Site icon Vistara News

Congress Party: ಕಾಂಗ್ರೆಸ್ ಹೊರತಾದ ಬಿಜೆಪಿ ವಿರುದ್ಧದ ಕೂಟಕ್ಕೆ ಅರ್ಥವೇ ಇಲ್ಲ ಎಂದ ಜೈರಾಮ್ ರಮೇಶ್

Jairam Ramesh

PM Narendra Modi making Congress corrupt-mukt: Jairam Ramesh on Naveen Jindal's BJP switch

ನವದೆಹಲಿ: ಕಾಂಗ್ರೆಸ್‌ಗೆ (Congress Party) ಮಾತ್ರ ದೇಶಾದ್ಯಂತ ಅಸ್ತಿತ್ವ ಇದೆ. ಬಿಜೆಪಿಯ ವಿರುದ್ಧ ರಚನೆಯಾಗುವ ಯಾವುದೇ ಕೂಟಕ್ಕೆ ಕಾಂಗ್ರೆಸ್ಸೇ ಆಧಾರ. ಒಂದು ವೇಳೆ, ಕಾಂಗ್ರೆಸ್ ಇಲ್ಲದ ಬಿಜೆಪಿ ವಿರೋಧಿ ಕೂಟ ಅಪ್ರಸ್ತುತ ಅಥವಾ ಅರ್ಥರಹಿತವಾಗಿರುತ್ತದೆ ಎಂದು ಕಾಂಗ್ರೆಸ್‌ ನಾಯಕ ಜೈರಾಮ್ ರಮೇಶ್ (Jairam Ramesh) ಅವರು ಅಭಿಪ್ರಾಯಪಟ್ಟಿದ್ದಾರೆ. ಇದೇ ವೇಳೆ, 2024ರ ಸಾರ್ವತ್ರಿಕ ಚುನಾವಣೆ ವೇಳೆ, ಕಾಂಗ್ರೆಸ್ ಪ್ರತಿ ರಾಜ್ಯದಲ್ಲಿ ಸ್ವಂತ ಬಲದ ಮೇಲೆ ಸ್ಪರ್ಧಿಸಲು ಮುಂದಾಗಬೇಕು ಎಂದೂ ಅವರು ಹೇಳಿದ್ದಾರೆ.

ಯಾವುದೇ ಪ್ರತಿಪಕ್ಷ ಕೂಟವು ಕ್ರಿಯಾತ್ಮಕ ಅಜೆಂಡಾ ಮೇಲೆ ನಿರ್ಮಾಣವಾಗಬೇಕು. ಅದು ಕೇವಲ ಬಿಜೆಪಿ ವಿರೋಧಿ ನೇತ್ಯಾತ್ಮಕ ದೃಷ್ಟಿಯಿಂದ ಅಥವಾ ಸರ್ಕಾರ ವಿರೋಧಿ ದೃಷ್ಟಿಯಿಂದ ರಚಿತವಾಗಬಾರದು. ಇದು ಸಕಾರಾತ್ಮಕ ಮತ್ತು ರಚನಾತ್ಮಕ ಅಜೆಂಡಾ ಇಟ್ಟುಕೊಂಡು ರಚನೆಯಾಗಬೇಕು. ವಿವಿಧ ರಾಜಕೀಯ ಪಕ್ಷಗಳ ಜತೆಗೆ ಮಾತುಕತೆ ನಡೆಸುವ ಪ್ರಕ್ರಿಯೆಗೆ ನಾವು ಚಾಲನೆ ನೀಡುತ್ತಿದ್ದೇವೆ ಎಂದು ಅವರು ಸುದ್ದಿಸಂಸ್ಥೆಗೆ ಹೇಳಿದ್ದಾರೆ.

ಈ ವರ್ಷ ಗುಜರಾತ್‌ನ ಪೋರ್‌ಬಂದರ್‌ನಿಂದ ಅರುಣಾಚಲ ಪ್ರದೇಶದ ಪರಶುರಾಮ ಕುಂಡ್‌ವರೆಗಿನ ಮತ್ತೊಂದು ಯಾತ್ರೆಗೆ ತಾನು ಖಂಡಿತವಾಗಿಯೂ ಬೆಂಬಲ ನೀಡುತ್ತೇನೆ. ಆದರೆ, ಈ ಬಗ್ಗೆ ಪಕ್ಷವು ಅಂತಿಮವಾಗಿ ನಿರ್ಧಾರ ಕೈಗೊಳ್ಳಬೇಕಾಗುತ್ತದೆ ಎಂದು ಜೈರಾಮ್ ರಮೇಶ್ ಅವರು ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಇದನ್ನೂ ಓದಿ: BRS Public Meeting | ಕೆಸಿಆರ್‌ ನೇತೃತ್ವದಲ್ಲಿ ಸಭೆ, 3 ರಾಜ್ಯಗಳ ಸಿಎಂಗಳು ಭಾಗಿ, ತೃತೀಯ ರಂಗಕ್ಕೆ ಸಭೆ ಮುನ್ನುಡಿ?

ಕನ್ಯಾಕುಮಾರಿಯಿಂದ ಕಾಶ್ಮೀರದವರೆಗಿನ ಭಾರತ್ ಜೋಡೋ ಯಾತ್ರೆ ಸೆಪ್ಟೆಂಬರ್ 7ರಿಂದ ಆರಂಭವಾಗಿತ್ತು. ಶ್ರೀನಗರದಲ್ಲಿ ಜನವರಿ 30 ಅಂದರೆ ನಾಳೆ ಮುಕ್ತಾಯವಾಗಲಿದೆ. ಒಟ್ಟು 145 ದಿನಗಳ ಕಾಲ ನಡೆದ ಯಾತ್ರೆಯು 3,500 ಕಿಮೀ ಕ್ರಮಿಸಿದೆ. ರಾಹುಲ್ ಗಾಂಧಿ ಅವರು ನೇತೃತ್ವದಲ್ಲಿ ಪಾದಯಾತ್ರೆಯನ್ನು ಆಯೋಜಿಸಲಾಗಿತ್ತು.

Exit mobile version