Site icon Vistara News

ಬಸ್‌ ಚಲಿಸುವಾಗಲೇ ನಿದ್ದೆ ಮಾಡಿದ ಚಾಲಕ, ಅಗ್ನಿಗೆ ಸಿಲುಕಿ ಚಿರನಿದ್ರೆಗೆ ಜಾರಿದ ಮಹಿಳೆ

Bus Catches Fire

Woman burnt alive as bus overturns, catches fire in Telangana; driver fell asleep

ಹೈದರಾಬಾದ್:‌ ತೆಲಂಗಾಣದಲ್ಲಿ ಖಾಸಗಿ ಬಸ್‌ ಉರುಳಿ ಬಿದ್ದು ಬೆಂಕಿ ಹೊತ್ತಿಕೊಂಡಿದ್ದು, ಒಬ್ಬ ಮಹಿಳೆ ಅಗ್ನಿ ಜ್ವಾಲೆಗೆ ಸಿಲುಕಿ ಮೃತಪಟ್ಟಿದ್ದಾರೆ. ತೆಲಂಗಾಣದ (Telangana) ಜೋಗುಲಾಂಬ ಗದ್ವಾಲ್‌ (Jogulamba Gadwal) ಜಿಲ್ಲೆಯಲ್ಲಿ ಶನಿವಾರ (ಶನಿವಾರ 13) ಬೆಳಗಿನ ಜಾವ ದುರಂತ ಸಂಭವಿಸಿದೆ. ಬೆಂಕಿ ಹೊತ್ತಿದ ಕಾರಣ ಮತ್ತೊಬ್ಬ ಪ್ರಯಾಣಿಕ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಅವರ ಸ್ಥಿತಿಯೂ ಗಂಭೀರವಾಗಿದೆ ಎಂದು ಮೂಲಗಳು ತಿಳಿಸಿವೆ.

ಜಗನ್‌ ಅಮೆಜಾನ್‌ ಎಂಬ ಟ್ರಾವೆಲ್ಸ್‌ನ ಬಸ್‌ ಹೈದರಾಬಾದ್‌ನಿಂದ ಚಿತ್ತೂರ್‌ಗೆ ತೆರಳುತ್ತಿತ್ತು. ಬೆಳಗ್ಗೆ 3 ಗಂಟೆ ಸುಮಾರಿಗೆ ಚಾಲಕನು ಬಸ್‌ ಚಲಾಯಿಸುವಾಗಲೇ ನಿದ್ದೆಯ ಮಂಪರಿಗೆ ಜಾರಿದ್ದೇನೆ. ಇದರಿಂದ ಬಸ್‌ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದೆ. ಕೂಡಲೇ ಬಸ್‌ ಚಾಲಕನು ವಾಹನದಿಂದ ಜಿಗಿದಿದ್ದಾನೆ. ಆದರೆ, ವಾಹನದಿಂದ ಇಳಿಯಲು ಆಗದ ಮಹಿಳೆಯು ಬಸ್‌ನಲ್ಲಿಯೇ ಸುಟ್ಟು ಕರಕಲಾಗಿದ್ದಾರೆ ಎಂದು ತಿಳಿದುಬಂದಿದೆ. ಬಸ್‌ ಚಾಲಕನು ಪರಾರಿಯಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಹೊತ್ತಿ ಉರಿದ ಬಸ್

ಅಪಘಾತಗಳಿಗೆ ಹೆಚ್ಚಿನ ಜನ ಬಲಿ

ರಸ್ತೆ ಸಾರಿಗೆ ಹಾಗೂ ಹೆದ್ದಾರಿಗಳ ಸಚಿವಾಲಯವು 2023ರ ನವೆಂಬರ್‌ನಲ್ಲಿ ಬಿಡುಗಡೆ ಮಾಡಿದ ವರದಿ ಪ್ರಕಾರ, ತೆಲಂಗಾಣದಲ್ಲಿ ಅಪಘಾತಗಳ ಸಂಖ್ಯೆ ಇಳಿಕೆಯಾದರೂ, ಅಪಘಾತದಿಂದ ಮೃತಪಡುವವರ ಸಂಖ್ಯೆ ಜಾಸ್ತಿಯಾಗಿದೆ ಎಂದು ತಿಳಿಸಿದೆ. ವರದಿ ಪ್ರಕಾರ, ತೆಲಂಗಾಣದಲ್ಲಿ 2018ರಲ್ಲಿ 22,230 ರಸ್ತೆ ಅಪಘಾತಗಳು ಸಂಭವಿಸಿದ್ದವು. ಆದರೆ, 2022ರಲ್ಲಿ ಅಪಘಾತಗಳ ಸಂಖ್ಯೆ 21,619ಕ್ಕೆ ಇಳಿಕೆಯಾಗಿತ್ತು. ಇನ್ನು 2018ರಲ್ಲಿ ಅಪಘಾತಗಳಲ್ಲಿ 2,064 ಮಂದಿ ಮೃತಪಟ್ಟಿದ್ದರು. ಆದರೆ, ಇದು 2022ರಲ್ಲಿ 3,010 ಜನ ಮೃತಪಟ್ಟಿದ್ದರು. ಕಳೆದ ಐದು ವರ್ಷಗಳಲ್ಲಿ ತೆಲಂಗಾಣದಲ್ಲಿ ಅಪಘಾತಗಳಿಂದ ಮೃತಪಟ್ಟವರ ಸಂಖ್ಯೆ ಶೇ.45ರಷ್ಟು ಜಾಸ್ತಿಯಾಗಿದೆ.

ಇದನ್ನೂ ಓದಿ: Road Accident : ಒಂದೇ ದಿನ ಮೂವರು ಬೈಕ್‌ ಸವಾರರ ಪ್ರಾಣ ತೆಗೆದ ಅಪಘಾತಗಳು

ಕೆಲ ದಿನಗಳ ಹಿಂದಷ್ಟೇ ಬೆಂಗಳೂರಿನ ನೆಲಮಂಗಲದಲ್ಲಿ ಚಲಿಸುತ್ತಿದ್ದಾಗಲೇ ಕಾರಿನ ಎಂಜಿನ್‌ನಲ್ಲಿ (car Fire) ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣ ಮಾತ್ರದಲ್ಲಿ ಸುಟ್ಟು ಕರಕಲಾಗಿತ್ತು. ಬೆಂಕಿಯಿಂದ ತಪ್ಪಿಸಿಕೊಳ್ಳಲಾಗದೆ ಕಾರು ಚಾಲಕ ಸಜೀವ ದಹನವಾಗಿದ್ದ. ಬೆಂಗಳೂರು ಉತ್ತರ ತಾಲೂಕು ಅಂಚೆಪಾಳ್ಯದಲ್ಲಿ ಎರ್ಟಿಗಾ ಸಿಎನ್‌ಜಿ ಕಾರು ಭಸ್ಮವಾಗಿತ್ತು. ನೆಲಮಂಗಲ ಬೆಂಗಳೂರು ಮಾರ್ಗದಲ್ಲಿ ಸಂಚರಿಸುತ್ತಿದ್ದ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕ್ಷಣ ಮಾತ್ರದಲ್ಲಿ ಕಾರು ಪೂರ್ತಿ ಬೆಂಕಿ ಆವರಿಸಿಕೊಂಡಿತ್ತು. ಕಾರಲ್ಲಿದ್ದ ಚಾಲಕ ಕಿರುಚಾಡಿಕೊಂಡಿದ್ದ. ಬೆಂಕಿ ದಟ್ಟವಾಗಿದ್ದರಿಂದ ಸ್ಥಳೀಯರಿಗೂ ಸಹಾಯಕ್ಕೆ ಧಾವಿಸಲು ಸಾಧ್ಯವಾಗಿಲ್ಲ ಎನ್ನಲಾಗಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version