Site icon Vistara News

Sharmishtha Mukherjee: ‘ನ್ಯಾಯ’ ಕೊಡಿಸಿ ಎಂದು ಪ್ರಣಬ್ ಪುತ್ರಿ ರಾಹುಲ್ ಗಾಂಧಿಗೆ ಬೇಡಿಕೊಂಡಿದ್ದೇಕೆ?

Why did Pranab's daughter Sharmishtha Mukherjee beg Rahul Gandhi to give justice?

ನವದೆಹಲಿ: ”ನಿಮ್ಮ ಬೆಂಬಲಿಗರು ಕೆಟ್ಟದಾಗಿ ಮತ್ತು ನಿರಂತರವಾಗಿ ಟ್ರೋಲಿಂಗ್ ಮಾಡುತ್ತಿದ್ದಾರೆ. ಇದಕ್ಕಾಗಿ ನನಗೆ ‘ನ್ಯಾಯ’ (Nyay) ಕೊಡಿಸಿ” ಎಂದು ಕಾಂಗ್ರೆಸ್‌ನ ಮಾಜಿ ನಾಯಕಿಯೂ ಆಗಿರುವ ಮಾಜಿ ರಾಷ್ಟ್ರಪತಿ ಪುತ್ರಿ ಶರ್ಮಿಷ್ಠಾ ಮುಖರ್ಜಿ (Sharmishtha Mukherjee) ಅವರು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Congress Leader Rahul Gandhi) ಅವರಿಗೆ ಬಹಿರಂಗ ಪತ್ರ ಬರೆದಿದ್ದಾರೆ. ರಾಹುಲ್ ಗಾಂಧಿ ಅವರು ಮಣಿಪುರದಿಂದ ಮಹಾರಾಷ್ಟ್ರದವರೆಗೆ ಭಾರತ್ ಜೋಡೋ ನ್ಯಾಯ್ ಯಾತ್ರೆಯನ್ನು ಕೈಗೊಂಡಿದ್ದಾರೆ(Bharat Jodo Nyay Yatra).

ಕಳೆದ ವಾರ ಶರ್ಮಿಷ್ಠಾ ಅವರು ತಮ್ಮ ತಂದೆಯ ಕುರಿತಾದ ಪುಸ್ತಕವೊಂದನ್ನು ಹೊರ ತಂದಿದ್ದರು. ಈ ಪುಸ್ತಕದಲ್ಲಿ ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ಪಕ್ಷದ ಬಗ್ಗೆ ಕಡು ಟೀಕೆ, ಟಿಪ್ಪಣಿಗಳಿದ್ದವು. ಆ ಕಾರಣಕ್ಕಾಗಿ ರಾಹುಲ್ ಗಾಂಧಿ ಫಾಲೋವರ್ಸ್, ಸೋಷಿಯಲ್ ಮೀಡಿಯಾದಲ್ಲಿ ಶರ್ಮಿಷ್ಠಾ ಮುಖರ್ಜಿ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ ಎನ್ನಲಾಗಿದೆ.

ಎಕ್ಸ್‌ ವೇದಿಕೆಯಲ್ಲಿ ಪೋಸ್ಟ್ ಮಾಡಿದ ಎರಡು ಪುಟಗಳ ಪತ್ರದಲ್ಲಿ ಶರ್ಮಿಷ್ಠಾ ಮುಖರ್ಜಿ ಅವರು, “ಕೆಲವೊಮ್ಮೆ ಅತ್ಯಂತ ಅಸಹ್ಯವಾದ ಭಾಷೆಯನ್ನು ಬಳಸುತ್ತಾರೆ.” ಈ ಸಂಬಂಧ ನಿರ್ದಿಷ್ಟವಾಗಿ ಒಬ್ಬ ಬಳಕೆದಾರರನ್ನು ಗುರುತಿಸಿದ್ದೇನೆ.”ನವೀನ್ ಶಾಹಿ, ಅವರ ಎಕ್ಸ್ ಹ್ಯಾಂಡಲ್ ಮಾಹಿತಿ ನೀಡಿದ್ದಾರೆ. ಈ ಖಾತೆಯನ್ನು ಕಾಂಗ್ರೆಸ್‌ನ ಹಲವು ನಾಯಕರು ಫಾಲೋ ಮಾಡುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ನನ್ನ ತಂದೆ ಪ್ರಣಬ್ ಮುಖರ್ಜಿ ಮತ್ತು ನನ್ನನ್ನು ಕೆಟ್ಟ ಭಾಷೆಯಲ್ಲಿ ಶಾಹಿ ನಿಂದಿಸಿದ್ದಾರೆ. ಅದನ್ನು ಪುನರಾವರ್ತಿಸಲು ಸಹ ನನಗೆ ವಾಕರಿಕೆ ಬರುತ್ತಿದೆ” ಎಂದು ಬರೆದಿದ್ದಾರೆ. ತನ್ನ ತಂದೆಯನ್ನು ಗುರಿಯಾಗಿಸಿಕೊಂಡು ಲೈಂಗಿಕ ಸ್ವಭಾವದ ಅನಾಗರಿಕ ಹೇಳಿಕೆಗಳನ್ನು ಪೋಸ್ಟ್ ಮಾಡಿದ್ದಾನೆ ಎಂದು ಅವರು ಹೇಳಿದರು.

ಈ ಟ್ರೋಲ್‌ಗಳಿಂದಾಗಿ ಸಂಪೂರ್ಣವಾಗಿ ಆಘಾತಕ್ಕೊಳಗಾದ ನಾನು ಜೈರಾಮ್ ರಮೇಶ್, ಸುಪ್ರಿಯಾ ಶ್ರೀನಾಥೆ ಮತ್ತು ನಿಮ್ಮೆಲ್ಲರನ್ನೂ ಟ್ಯಾಗ್ ಮಾಡುವ ಮೂಲಕ ನಿಮ್ಮ ಗಮನಕ್ಕೆ ತಂದಿದ್ದೇನೆ. ಆದರೆ, ಈ ಪತ್ರವನ್ನು ಬರೆಯುವ ಸಮಯದಲ್ಲಿ ನನಗೆ ಯಾವುದೇ ಪ್ರತಿಕ್ರಿಯೆಯಾಗಲೀ ಅಥವಾ ವ್ಯಕ್ತಿಯ ವಿರುದ್ಧ ಯಾವುದೇ ಕ್ರಮವಾಗಲೀ ಕಂಡುಬಂದಿಲ್ಲ ಶರ್ಮಿಷ್ಠಾ ಮುಖರ್ಜಿ ಅವರು ಹೇಳಿದ್ದಾರೆ.

ನೀವು ನ್ಯಾಯದ ಬಗ್ಗೆ ಮಾತನಾಡುತ್ತಿದ್ದೀರಿ. ಭಾರತದ ಒಬ್ಬ ಸಾಮಾನ್ಯ ಪ್ರಜೆಯಾಗಿ ನಾನು ನಿಮ್ಮಿಂದ ನ್ಯಾಯವನ್ನು ಕೋರುತ್ತೇನೆ. ಏಕೆಂದರೆ ಈ ಕೆಟ್ಟ ನಿಂದನೆಗಳು ನಿಮ್ಮ ಸಂಘಟನೆಯೊಂದಿಗೆ ಔಪಚಾರಿಕ ಅಥವಾ ಅನೌಪಚಾರಿಕವಾಗಿ ಸಂಪರ್ಕ ಹೊಂದಿದವರಿಂದಲೇ ಬರುತ್ತಿವೆ. ನಾನು ಮಹಿಳೆಯಾಗಿ ನ್ಯಾಯವನ್ನು ಬೇಡುತ್ತೇನೆ ಎಂದು ಶರ್ಮಿಷ್ಠಾ ಮುಖರ್ಜಿ ಎಕ್ಸ್‌ ವೇದಿಕೆಯಲ್ಲಿ ಪೋಸ್ಟ್ ಮಾಡಿರುವ ಬಹಿರಂಗ ಪತ್ರದಲ್ಲಿ ತಿಳಿಸಿದ್ದಾರೆ.

ನೀವು ನ್ಯಾಯದ ಬಗ್ಗೆ ಗಂಭೀರವಾಗಿರುತ್ತೀರಿ ಎಂದು ಸಾಬೀತುಪಡಿಸಲು ಈ ರೀತಿಯ ಭಾಷೆಗೆ ಅವಕಾಶ ನೀಡಿದ್ದಕ್ಕಾಗಿ ದಯವಿಟ್ಟು ಈ ವ್ಯಕ್ತಿ, ನವೀನ್ ಶಾಹಿ ಮತ್ತು ಅವರ ನಿಂದನೆಗಳಿಗೆ ಧನಾತ್ಮಕವಾಗಿ ಪ್ರತಿಕ್ರಿಯಿಸಿದ ನಿಮ್ಮ ಸಾಮಾಜಿಕ ಮಾಧ್ಯಮ ಮುಖ್ಯಸ್ಥ ಮತ್ತು ನಿಮ್ಮ ಸಂವಹನ ಮುಖ್ಯಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದು ಶರ್ಮಿಷ್ಠಾ ಮುಖರ್ಜಿ ಅವರ ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: ಪ್ರಧಾನಿ ಮೋದಿ ಪ್ರಣಬ್‌ರ ಪಾದ ಮುಟ್ಟಿ ನಮಸ್ಕರಿಸುತ್ತಿದ್ದರು!; ಶರ್ಮಿಷ್ಠಾ ಮುಖರ್ಜಿ

Exit mobile version