Site icon Vistara News

ಇದ್ದರೂ ಜತೆಗೆ, ಸತ್ತರೂ ಜತೆಗೆ; ಅಪಘಾತದಲ್ಲಿ ಪತ್ನಿ ಸಾವು, ನೊಂದ ಪತಿ ನೇಣಿಗೆ ಶರಣು

Break Up

Wife Dies In Accident, Husband Dies By Suicide A Day Later, Leaves Note

ಲಖನೌ: ಮದುವೆಯಾದ ಎರಡು-ಮೂರು ತಿಂಗಳಿಗೇ ವಿಚ್ಛೇದನ (Divorce) ಪಡೆಯುವವರಿದ್ದಾರೆ. ಪ್ರೀತಿಸಿ ಮದುವೆಯಾದವರೇ ಅನುಸರಿಸಿಕೊಂಡು ಹೋಗದೆ, ದಾಂಪತ್ಯ ಮುರಿದುಕೊಳ್ಳುತ್ತಿದ್ದಾರೆ. ಬದಲಾದ ಕಾಲಘಟ್ಟ, ಯೋಚನೆ, ಸಂಪ್ರದಾಯ, ಅಹಂಕಾರ ಇದಕ್ಕೆ ಕಾರಣಗಳು ಇರಬಹುದು. ಆದರೆ, ಉತ್ತರ ಪ್ರದೇಶದಲ್ಲೊಬ್ಬ (Uttar Pradesh) ವ್ಯಕ್ತಿಯು, ಅಪಘಾತದಲ್ಲಿ ಪತ್ನಿ ತೀರಿಕೊಂಡ ಕಾರಣ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಡೆತ್‌ನೋಟ್‌ ಬರೆದಿರುವ ಆತ, “ನಾವು ಇದ್ದರೂ ಜತೆಗೇ, ಸತ್ತರೂ ಜತೆಗೇ” ಎಂಬುದಾಗಿ ಬರೆದಿದ್ದಾರೆ.

ಆರು ತಿಂಗಳ ಹಿಂದೆ 36 ವರ್ಷದ ಯೋಗೇಶ್‌ ಕುಮಾರ್‌ ಹಾಗೂ 28 ವರ್ಷದ ಮಣಿಕರ್ಣಿಕಾ ಕುಮಾರಿ ಮದುವೆಯಾಗಿದ್ದರು. ಇಬ್ಬರೂ ಉತ್ತರ ಪ್ರದೇಶದ ಹರ್ದೋಯಿಯಲ್ಲಿ ನೆಲೆಸಿದ್ದರು. ಮಣಿಕರ್ಣಿಕಾ ಕುಮಾರಿ ನರ್ಸ್‌ ಆಗಿದ್ದರು. ಯೋಗೇಶ್‌ ಕುಮಾರ್‌ ಟೀಚರ್‌ ಆಗಿ ಕೆಲಸ ಮಾಡುತ್ತಿದ್ದರು. ಇಬ್ಬರ ದಾಂಪತ್ಯವೂ ಸುಮಧುರವಾಗಿತ್ತು. ಆದರೆ, ಕಳೆದ ಸೋಮವಾರ (ಏಪ್ರಿಲ್‌ 22) ಮಣಿಕರ್ಣಿಕಾ ಕುಮಾರಿ ಅವರು ತಡಿಯಾವಾಣ ಆರೋಗ್ಯ ಕೇಂದ್ರಕ್ಕೆ ತೆರಳುವಾಗ ಅಪರಿಚಿತ ವಾಹನವು ಮಣಿಕರ್ಣಿಕಾ ಕುಮಾರಿ ಅವರ ಸ್ಕೂಟಿಗೆ ಡಿಕ್ಕಿಯಾಗಿತ್ತು.

ಲಖನೌ-ಹರ್ದೋಯಿ ಹೆದ್ದಾರಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಮಣಿಕರ್ಣಿಕಾ ಕುಮಾರಿ ಮೃತಪಟ್ಟಿದ್ದರು. “ಸುರ್ಸಾ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಅಪಘಾತ ಸಂಭವಿಸಿದೆ. ಮಣಿಕರ್ಣಿಕಾ ಕುಮಾರಿ ಅವರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳುವಾಗ ಅಪರಿಚಿತ ವಾಹನ ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡಿದ್ದರು. ಇದಾದ ಬಳಿಕ ಅವರು ಮೃತಪಟ್ಟಿದ್ದರು. ಮಣಿಕರ್ಣಿಕಾ ಅವರ ಕಚೇರಿಯ ಗುರುತಿನ ಚೀಟಿ ಆಧಾರದ ಮೇಲೆ ಅವರ ಪತಿಗೆ ಕರೆ ಮಾಡಿ ವಿಷಯ ತಿಳಿಸಲಾಯಿತು” ಎಂದು ಸುರ್ಸಾ ಎಸ್‌ಎಚ್‌ಒ ಇಂದ್ರೇಶ್‌ ಕುಮಾರ್‌ ಯಾದವ್‌ ಮಾಹಿತಿ ನೀಡಿದ್ದಾರೆ.

ಡೆತ್‌ನೋಟ್‌ನಲ್ಲಿ ಏನಿದೆ?

ಪತ್ನಿಯ ಸಾವಿನಿಂದ ನೊಂದ ಪತಿಯು ಮನೆಗೆ ಬಂದವರೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಬಳಿ ಡೆತ್‌ನೋಟ್‌ ಪತ್ತೆಯಾಗಿದ್ದು, “ನಾವು ಇದ್ದರೂ ಜತೆಯಾಗಿಯೇ, ಸತ್ತರೂ ಜತೆಯಾಗಿಯೇ” ಎಂಬುದಾಗಿ ಬರೆದಿದ್ದಾರೆ. ಪತ್ನಿಯ ವಸ್ತುಗಳನ್ನು ಮನೆಗೆ ತೆಗೆದುಕೊಂಡು ಹೋದ ಯೋಗೇಶ್‌ ಕುಮಾರ್‌ ಬಾಗಿಲು ಹಾಕಿಕೊಂಡಿದ್ದಾರೆ. ಎಷ್ಟು ಹೊತ್ತಾದರೂ ಬಾಗಿಲು ತೆರೆಯದ ಕಾರಣ ಪಕ್ಕದ ಮನೆಯವರು ಹೋಗಿ ನೋಡಿದಾಗ ಯೋಗೇಶ್‌ ಕುಮಾರ್‌ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ.

ಇದನ್ನೂ ಓದಿ: Viral News: ತಂಗಿಗೆ ಟಿವಿ ಗಿಫ್ಟ್‌ ಕೊಡಲು ಮುಂದಾದ ಪತಿಯನ್ನು ಕೊಲ್ಲಿಸಿದ ಪತ್ನಿ!

Exit mobile version