Site icon Vistara News

Physical Abuse : ಚಲಿಸುತ್ತಿದ್ದ ರೈಲಿನಲ್ಲಿಯೇ 30 ವರ್ಷದ ಯುವತಿ ಮೇಲೆ ಅತ್ಯಾಚಾರ

Physical Abuse

ಸಾತ್ನಾ: ಚಲಿಸುತ್ತದ್ದ ಮೆಮು ರೈಲಿನಲ್ಲಿ 30 ವರ್ಷದ ಯುವತಿ ಮೇಲೆ ಅತ್ಯಾಚಾರ ಎಸಗಿದ (Physical Abuse) ಘಟನೆ ಮಧ್ಯಪ್ರದೇಶದ ಕಟ್ನಿ ಜಿಲ್ಲೆಯಲ್ಲಿ ನಡೆದಿದೆ ಎಂದು ಸರ್ಕಾರಿ ರೈಲ್ವೆ ಪೊಲೀಸ್ (ಜಿಆರ್​ಪಿ ) ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ. ಭಾನುವಾರ ಸಂಜೆ ಸತ್ನಾ ಮತ್ತು ಕಟ್ನಿ ವಿಭಾಗಗಳ ನಡುವಿನ ಪಕಾರಿಯಾ ನಿಲ್ದಾಣದಲ್ಲಿ ಮಹಿಳೆ ಜಬಲ್ಪುರ್-ರೇವಾ ಮೆಮು ರೈಲನ್ನು ಹತ್ತಿದ್ದರು. ಮಾರ್ಗ ಮಧ್ಯದಲ್ಲಿ ಆರೋಪಿಯು ಅತ್ಯಾಚಾರ ಮಾಡಿದ್ದ ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಬಾಂಡಾ (ಉತ್ತರ ಪ್ರದೇಶ) ನಿವಾಸಿ ಪಂಕಜ್ ಕುಶ್ವಾಹ (23) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಸತ್ನಾ ಜಿಆರ್ಪಿ ಠಾಣೆಯ ಉಸ್ತುವಾರಿ ಎಲ್ ಪಿ ಕಶ್ಯಪ್ ಆರೋಪಿಯ ಬಂಧನ ಮಾಹಿತಿ ನೀಡಿದ್ದಾರೆ. ಪಂಕಜ್​ ಯುವತಿಯನ್ನು ರೈಲಿನ ಶೌಚಾಲಯದಲ್ಲಿ ಅತ್ಯಾಚಾರ ಮಾಡಿದ್ದ. ತಪ್ಪಿಸಿಕೊಂಡು ಹೊರಗೆ ಬಂದಿದ್ದ ಆಕೆ ಸತ್ನಾ ನಿಲ್ದಾಣದ ಜಿಆರ್​ಪಿಗೆ ಮಾಹಿತಿ ನೀಡಿದ್ದಳು. ನಂತರ ವ್ಯಕ್ತಿಯನ್ನು ಬಂಧಿಸಲು ತಂಡವನ್ನು ಕಳುಹಿಸಲಾಯಿತು ಎಂದು ಅವರು ಹೇಳಿದರು.

ಇದನ್ನೂ ಓದಿ : Article 370: ಕಾಶ್ಮೀರ ಕುರಿತ ಸುಪ್ರೀಂ ತೀರ್ಪಿಗೆ ಪಾಕಿಸ್ತಾನದ ಅಧಿಕಪ್ರಸಂಗ ಹೇಳಿಕೆ!

ಯುವತಿ ದೂರು ನೀಡುತ್ತಿದ್ದಂತೆ ಬೆದರಿದ ಅರೋಪಿ ರೈಲಿನ ಶೌಚಾಲಯದಲ್ಲಿಯೇ ಬಾಗಿಲು ಹಾಕಿ ಬಚ್ಚಿಟ್ಟುಕೊಂಡಿದ್ದ. ರೈಲು ರೇವಾ ತಲುಪಿದಾಗ ಬೀಗ ಅಧಿಕಾರಿಗಳು ಮುರಿದು ಆತನನ್ನು ಬಂಧಿಸಿದ್ದಾರೆ. ಆರೋಪಿಗಳ ಕ್ರಿಮಿನಲ್ ದಾಖಲೆಯ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್ಪಿ) ಸಾರಿಕಾ ಪಾಂಡೆ ಹೇಳಿದ್ದಾರೆ.

ಎಸಿ ಕೋಚ್​ ಏರಿದ್ದ ಮಹಿಳೆ

ಪ್ಯಾಸೆಂಜರ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಯುವತಿ ಪಕಾರಿಯ ರೈಲು ನಿಲ್ದಾಣದಲ್ಲಿ ಪಕ್ಕದಲ್ಲಿ ನಿಂತಿದ್ದ ವಿಶೇಷ ರೈಲಿನ ಒಳಗೆ ನುಗ್ಗಿದ್ದರು. ಅವರು ಶೌಚಕ್ಕಾಗಿ ಅಲ್ಲಿಗೆ ಹೋಗಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ. ಆಕೆಯನ್ನು ಹಿಂಬಾಲಿಸಿಕೊಂಡು ಬಂದ ಕಮಲೇಶ್ ನಿರ್ಜನವಾಗಿದ್ದ ಎಸಿ ಕೋಚ್ ಬಾಗಿಲು ಹಾಕಿ ಅತ್ಯಾಚಾರವೆಸಗಿದ್ದಾನೆ.

40 ಕಿಲೋಮೀಟರ್ ವರೆಗೂ ರೈಲು ಚಲಿಸಿದ್ದು, ಸತ್ನಾ ನಿಲ್ದಾಣದಲ್ಲಿ ನಿಂತಾಗ ಯುವತಿ ರೈಲಿನಿಂದ ಹಾರಿ ರೈಲ್ವೆ ಪೊಲೀಸ್ ಠಾಣೆಗೆ ತೆರಳಿ ವಿಷಯವನ್ನು ವಿವರಿಸಿದ್ದಾರೆ. ಕೂಡಲೇ ರೈಲ್ವೆ ಪೊಲೀಸ್ ಒಬ್ಬರು ವಿಶೇಷ ರೈಲಿನ ಎಸಿ ಕೋಚ್ ಏರಿದ್ದು, ಈ ಸಂದರ್ಭದಲ್ಲಿ ಕಮಲೇಶ್, ಬಾಗಿಲು ಹಾಕಿಕೊಂಡು ಅಡಗಿ ಕುಳಿತಿದ್ದಾನೆ. ಅಷ್ಟರೊಳಗೆ ಇತರೆ ನಿಲ್ದಾಣಗಳ ರೈಲ್ವೆ ಪೊಲೀಸರಿಗೂ ಮಾಹಿತಿ ತಲುಪಿದ್ದು, ಅಂತಿಮವಾಗಿ ಎಸಿ ಕೋಚ್ ಬಾಗಿಲು ಮುರಿದು ಆರೋಪಿಯನ್ನು ಬಂಧಿಸಲಾಗಿದೆ.

Exit mobile version