Site icon Vistara News

Wikipedia | ವಿಕಿಪೀಡಿಯದಂತಹ ಆನ್‌ಲೈನ್‌ ಮೂಲಗಳ ಮೇಲೆ ಸಂಪೂರ್ಣ ಅವಲಂಬನೆ ಕೂಡದು, ಸುಪ್ರೀಂ ಕೋರ್ಟ್‌ ಸೂಚನೆ

Supreme Court On Article 370

Article 370: Constitution doesn’t restrict President from reorganising a state

ನವದೆಹಲಿ: ಆನ್‌ಲೈನ್‌ ವಿಶ್ವಕೋಶ ವಿಕಿಪೀಡಿಯ (Wikipedia) ಸೇರಿ ಯಾವುದೇ ಆನ್‌ಲೈನ್‌ ಮಾಹಿತಿ ಮೂಲಗಳ ಮೇಲೆ ಸಂಪೂರ್ಣವಾಗಿ ಅವಲಂಬನೆಯಾಗಬಾರದು ಎಂದು ಸುಪ್ರೀಂ ಕೋರ್ಟ್‌ ಸೂಚಿಸಿದೆ. ಅದರಲ್ಲೂ, ನ್ಯಾಯಾಲಯಗಳು ಅಥವಾ ನ್ಯಾಯಾಧಿಕರಣಗಳು ಪ್ರಕರಣಗಳ ವಿಲೇವಾರಿ ಮಾಡುವಾಗ ಇವುಗಳ ಮೇಲೆ ಅವಲಂಬನೆಯಾಗಲೇಬಾರದು ಎಂದಿದೆ.

‌ಡೆಸ್ಕ್‌ಟಾಪ್‌ ಕಂಪ್ಯೂಟರ್‌ಗಳ ವರ್ಗೀಕರಣ ಹಾಗೂ ಸುಂಕ ವಿಧಿಸುವ ಪ್ರಕರಣಕ್ಕೆ ಸಂಬಂಧಿಸಿದ ಅರ್ಜಿಯ ವಿಚಾರಣೆ ವೇಳೆ, ಸುಂಕ ಆಯುಕ್ತರು (ಮೇಲ್ಮನವಿ ಹಾಗೂ ಸುಂಕ, ಅಬಕಾರಿ ಹಾಗೂ ಸೇವಾ ತೆರಿಗೆ ಮೇಲ್ಮನವಿ ನ್ಯಾಯಮಂಡಳಿ-CESTAT) ರೆಫರೆನ್ಸ್‌ ನೀಡುವಾಗ ವಿಕಿಪೀಡಿಯ ಮೇಲೆ ಅವಲಂಬನೆಯಾಗಿರುವುದನ್ನು ಗಮನಿಸಿದ ನ್ಯಾಯಾಲಯವು ಸೂಚಿಸಿದೆ.

ವಿಕಿಪೀಡಿಯದಂತಹ ಹಲವು ಆನ್‌ಲೈನ್‌ ಮೂಲಗಳಲ್ಲಿ ಬರಹಗಾರರು ಯಾವುದೇ ಮಾಹಿತಿಯನ್ನು ಎಡಿಟ್‌ ಮಾಡಬಹುದಾಗಿದೆ. ಹಾಗಾಗಿ, ಇಂತಹ ಮೂಲಗಳ ಮೇಲೆ ಹೆಚ್ಚು ಅವಲಂಬಿತರಾಗಿರಬಾರದು. ವಕೀಲರು ಅಧಿಕೃತ ಮೂಲಗಳನ್ನೇ ಅವಲಂಬಿಸುವಂತೆ ನ್ಯಾಯಾಲಯಗಳು ಕೂಡ ಸೂಚಿಸಬೇಕು ಎಂದು ನ್ಯಾಯಪೀಠ ತಿಳಿಸಿತು.

ಆಮದು ಮಾಡಿಕೊಂಡ ಡೆಸ್ಕ್‌ಟಾಪ್‌ಗಳಿಗೆ ಅಗಾಧ ಪ್ರೊಸೆಸಿಂಗ್‌ ಯುನಿಟ್‌ಗಳಿಗೆ ವಿಧಿಸುವ ಸುಂಕಕ್ಕಿಂತಲೂ ಕಡಿಮೆ ಸುಂಕ ವಿಧಿಸಲು ಸಾಧ್ಯವಿಲ್ಲ ಎಂಬುದಾಗಿ ಅಧಿಕಾರಿಗಳು ನೀಡಿದ್ದ ಆದೇಶವನ್ನು ಸಿಇಎಸ್‌ಟಿಎಟಿ ಪೀಠ ಎತ್ತಿ ಹಿಡಿದಿತ್ತು. ಇದನ್ನು ಪ್ರಶ್ನಿಸಿ ಕಂಪನಿಗಳು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದವು. ಸರ್ವೋಚ್ಚ ನ್ಯಾಯಾಲಯವು ಸಿಇಎಸ್‌ಟಿಎಟಿ ಆದೇಶವನ್ನು ರದ್ದುಗೊಳಿಸಿದೆ.

ಇದನ್ನೂ ಓದಿ | Supreme Court Collegium | ಜಡ್ಜ್ ನೇಮಕದಲ್ಲಿ ಸರ್ಕಾರದ ಪ್ರತಿನಿಧಿ ಇರಬೇಕು: ಸುಪ್ರೀಂ ಕೋರ್ಟ್‌ಗೆ ಕೇಂದ್ರ ಪತ್ರ

Exit mobile version