Site icon Vistara News

Rajasthan Election Result: ಬಿಜೆಪಿ ನಾಯಕಿ ವಸಂಧರಾ ‘ರಾಜ’ಸ್ಥಾನದ ಮುಖ್ಯಮಂತ್ರಿ ಆಗ್ತಾರಾ?

Will BJP Leader Vasundhara Raje succeed to CM of Rajasthan?

ಜೈಪುರ: ರಾಜಸ್ಥಾನದಲ್ಲಿ ಸಂಪ್ರದಾಯ ಮರಳಿದೆ. ಪ್ರತಿ ಬಾರಿಯಂತೆ ಈ ಬಾರಿಯು ರಾಜಸ್ಥಾನ ಮತದಾರರು ಆಡಳಿತಾರೂಢ ಪಕ್ಷವನ್ನು ಸೋಲಿಸಿ, ಪ್ರತಿಪಕ್ಷಕ್ಕೆ ಮಣೆ ಹಾಕಿದ್ದಾರೆ(Rajasthan Election Result). ಅಂತೆಯೇ, ಭಾರತೀಯ ಜನತಾ ಪಾರ್ಟಿ (Bhartiya Janata party) ಅಧಿಕಾರಕ್ಕೆ ಏರಿದ್ದು, ಆಡಳಿತಾರೂಢ ಕಾಂಗ್ರೆಸ್ ಪಕ್ಷವು (Congress Party) ಸೋತು ಸುಣ್ಣವಾಗಿದೆ. ಈ ಮಧ್ಯೆ, ಬಿಜೆಪಿಯಿಂದ ಯಾರು ಮುಖ್ಯಮಂತ್ರಿಯಾಗುತ್ತಾರೆಂಬ (Chief Minister) ಚರ್ಚೆ ಜೋರಾಗಿದೆ. ಈ ಹಿಂದೆ ಬಿಜೆಪಿಯಿಂದ ಮುಖ್ಯಮಂತ್ರಿಯಾಗಿದ್ದ ವಸುಂಧರಾ ರಾಜೆ (Vasundhara Raje) ಅವರ ಹೆಸರು ಮುಂಚೂಣಿಯಲ್ಲಿದೆ. ಆದರೆ, ರಾಜೆ ಜತೆ ಇನ್ನೂ ಹಲವರು ಹೆಸರು ಕೇಳಿಬರುತ್ತಿವೆ(Assembly Election 2023). ಹಾಗಾಗಿ, ರಾಜಸ್ಥಾನದ ಮುಂದಿನ ಸಿಎಂ ಯಾರು ಎಂಬ ಕುತೂಹಲ ಗರಿಗೆದರಿದೆ.

ನಾಲ್ಕು ರಾಜ್ಯಗಳ ಚುನಾವಣೆ ಫಲಿತಾಂಶದ ಕುತೂಹಲಕರ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

ವಾಸ್ತವದಲ್ಲಿ ಭಾರತೀಯ ಜನತಾ ಪಾರ್ಟಿಯು ಈ ಬಾರಿ ವಸುಂಧರಾ ರಾಜೆ ಅವರನ್ನು ಸಿಎಂ ಅಭ್ಯರ್ಥಿಯಾಗಿ ಪ್ರೊಜೆಕ್ಟ್ ಮಾಡಿರಲಿಲ್ಲ. ರಾಜ್ಯದಲ್ಲಿ ಹೊಸ ನಾಯಕತ್ವವನ್ನು ಹುಟ್ಟು ಹಾಕುವುದಕ್ಕೆ, ಇಡೀ ಚುನಾವಣೆಯನ್ನು ಪ್ರಧಾನಿ ಮೋದಿ ವರ್ಸಸ್ ಅಶೋಕ್ ಗೆಹ್ಲೋಟ್ ಎಂಬ ರೀತಿಯಲ್ಲಿ ಬಿಂಬಿಸಲಾಗಿತ್ತು.

ಆರಂಭದಲ್ಲಿ ವಸಂಧರಾ ರಾಜೆ ಅವರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಯಿತು. ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ವೇಳೆಯೂ, ರಾಜೆ ಅವರ ಬೆಂಬಲಿಗರಿಗೆ ಟಿಕೆಟ್ ನೀಡುವಾಗ ವಿಳಂಬ ಮಾಡಲಾಗಿತ್ತು. ಆದರೆ, ರಾಜೆ ಅವರನ್ನು ಕಡೆಗಣಿಸುತ್ತಿರುವುದರಿಂದ ಪಾರ್ಟಿಯ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಗಳು ಗೊತ್ತಾಗುತ್ತಿದ್ದಂತೆ ಚುನಾವಣೆಯ ಕೊನೆಯ ಚರಣದಲ್ಲಿ ಅವರನ್ನು ಪ್ರಮುಖ ಬಿಂಬಿಸಲಾಯಿತು. ಮೋದಿ ಜತೆಗೆ ರಾಜೆ ಅವರ ಪೋಟೋಗಳು ಪ್ರಚಾರ ಸಾಮಾಗ್ರಿಗಳಲ್ಲಿ ಕಾಣಿಸಿಕೊಳ್ಳಲಾರಂಭಿಸಿತು. ಅಂತಿಮವಾಗಿ ಬಿಜೆಪಿಯ ಪರವಾಗಿ ಭರ್ಜರಿ ಫಲಿತಾಂಶವೇ ದೊರೆತಿದೆ.

ಈ ಸುದ್ದಿಯನ್ನೂ ಓದಿ: Rajasthan Election Result: ರಾಜಸ್ಥಾನದಲ್ಲಿ ನೆಕ್ಸ್ಟ್ ಸಿಎಂ ‘ರಾಜಕುಮಾರಿ’; ಆದರೆ, ವಸುಂಧರಾ ರಾಜೆ ಅಲ್ಲ!

ಈಗ ನಿಜವಾದ ಸವಾಲು ಇರುವುದು ಬಿಜೆಪಿ ಹೈಕಮಾಂಡ್ ಮುಂದೆ. ವಸುಂಧರ ರಾಜೆ ಅವರನ್ನೇ ಮುಖ್ಯಮಂತ್ರಿ ಮಾಡಬೇಕೇ ಅಥವಾ ಹೊಸ ಮುಖಕ್ಕೆ ಆದ್ಯತೆ ನೀಡಬೇಕೇ ಎಂಬುದು. ಚುನಾವಣಾ ಪೂರ್ವದಲ್ಲಿ ರಾಜಸ್ಥಾನ ಬಿಜೆಪಿಯಲ್ಲಿ ಎಲ್ಲವೂ ಸರಿ ಇರಲಿಲ್ಲ. ಒಡೆದ ಮನೆಯಾಗಿತ್ತು ಎಂಬುದು ನಿರ್ವಿವಾದ. ಆದರೆ, ಈಗಿನ ಗೆಲವು ಈ ಹಿಂದಿನ ಎಲ್ಲ ಸಮಸ್ಯೆಗಳನ್ನು ಮರೆಸಿ ಹಾಕುತ್ತದೆ.

ಮತ್ತೊಬ್ಬ ರಾಜಕುಮಾರಿ ದಿಯಾ ಕುಮಾರಿ, ಕೇಂದ್ರ ಸಚಿವ ಗಜೇಂದ್ರ ಶೆಖಾವತ್ ಸೇರಿದಂತೆ ಹಲವರು ವಸುಂಧರಾ ರಾಜೆ ಜತೆಯಲ್ಲಿ ಸಿಎಂ ಹುದ್ದೆಯ ರೇಸಿನಲ್ಲಿದ್ದಾರೆ. ಹೈಕಮಾಂಡ್ ಈಗ ಚಾಲ್ತಿಯಲ್ಲಿರುವ ಹೆಸರುಗಳ ಪೈಕಿ ಒಬ್ಬರನ್ನು ಆಯ್ಕೆ ಮಾಡುತ್ತಾ ಅಥವಾ ಅಪರಿಚಿತ ಮುಖವನ್ನು ತಂದು ಕೊಡಿಸುತ್ತಾ ಕಾದು ನೋಡಬೇಕು.

ವಸಂಧರಾ ರಾಜೆ ಅವರು ಝಲಾರಪಟಣ್ ಕ್ಷೇತ್ರದಿಂದ 53 ಸಾವಿರ ಮತಗಳ ಅಂತರದಿಂದ ಕಾಂಗ್ರೆಸ್ ರಾಮಲಾಲ್ ವಿರುದ್ಧ ಗೆದ್ದಿದ್ದಾರೆ. ಹಾಲಿ ಸಿಎಂ, ಕಾಂಗ್ರೆಸ್‌ ನಾಯಕ ಅಶೋಕ್ ಗೆಹ್ಲೋಟ್ ಅವರು ಸರ್ದಾರಪುರ ಹಾಗೂ ಸಚಿನ್ ಪೈಲಟ್ ಅವರು ಟೊಂಕ ಕ್ಷೇತ್ರದಿಂದ ಜಯ ಕಂಡಿದ್ದಾರೆ. ಚುನಾವಣಾ ಪ್ರಚಾರದ ವೇಳೆಯೂ ವಸುಂಧರಾ ರಾಜೆ ಅವರು ಕೂಡ ಅಷ್ಟೇನೂ ಹೈಲೆಟ್ ಆಗಿರಲಿಲ್ಲ ಎಂಬುದನ್ನು ಗಮನಿಸಬೇಕು.

ಒಂದೊಮ್ಮೆ ವಸುಂಧರಾ ರಾಜೆ ಅವರನ್ನು ಮುಖ್ಯಮಂತ್ರಿ ಮಾಡದಿದ್ದರೆ ಅವರು ಬಂಡಾಯ ಏಳುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ. ಹಾಗಾಗಿ, ಕಿಂಗ್‌ಮೇಕರ್ ಆಗುವ ಸಾಧ್ಯತೆಗಳೂ ಇವೆ. ಅಂದರೆ, ವಸುಂಧರಾ ಸೂಚಿಸುವ ವ್ಯಕ್ತಿ ಸಿಎಂ ಆಗಬಹುದು. ಆದರೆ, ಬಿಜೆಪಿಯ ಈಗಿನ ಹೈಕಮಾಂಡ್ ಕಾರ್ಯ ವೈಖರಿ ನೋಡಿದರೆ, ಅಲ್ಲಿ ಬಾರ್ಗೆನಿಂಗ್‌ಗೆ ಅವಕಾಶ ಇಲ್ಲ. ಹಾಗಾಗಿ, ಕಾದು ನೋಡಬೇಕು.

ನಾಲ್ಕು ರಾಜ್ಯಗಳ ಚುನಾವಣೆ ಫಲಿತಾಂಶದ ಕುತೂಹಲಕರ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Exit mobile version