Site icon Vistara News

Jacqueline Fernandez | ನಟಿ ಜಾಕ್ವೆಲಿನರನ್ನು ಯಾಕೆ ಬಂಧಿಸಿಲ್ಲ? ಇ.ಡಿ.ಗೆ ಕೋರ್ಟ್ ತರಾಟೆ!

Jacqueline Fernandes

ನವದೆಹಲಿ: ಹಣ ಸುಲಿಗೆ ಪ್ರಕರಣದಲ್ಲಿ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ (Jacqueline Fernandez) ಅವರನ್ನು ಯಾಕೆ ಬಂಧಿಸಿಲ್ಲ? ಯಾಕೆ ಈ ಇಬ್ಬಂದಿತನ ಎಂದು ಕೋರ್ಟ್, ಜಾರಿ ನಿರ್ದೇಶನಾಲಯ(ಇ.ಡಿ)ಗೆ ಖಾರವಾಗಿ ಪ್ರಶ್ನಿಸಿದೆ. ಜಾಕ್ವೆಲಿನ್ ಬಾಯ್ ಫ್ರೆಂಡ್, ವಂಚಕ ಸುಕೇಶ್ ಚಂದ್ರಶೇಖರ್ ಸೇರಿ ಹಲವರು ಜೈಲಿನಲ್ಲಿದ್ದಾರೆ. ಇದೇ ವಿಷಯವನ್ನು ಪ್ರಸ್ತಾಪಿಸಿದ ಕೋರ್ಟ್, ಎಲ್ಲರೂ ಜೈಲಿನಲ್ಲಿರುವಾಗ ನಟಿ ಏಕೆ ಹೊರಗಿದ್ದಾರೆ ಎಂದು ಕೇಳಿತು.

ಇದಕ್ಕೂ ಮೊದಲು ಇ.ಡಿ., ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರ ಬಳಿ ಸಾಕಷ್ಟು ಹಣವಿದ್ದು, ಅವರು ಬಹಳ ಸುಲಭವಾಗಿ ದೇಶವನ್ನು ಬಿಟ್ಟು ಹೋಗಬಹುದು. ಹಾಗಾಗಿ, ಅವರಿಗೆ ಜಾಮೀನು ನೀಡಬಾರದು ಎಂದು ಮನವಿ ಮಾಡಿಕೊಂಡಿತು. ಈ ಬಗ್ಗೆ ವಿಚಾರಣೆ ನಡೆಸಿದ ಕೋರ್ಟ್, ತನ್ನ ತೀರ್ಪನ್ನು ನಾಳೆಗೆ ಕಾಯ್ದಿಟ್ಟಿದೆ.

ಈ ಹಿಂದೆ, ಜಾಕ್ವೆಲಿನ್ ಫರ್ನಾಂಡಿಸ್ ಅವರಿಗೆ ಮಧ್ಯಂತರ ಜಾಮೀನು ನೀಡಲಾಗಿತ್ತು. ಈ ಜಾಮೀನಿಗೆ ವಿರೋಧ ವ್ಯಕ್ತಪಡಿಸಿದ ಇ.ಡಿ, ಜಾಕ್ವೆಲಿನ್ ತನಿಖೆಗೆ ಸಹಕರಿಸುತ್ತಿಲ್ಲ. ಅವರ ವಿರುದ್ಧ ಗಂಭೀರ ಆರೋಪಗಳಿವೆ. ಯಾವುದೇ ಕ್ಷಣದಲ್ಲಿ ಅವರು ದೇಶವನ್ನು ತೊರೆಯಬಹುದು. ಹಾಗಾಗಿ, ಅವರಿಗೆ ಜಾಮೀನು ನೀಡಬಾರದು ಎಂದು ವಾದ ಮಂಡಿಸಿತು.

200 ಕೋಟಿ ರೂ. ಹಣ ಸುಲಿಗೆ ಪ್ರಕರಣದಲ್ಲಿ ವಂಚಕ ಸುಕೇಶ್ ಚಂದ್ರಶೇಖರ್ ಜತೆಗೆ, ಈತನ ಗೆಳತಿಯೂ ಆಗಿರುವ ಜಾಕ್ವೆಲಿನ್ ಫರ್ನಾಂಡಿಸ್ ಅವರನ್ನು ಹೆಸರಿಸಲಾಗಿದೆ. ಸುಕೇಶ್ ಅವರಿಂದ ದುಬಾರಿ ಗಿಫ್ಟ್‌ಗಳನ್ನು ಪಡೆದುಕೊಂಡಿರುವ ಆರೋಪವಿದೆ. ಶ್ರೀಲಂಕಾ ಮೂಲದ ನಟಿ, ಬಾಲಿವುಡ್ ಮೂಲಕ ಹೆಚ್ಚು ಪ್ರಸಿದ್ಧಿಯಾಗಿದ್ದಾರೆ. ಕನ್ನಡದ ಸೂಪರ್ ಸ್ಟಾರ್ ಸುದೀಪ್ ಜತೆ ಜಾಕ್ವೆಲಿನ್ ಅವರು ವಿಕ್ರಾಂತ್ ರೋಣ ಚಿತ್ರದಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ | Sukesh Case | ಡ್ರೀಮ್ ಮ್ಯಾನ್ ಸುಕೇಶ್‌ನನ್ನು ಮದ್ವೆಯಾಗಲು ಹೊರಟಿದ್ದ ರಕ್ಕಮ್ಮ ಜಾಕ್ವೆಲಿನ್!

Exit mobile version