರೂ ಪೈಲಟ್​​ಗಳು; ಆದರೂ ವಿಮಾನ ಸುರಕ್ಷಿತವಾಗಿ ಲ್ಯಾಂಡ್​ ಆಗಿದ್ದು ಹೇಗೆ?

Exit mobile version