Site icon Vistara News

Republic Day : ಜನವರಿ 26ರಂದೇ ಗಣರಾಜ್ಯೋತ್ಸವ ಆಚರಿಸುವುದು ಯಾಕೆ?

Republic day

ಬೆಂಗಳೂರು: ಭಾರತದಲ್ಲಿ ಪ್ರತಿವರ್ಷ ಜನವರಿ 26ರಂದು ಆಚರಿಸಲಾಗುವ ಗಣರಾಜ್ಯೋತ್ಸವ ದಿನದಂದು (Republic Day) ಮಿಲಿಟರಿ ಶಕ್ತಿ ಮತ್ತು ಸಾಂಸ್ಕೃತಿಕ ವೈವಿಧ್ಯತೆಗಳನ್ನು ಪ್ರದರ್ಶಿಸಲಾಗುತ್ತದೆ. ಭಾರತವನ್ನು ಬ್ರಿಟಿಷ್ ಆಡಳಿತದಿಂದ ಮುಕ್ತಗೊಳಿಸಿ ಸಾರ್ವಭೌಮ, ಪ್ರಜಾಪ್ರಭುತ್ವ ಗಣರಾಜ್ಯವಾಗಿ ಪರಿವರ್ತಿಸಿದ ಐತಿಹಾಸಿಕ ಹಿನ್ನೆಲೆಯನ್ನು ಗುರುತಿಸಲಾಗುತ್ತದೆ. ಭಾರತದ 75 ನೇ ಗಣರಾಜ್ಯೋತ್ಸವಕ್ಕೆ ಇನ್ನೊಂದು ದಿನ ಬಾಕಿ ಇರುವ ಹಿನ್ನೆಲೆಯಲ್ಲಿ ಆ ದಿನದ ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ಅರಿತುಕೊಳ್ಳುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ. ಹೆಚ್ಚುವರಿಯಾಗಿ ಜನವರಿ 26ರಂದು ಗಣರಾಜ್ಯೋತ್ಸವವನ್ನು ಏಕೆ ನಿರ್ದಿಷ್ಟವಾಗಿ ಆಚರಿಸಲಾಗುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಕೂಡ ಅಗತ್ಯ..

ಜನವರಿ 26ರ ಆಯ್ಕೆಯನ್ನು ಅರ್ಥಮಾಡಿಕೊಳ್ಳಲು ಭಾರತದ ಸ್ವಾತಂತ್ರ್ಯ ಹೋರಾಟದ ಹಿನ್ನೆಲೆಯನ್ನು ತಿಳಿದುಕೊಳ್ಳಬೇಕಾಗುತ್ತದೆ. ಜನವರಿ 26, 1930ರಂದು ಮಹಾತ್ಮ ಗಾಂಧಿ ನೇತೃತ್ವದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ‘ಪೂರ್ಣ ಸ್ವರಾಜ್’ ಅಥವಾ ಸಂಪೂರ್ಣ ಸ್ವಾತಂತ್ರ್ಯವನ್ನು ಘೋಷಿಸಿಕೊಂಡಿತು. ಇದು ಬ್ರಿಟಿಷ್ ಆಡಳಿತದಿಂದ ಸ್ವಾತಂತ್ರ್ಯ ಪಡೆಯುವಲ್ಲಿ ಮಹತ್ವದ ಹೆಜ್ಜೆಯಾಗಿದೆ. ಅದಕ್ಕಿಂತ ಹೆಚ್ಚಾಗಿ ಪ್ರಜಾಪ್ರಭುತ್ವ ಮತ್ತು ಸಾರ್ವಭೌಮತ್ವದ ತತ್ವಗಳಿಂದ ದೇಶವನ್ನು ನಿರ್ಮಿಸುವುದಕ್ಕೆ ಇಲ್ಲಿಯೇ ಅಡಿಗಲ್ಲು ಹಾಕಲಾಯಿತು.

ಸಾಂವಿಧಾನಿಕ ಹಿನ್ನೆಲೆ

ಪೂರ್ಣ ಸ್ವರಾಜ್ಯ ಘೋಷಣೆಯ ಎರಡು ದಶಕಗಳ ನಂತರ ಡಾ.ಬಿ.ಆರ್. ಅಂಬೇಡ್ಕರ್ ನೇತೃತ್ವದ ಸಮಿತಿಯು ಭಾರತದ ಸಂವಿಧಾನವನ್ನು ರಚಿಸಿತು. ಇದು ಭಾರತ 1947ರಲ್ಲಿ ಸ್ವಾತಂತ್ರ್ಯ ಪಡೆದ ಬಳಿಕ ನಡೆದ ಮುಖ್ಯ ಘಟನೆಯಾಗಿದೆ. ಈ ಸಂವಿಧಾನವನ್ನು ಜನವರಿ 26, 1950 ರಂದು ಭಾರತ ಅಂಗೀಕರಿಸಿತು. ಇದರ ಮೂಲಕ ರಾಷ್ಟ್ರದ ಆಡಳಿತಕ್ಕೆ ಅಡಿಪಾಯ ಹಾಕಲಾಯಿತು. ಭಾರತ ಗಣರಾಜ್ಯದ (ಒಕ್ಕೂಟ ವ್ಯವಸ್ಥೆಯ) ಜನನಕ್ಕೆ ನಾಂದಿ ಹಾಡಿತು. ಹೀಗಾಗಿ ಜನವರಿ 26ರಂದು ಗಣರಾಜ್ಯೋತ್ಸವ ದಿನವನ್ನಾಗಿ ಆಚರಿಸಲಾಗುತ್ತದೆ. ಹೀಗಾಗಿ ಈ ದಿನವನ್ನು ಸಂಪೂರ್ಣ ಸ್ವರಾಜ್ಯ ಘೋಷಣೆಯ ಹಿನ್ನೆಲೆಯಲ್ಲೂ ನೋಡಲಾಗುತ್ತದೆ.

ಜನವರಿ 26 ರ ಆಯ್ಕೆಯು ಸಾಂಕೇತಿಕವಾಗಿದೆ. ಇದು ಭಾರತದ ಭೂತ, ವರ್ತಮಾನ ಮತ್ತು ಭವಿಷ್ಯವನ್ನು ಸಂಪರ್ಕಿಸುವ ಸೇತುವಾಗಿದೆ. ಈ ದಿನವು ‘ಪೂರ್ಣ ಸ್ವರಾಜ್ಯ’ ಘೋಷಣೆಯ ಸ್ಫೂರ್ತಿ ಪಡೆಯುವ ಜತೆಗೆ ಸ್ವಾತಂತ್ರ್ಯ ಹೋರಾಟದಿಂದ ಪ್ರಜಾಪ್ರಭುತ್ವ ಮತ್ತು ಗಣರಾಜ್ಯದ ವ್ಯವಸ್ಥೆಯ ಸ್ಥಾಪನೆವರೆಗೆ ಹೋರಾಟವನ್ನು ಪ್ರತಿಬಿಂಬಿಸುತ್ತದೆ. ರಾಷ್ಟ್ರೀಯತೆಯ ಪ್ರಯಾಣದಲ್ಲಿ ಪಡೆದ ನಡೆದ ಮಾರ್ಗದರ್ಶನಗಳನ್ನು ಸ್ಮರಿಸಲಾಗುತ್ತದೆ.

ದೂರದೃಷ್ಟಿಯ ನಿರ್ಧಾರ

ಗಣರಾಜ್ಯೋತ್ಸವವು ಕೇವಲ ಔಪಚಾರಿಕ ಆಯ್ಕೆಯಲ್ಲ . ಇದು ಪ್ರಜಾಪ್ರಭುತ್ವದ ಆದರ್ಶಗಳಿಗೆ ಭಾರತ ಹೊಂದಿರುವ ಬದ್ಧತೆಗೆ ಸಾಕ್ಷಿಯಾಗಿದೆ. ಸಮಗ್ರ ಚರ್ಚೆಗಳ ಮೂಲಕ ರಚಿಸಲಾದ ಸಂವಿಧಾನವು ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ತತ್ವಗಳನ್ನು ದೂರದೃಷ್ಟಿಯನ್ನು ಹೊಂದಿತ್ತು. ಜನವರಿ 26 ದಿನವು ಈ ತತ್ವಗಳನ್ನು ರಾಷ್ಟ್ರದ ಚೌಕಟ್ಟಿನಲ್ಲಿ ಹೆಣೆದ ದಿನವಾಗಿದೆ. ಜತೆಗೆ ಆಡಳಿತಕ್ಕಾಗಿ ಚೌಕಟ್ಟನ್ನು ರಚಿಸಿರುವ ದಿನವೂ ಆಗಿದೆ.

ಶೈಕ್ಷಣಿಕ ಮಹತ್ವವೇನು?

ಗಣರಾಜ್ಯೋತ್ಸವವನ್ನು ಶೈಕ್ಷಣಿಕ ಅರಿವಿಗಾಗಿಯೂ ಆಚರಿಸಲಾಗುತ್ತದೆ. ಸಂವಿಧಾನದ ಬಗ್ಗೆ ಆಳವಾದ ತಿಳಿವಳಿಕೆ ಮತ್ತು ಪ್ರಜಾಸತ್ತಾತ್ಮಕ ತತ್ವಗಳನ್ನು ಮಕ್ಕಳಿಗೆ ಹೇಳಿ ಕೊಡುವುದೇ ಈ ದಿನದ ಉದ್ದೇಶವಾಗಿದೆ. ಹೀಗಾಗಿ ದೇಶಾದ್ಯಂತ ಶಾಲೆಗಳು ಮತ್ತು ಕಾಲೇಜುಗಳು ಗಣರಾಜ್ಯೋತ್ಸವವನ್ನು ಆಚರಿಸುತ್ತವೆ. ಈ ದಿನವು ನಾಗರಿಕ ಜವಾಬ್ದಾರಿಯ ಪ್ರಜ್ಞೆಯನ್ನು ಬೆಳೆಸುತ್ತದೆ. ಬೆಳೆಯುವ ಮಕ್ಕಳಿಗೆ ತಮ್ಮ ಜವಾಬ್ದಾರಿಯನ್ನು ಈ ದಿನದಂದು ಹೇಳಿಕೊಡಲಾಗುತ್ತದೆ. ಪ್ರಜಾಪ್ರಭುತ್ವ ಪರಂಪರೆಯ ಬಗ್ಗೆ ಹೆಮ್ಮೆಪಡುವಂತೆ ಮಾಡಲಾಗುತ್ತದೆ.

ಆಚರಣೆಗೆ ಮಾತ್ರ ಸೀಮಿತವಲ್ಲ


ಗಣರಾಜ್ಯೋತ್ಸವವು ಕೇವಲ ಆಚರಣೆ ಅಥವಾ ಕಲಿಕೆಗೆ ಮಾತ್ರ ಸೀಮಿತವಲ್ಲ. ಇದು ದೇಶ ಸಾಗುವ ಪರಿಸ್ಥಿತಿಗಳ ಬಗ್ಗೆ ಆತ್ಮಾವಾಲೋಕನದ ದಿನ ರಾಷ್ಟ್ರ ಎದುರಿಸುತ್ತಿರುವ ಸವಾಲುಗಳು. ಸಾಮಾಜಿಕ-ಆರ್ಥಿಕ ಅಸಮಾನತೆಗಳಿಂದ ಹಿಡಿದು ರಾಜಕೀಯ ಸಂಗತಿಗಳನ್ನು ವಿಮರ್ಶೆ ಮಾಡಲಾಗುತ್ತದೆ. ವಿವಾದಗಳಿಂದ ಮುಕ್ತರಾಗಿ ಪ್ರಜಾಪ್ರಭುತ್ವದ ತತ್ವಗಳನ್ನು ಪ್ರತಿಬಿಂಬಿಸಲು ನಾಗರಿಕರನ್ನು ಪ್ರೇರೇಪಿಸುತ್ತವೆ.

ಇದನ್ನೂ ಓದಿ : Republic Day Bangle Styling: ಗಣರಾಜ್ಯೋತ್ಸವದ ಸಂಭ್ರಮಕ್ಕೆ ತಿರಂಗಾ ಬ್ಯಾಂಗಲ್ಸ್ ಸಾಥ್‌!

ಜಾಗತಿಕ ಹೆಗ್ಗುರುತು

ಗಣರಾಜ್ಯೋತ್ಸವ ದಿನವನ್ನು ಜಾಗತಿಕ ಮನ್ನಣೆಗಾಗಿಯೂ ಆಚರಿಸಲಾಗುತ್ತದೆ. ಭಾರತವು ತನ್ನ ಸಂವಿಧಾನ ಹಾಗೂ ಆಡಳಿತ ತತ್ವಗಳನ್ನು ವಿಶ್ವದ ಮುಂದೆ ಪ್ರಸ್ತುತಪಡಿಸಲು ಈ ದಿನವನ್ನು ಆಚರಿಸುತ್ತದೆ. ಭಾರತದ ರಾಜಕೀಯ ಸಿದ್ಧಾಂತಗಳು, ಸ್ವಾತಂತ್ರ್ಯ ಹೋರಾಟದಿಂದ ಹಿಡಿದು ಆಧುನಿಕ ಭಾರತದ ವರೆಗೆ ಸಾಗಿ ಬಂದ ಹಾದಿಯನ್ನು ಜಗತ್ತಿನ ಮುಂದೆ ಹೇಳುವುದು ಈ ದಿನದ ಹೆಮ್ಮೆಯಾಗಿದೆ.

Exit mobile version