ಮುಂಬೈ: ಏಕನಾಥ ಶಿಂಧೆ (CM Eknath Shinde) ಅವರ ಬಣವೇ ನಿಜವಾದ ಶಿವಸೇನೆಯಾದರೆ (Real Shiva Sena) ನಮ್ಮನ್ನು(ಉದ್ಧವ್ ಠಾಕ್ರೆ ಬಣ) ಏಕೆ ಅನರ್ಹ ಮಾಡಲಿಲ್ಲ ಎಂದು ಉದ್ಧವ್ ಠಾಕ್ರೆ ಅವರು ಪ್ರಶ್ನಿಸಿದ್ದಾರೆ(Uddhav Thackeray). ಏಕನಾಥ ಶಿಂಧೆ ಅವರ ಬಣವನ್ನು ನಿಜವಾದ ಶಿವಸೇನೆ ಎಂಬ ಸ್ಪೀಕರ್ (Speaker Rahul Narvekar) ಅವರ ಹೇಳಿಕೆ (Disqualification Verdict) ಸುಪ್ರೀಂ ಕೋರ್ಟ್ ನಿಂದನೆಯಾಗುತ್ತದೆಯೇ ಎಂಬುದನ್ನು ಪರಿಶೀಸುತ್ತಿದ್ದೇವೆ ಮತ್ತು ಈ ತೀರ್ಪನ್ನು ಕೋರ್ಟಿನಲ್ಲಿ ಪ್ರಶ್ನಿಸಲಾಗುವುದು ಎಂದು ಹೇಳಿದ್ದಾರೆ. ದಾಖಲೆಯಾಗಿ ನಾವು ಸಲ್ಲಿಸಿದ್ದ ಪಕ್ಷದ ಸಂವಿಧಾನವು ಮಾನ್ಯವಾಗಿಲ್ಲದಿದ್ದರೆ, ನಮ್ಮನ್ನು ಏಕೆ ಅನರ್ಹಗೊಳಿಸಲಿಲ್ಲ ಠಾಕ್ರೆ ಅವರು ಪ್ರಶ್ನಿಸಿದ್ದಾರೆ.
ಶಾಸಕರ ಅನರ್ಹತೆ ಕುರಿತು ಸ್ಪೀಕರ್ ಅವರು ತೀರ್ಪು ಪ್ರಕಟಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಉದ್ಧವ್ ಠಾಕ್ರೆ ಅವರು, ನಾರ್ವೇಕರ್ ಅವರನ್ನು ಯಾಕೆ ಸ್ಪೀಕರ್ ಮಾಡಲಾಗಿತ್ತು ಎಂಬುದು ಈಗ ಸ್ಪಷ್ಟವಾಗಿದೆ. ಅವರು ಷಡ್ಯಂತ್ರ ನಡೆಸಿದ್ದಾರೆ. ಇದು ಪ್ರಜಾಪ್ರಭುತ್ವವನ್ನು ಕೊಲ್ಲುವ ತಂತ್ರ ಎಂದು ನಿನ್ನೆ ನನ್ನ ಅನುಮಾನವನ್ನು ವ್ಯಕ್ತಪಡಿಸಿದ್ದೆ. ಅದು ನಿಜವಾಗಿದೆ. ಸುಪ್ರೀಂ ಕೋರ್ಟ್ ನಿಂದನೆಯಾಗಬಹುದೇ ಎಂಬುದನ್ನು ಪರಿಶೀಲಿಸುತ್ತಿದ್ದೇವೆ ಎಂದು ಅವರು ಹೇಳಿದರು.
#WATCH | Former Maharashtra CM Uddhav Thackeray says, "We will go among the people…We have been going among the people & we will fight together along with the people of the state…" pic.twitter.com/WJweypm76S
— ANI (@ANI) January 10, 2024
ಸಿಎಂ ಏಕನಾಥ ಶಿಂಧೆ ಅವರ ಬಣವೇ ನಿಜವಾದ ಶಿವಸೇನೆ ಎಂದು ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್ ರಾಹುಲ್ ನಾರ್ವೇಕರ್ ಅವರು ಬುಧವಾರ ತೀರ್ಪು ನೀಡಿದ್ದಾರೆ. ಚುನಾವಣಾ ಆಯೋಗದ ಬಳಿ ಇರುವ ಪಕ್ಷದ ಸಂವಿಧಾನದ 1999 ಆವೃತ್ತಿಯನ್ನಾಧರಿಸಿ ನಿರ್ಧಾರ ಕೈಗೊಂಡಿರುವುದಾಗಿ ಹೇಳಿದ್ದಾರೆ. ಠಾಕ್ರೆ ಅವರು ದಾಖಲೆಯಾಗಿ ನೀಡಿದ 2018ರ ಪಕ್ಷದ ಸಂವಿಧಾನವು ಚುನಾವಣಾ ಆಯೋಗದ ಬಳಿ ಇಲ್ಲ. ಹಾಗಾಗಿ, ಅದನ್ನು ದಾಖಲೆಯಾಗಿ ಪರಿಗಣಿಸಿಲ್ಲ ಎಂದು ಸ್ಪೀಕರ್ ತಮ್ಮ ತೀರ್ಪಿನಲ್ಲಿ ಹೇಳಿದ್ದಾರೆ.
ಪಕ್ಷದ 1999ರ ಸಂವಿಧಾನದ ಪ್ರಕಾರ, ಪಕ್ಷದಿಂದ ಏಕನಾಥ ಶಿಂಧೆ ಅವರನ್ನು ಉಚ್ಚಾಟಿಸುವ ಅಧಿಕಾರವು ಉದ್ಧವ್ ಠಾಕ್ರೆ ಅವರಿಗೆ ಇರಲಿಲ್ಲ ಎಂದು ನಾರ್ವೇಕರ್ ಅವರು ತಿಳಿಸಿದ್ದಾರೆ. ಪರಸ್ಪರ ಗುಂಪುಗಳು ಸಲ್ಲಿಸಿದ್ದ ಶಾಸಕರ ಅನರ್ಹತೆಯ ಅರ್ಜಿಯ ವಿಚಾರಣೆಯು ಕಳೆದ ವರ್ಷದ ಜೂನ್‌ನಿಂದ ಪೆಂಡಿಂಗ್‌ನಲ್ಲಿತ್ತು.
ಏನಿದು ವಿವಾದ?
2022ರಲ್ಲಿ ಶಿವಸೇನೆಯು ಇಬ್ಭಾಗವಾಗಿತ್ತು. ಬಿಜೆಪಿಯ ಜತೆ ಕೈ ಜೋಡಿಸಿದ್ದ ಶಿವಸೇನೆಯ ಹಿರಿಯ ನಾಯಕ ಏನನಾಥ ಸಿಂಧೆ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದರು. ಇದರಿಂದಾಗಿ ಶಿವಸೇನೆಯ ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರ ಪತನಗೊಂಡಿತ್ತು. ಬಳಿಕ ಶಿವಸೇನೆಯ ಎರಡೂ ಬಣದವರು ಪರಸ್ಪರ ಅನರ್ಹತೆ ಕೋರಿ ಅರ್ಜಿ ಸಲ್ಲಿಸಿದ್ದರು.
ಚುನಾವಣಾ ಆಯೋಗವು ಶಿಂಧೆ ನೇತೃತ್ವದ ಬಣಕ್ಕೆ ‘ಶಿವಸೇನೆ’ ಹೆಸರು ಮತ್ತು ‘ಬಿಲ್ಲು ಬಾಣ’ ಚಿಹ್ನೆಯನ್ನು ನೀಡಿತ್ತು. ಬಳಿಕ ಉದ್ಧವ್ ಠಾಕ್ರೆ ನೇತೃತ್ವದ ಬಣ ಶಿವಸೇನೆ (Uddhav Balasaheb Thackeray-UBT)ಎಂಬ ಹೆಸರಿನಿಂದ ಗುರುತಿಸಿಕೊಂಡಿತ್ತು. ಕಳೆದ ವರ್ಷ ಜುಲೈಯಲ್ಲಿ ಎನ್‌ಸಿಪಿಯ ಅಜಿತ್ ಪವಾರ್ ಬಣವೂ ಶಿಂಧೆ ನೇತೃತ್ವದ ಸರ್ಕಾರವನ್ನು ಸೇರಿಕೊಂಡಿತು. ಮಹಾರಾಷ್ಟ್ರದಲ್ಲಿ 2024ರ ದ್ವಿತೀಯಾರ್ಧದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ.
ಈ ಸುದ್ದಿಯನ್ನೂ ಓದಿ: Disqualification Verdict: ಸಿಎಂ ಶಿಂಧೆ ಬಣದ ಶಾಸಕರ ಅನರ್ಹತೆ ಇಲ್ಲ; ‘ಮಹಾ’ ಸ್ಪೀಕರ್ ತೀರ್ಪು