Site icon Vistara News

ರಾಜಸ್ಥಾನ, ಛತ್ತೀಸ್‌ಗಢ ಸೋಲಿನೊಂದಿಗೆ 3 ರಾಜ್ಯಗಳಿಗೆ ಸೀಮಿತವಾದ ಕಾಂಗ್ರೆಸ್!

Assam Congress Leaders joined BJP party

ನವದೆಹಲಿ: ನಾಲ್ಕು ರಾಜ್ಯಗಳ ಚುನಾವಣೆಗ ಪೈಕಿ ಮೂರು ರಾಜ್ಯಗಳನ್ನು ಭರ್ಜರಿಯಾಗಿ ಗೆದ್ದಿರುವ ಭಾರತೀಯ ಜನತಾ ಪಾರ್ಟಿಯ (BJP Party) ಸ್ವಂತ ಬಲದೊಂದಿಗೆ ಆಡಳಿತ ನಡೆಸುತ್ತಿರುವ ರಾಜ್ಯಗಳ ಸಂಖ್ಯೆ ಈಗ 12ಕ್ಕೆ ಏರಿಕೆಯಾಗಿದೆ. ಅದೇ ವೇಳೆ, ಎರಡು ರಾಜ್ಯಗಳನ್ನು ಕಳೆದುಕೊಂದಿರುವ ಕಾಂಗ್ರೆಸ್ (Congress Party) ಆಡಳಿತ ರಾಜ್ಯಗಳ ಸಂಖ್ಯೆ ಮೂರಕ್ಕೆ ಕುಸಿದಿದೆ. ಭಾರತೀಯ ಜನತಾ ಪಾರ್ಟಿಯು ಮಧ್ಯ ಪ್ರದೇಶದಲ್ಲಿ ಆಡಳಿತವನ್ನು ಉಸಿಕೊಳ್ಳುವುದರ ಜತೆಗೆ, ಕಾಂಗ್ರೆಸ್ ಅಧಿಕಾರದಲ್ಲಿದ್ದ ರಾಜಸ್ಥಾನ (Rajasthan) ಮತ್ತು ಛತ್ತೀಸ್‌ಗಢವನ್ನು (Chhattisgarh) ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಇನ್ನು ಎರಡು ರಾಜ್ಯಗಳನ್ನು ಕಳೆದುಕೊಂಡಿರುವ ಕಾಂಗ್ರೆಸ್ ದಕ್ಷಿಣ ಭಾರತದಲ್ಲಿ (South India) ಕರ್ನಾಟಕ ಮಾತ್ರವಲ್ಲದೇ ತೆಲಂಗಾಣದಲ್ಲಿ (Telangana) ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದೆ(election result 2023).

ನಾಲ್ಕು ರಾಜ್ಯಗಳ ಚುನಾವಣೆ ಫಲಿತಾಂಶದ ಕುತೂಹಲಕರ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

ಬಿಜೆಪಿ ಸ್ವಂತ ಬಲದ ಮೇಲೆ ಸದ್ಯ ಉತ್ತರಾಖಂಡ, ಹರ್ಯಾಣ, ಉತ್ತರ ಪ್ರದೇಶ, ಗುಜರಾತ್, ಗೋವಾ, ಅಸ್ಸಾಮ್, ತ್ರಿಪುರಾ, ಮಣಿಪುರ, ಅರುಣಾಚಲ ಪ್ರದೇಶ ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿದೆ. ಈ ಸಾಲಿಗೆ ಮಧ್ಯ ಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಢ ರಾಜ್ಯಗಳು ಸೇರ್ಪಡೆಯಾಗಿವೆ. ಅಲ್ಲದೆ, ಮಹಾರಾಷ್ಟ್ರ, ಮೇಘಾಲಯ, ನಾಗಾಲ್ಯಾಂಡ್ ಮತ್ತು ಸಿಕ್ಕಿಂ ರಾಜ್ಯಗಳಲ್ಲಿ ಬಿಜೆಪಿ ಮೈತ್ರಿಕೂಟದ ಸರ್ಕಾರಗಳಿವೆ.

ಛತ್ತೀಸ್‌ಗಢ ಮತ್ತು ರಾಜಸ್ಥಾನ ಸೋಲು ಕಂಡಿರುವ ಕಾಂಗ್ರೆಸ್ ಪಕ್ಷವು ಸ್ವಂತ ಬಲದ ಮೇಲೆ ಕರ್ನಾಟಕ, ಹಿಮಾಚಲ ಪ್ರದೇಶ ಮತ್ತು ತೆಲಂಗಾಣದಲ್ಲಿ ಮಾತ್ರವೇ ಅಧಿಕಾರವನ್ನು ಹೊಂದಿದೆ. ಅಲ್ಲದೇ, ಬಿಹಾರ, ಜಾರ್ಖಂಡ ರಾಜ್ಯಗಳಲ್ಲಿ ಕಾಂಗ್ರೆಸ್ ಮೈತ್ರಿ ಕೂಟದ ಭಾಗವಾಗಿದೆ. ತಮಿಳುನಾಡಿನಲ್ಲಿ ಕಾಂಗ್ರೆಸ್ ಡಿಎಂಕೆಯೊಂದಿಗೆ ಮೈತ್ರಿ ಹೊಂದಿದ್ದರೂ ಸರ್ಕಾರದ ಭಾಗವಾಗಿಲ್ಲ.

ಉತ್ತರ ಭಾರತದಲ್ಲಿ ಆಪ್ ಪ್ರಮುಖ ಪ್ರತಿಪಕ್ಷ!

ಮಜಾ ಅಂದರೆ, ಉತ್ತರ ಭಾರತದಲ್ಲಿ ಆಮ್ ಆದ್ಮಿ ಪಾರ್ಟಿ ಈಗ ಪ್ರಮುಖ ಪ್ರತಿಪಕ್ಷದ ಸ್ಥಾನವನ್ನು ಆಕ್ರಮಿಸಿಕೊಂಡಿದೆ. ದಿಲ್ಲಿ ಮತ್ತು ಪಂಜಾಬ್‌ನಲ್ಲಿ ಆಡಳಿತ ನಡೆಸುತ್ತಿರುವ ಆಪ್, ಕಾಂಗ್ರೆಸ್‌ನಿಂದ ಪ್ರತಿಪಕ್ಷ ಸ್ಥಾನವನ್ನು ಕಸಿದುಕೊಂಡಿದೆ. ಇವತ್ತಿನ ಫಲಿತಾಂಶಗಳ ಬಳಿಕ, ದಿಲ್ಲಿ ಮತ್ತು ಪಂಜಾಬ್ ಎರಡು ಆಡಳಿತ ರಾಜ್ಯಗಳೊಂದಿಗೆ ಆಮ್ ಆದ್ಮಿ ಪಾರ್ಟಿ ಉತ್ತರ ಭಾರತದಲ್ಲಿ ಪ್ರಮುಖ ಪ್ರತಿ ಪಕ್ಷವಾಗಿ ಹೊರಹೊಮ್ಮಿದೆ ಎಂದು ಆಪ್‌ ನಾಯಕ ಜಾಸ್ಮಿನ್ ಶಾ ಅವರು ಎಕ್ಸ್ ವೇದಿಕೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಭಾರತದಲ್ಲಿ ಸದ್ಯ ಬಿಜೆಪಿ, ಕಾಂಗ್ರೆಸ್, ಬಹುಜನ ಸಮಾಜ ಪಾರ್ಟಿ(ಬಿಎಸ್ಪಿ), ಸಿಪಿಎಂ, ನ್ಯಾಷನಲ್ ಪೀಪಲ್ಸ್ ಪಾರ್ಟಿ(ಎನ್‌ಪಿಪಿ) ಆಮ್ ಆದ್ಮ ಪಾರ್ಟಿ(ಆಪ್)ಗಳು ರಾಷ್ಟ್ರೀಯ ಪಕ್ಷಗಳಾಗಿವೆ. 2024ರಲ್ಲಿ ಸಿಕ್ಕಿಮ್, ಅರುಣಾಚಲ ಪ್ರದೇಶ, ಒಡಿಶಾ, ಆಂಧ್ರ ಪ್ರದೇಶ ರಾಜ್ಯಗಳ ಚುನಾವಣೆಯು ನಡೆಯಲಿದೆ. ಈ ಚುನಾವಣೆಗಳ ಜತೆಗೆ ಲೋಕಸಭೆ ಚುನಾವಣೆ ಕೂಡ ನಡೆಯಲಿದೆ.

ನಾಲ್ಕು ರಾಜ್ಯಗಳ ಚುನಾವಣೆ ಫಲಿತಾಂಶದ ಕುತೂಹಲಕರ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Exit mobile version