ಈ ಮಹಿಳೆಯದ್ದು ಮುಗ್ಧತನೋ, ಮೂರ್ಖತನವೋ ಗೊತ್ತಿಲ್ಲ. ಅಥವಾ ಕಷ್ಟಗಳಿಂದ ಕಂಗೆಟ್ಟು ಮೂಡಿದ ಹತಾಶೆಯೋ..ನಮಗರ್ಥ ಆಗುವುದಿಲ್ಲ. ಆದರೆ ಯಾರೋ ಹೇಳಿದ ಮಾತನ್ನು ನಂಬಿ ಪ್ರಾಣವನ್ನೇ ಕಳೆದುಕೊಂಡಿದ್ದಾಳೆ. ಮಗನ ಭವಿಷ್ಯ ಭದ್ರ ಮಾಡಲು ಹೋಗಿ ಅನ್ಯಾಯವಾಗಿ ಜೀವ ಬಿಟ್ಟಿದ್ದಾಳೆ (Woman Died). ಆ್ಯಕ್ಸಿಡೆಂಟ್ ಆದರೆ ಸರ್ಕಾರದಿಂದ ಪರಿಹಾರದ ರೂಪದಲ್ಲಿ ಹಣ ಬರುತ್ತದೆ. ಅದರಲ್ಲಿ ಮಗನ ಶಾಲೆ ಫೀಸ್ ಕಟ್ಟಬಹುದು ಎಂದು ಭಾವಿಸಿ, ವೇಗವಾಗಿ ಬರುತ್ತಿದ್ದ ಬಸ್ಗೆ ತಾನೇ ಹೋಗಿ ಡಿಕ್ಕಿ ಹೊಡೆದು (Woman Hits To Bus) ಮೃತಪಟ್ಟಿದ್ದಾಳೆ.
ತಮಿಳುನಾಡಿನ ಸೇಲಂನಲ್ಲಿ ನಡೆದ ಘಟನೆಯ ವಿಡಿಯೊ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ. ಸೇಲಂನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸ್ವಚ್ಛತಾ ಕೆಲಸ ಮಾಡಿಕೊಂಡಿದ್ದ ಪಾಪತಿ (45) ಹೀಗೊಂದು ತಪ್ಪು ನಿರ್ಧಾರ ಮಾಡಿದವರು. ಪಾಪಾತಿ ಕಳೆದ 15ವರ್ಷಗಳಿಂದಲೂ ಗಂಡನಿಂದ ದೂರವಿದ್ದರು. ಒಂಟಿಯಾಗಿ ಮಕ್ಕಳನ್ನು ನೋಡಿಕೊಂಡಿದ್ದಳು. ಮಗನ ಶಾಲೆಯ ಫೀಸ್ ಕಟ್ಟಲು ಅವರ ಬಳಿ ಸಾಕಷ್ಟು ಹಣ ಇರಲಿಲ್ಲ. ಮಗ ಚೆನ್ನಾಗಿ ಓದಲಿ ಎಂಬ ಕಾರಣಕ್ಕೆ ಹಣ ಹೊಂದಿಸಲು ಪರದಾಡುತ್ತಿದ್ದಾಗಲೇ, ಆಕೆಗೆ ಯಾರೋ ಹೀಗೊಂದು ಸಲಹೆ ಕೊಟ್ಟರು. ಆ್ಯಕ್ಸಿಡೆಂಟ್ ಆಗಿ ಗಾಯಗೊಂಡರೆ ಸರ್ಕಾರದಿಂದ ಪರಿಹಾರ ಸಿಗುತ್ತದೆ ಎಂದು ಹೇಳಿದರು. ಅದನ್ನಾಕೆ ನಂಬಿಕೊಂಡಿದ್ದರು.
ಇದನ್ನೂ ಓದಿ: Road Accident : ಬೈಕ್‌ಗಳ ನಡುವೆ ಅಪಘಾತ; ಅಜ್ಜ ಸ್ಥಳದಲ್ಲೇ ಮೃತ್ಯು; ಮೊಮ್ಮಗನಿಗೆ ಗಾಯ
ಜೂನ್ 28ರಂದು ಪಾಪತಿ ಅದೊಂದು ಕೆಟ್ಟ ನಿರ್ಧಾರ ಮಾಡಿದ್ದಾರೆ. ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದವರು ಏಕಾಏಕಿ ರಸ್ತೆ ಮಧ್ಯೆ ಬರುತ್ತಿದ್ದ ಬಸ್ ಎದುರು ಹೋಗಿದ್ದಾರೆ. ಬಸ್ ಡಿಕ್ಕಿಯಾದ ರಭಸಕ್ಕೆ ಕೆಳಗೆ ಬಿದ್ದವರು ಮತ್ತೆ ಏಳಲಿಲ್ಲ. ಅಲ್ಲೇ ಅವರ ಜೀವ ಹೋಗಿದೆ. ಪಾಪತಿ ಬಡತನದಿಂದ ಇತ್ತೀಚೆಗೆ ಬೇಸತ್ತಿದ್ದರು. ಖಿನ್ನತೆಗೆ ಜಾರಿದ್ದರು. ಮಗನ ಶಾಲೆ ಫೀಸ್ 45 ಸಾವಿರ ರೂ. ಆಗಿತ್ತು. ಅದನ್ನು ಕಟ್ಟುವ ಬಗ್ಗೆ ತೊಳಲಾಟಕ್ಕೆ ಒಳಗಾಗಿದ್ದರು. ಅಂತಿಮವಾಗಿ ಇದೊಂದು ದುರಂತಕ್ಕೀಡಾಗಿದ್ದಾರೆ.
కుమారుడి చదువు కోసం తల్లి ఆత్మహత్య
— Telugu Scribe (@TeluguScribe) July 18, 2023
తాను చనిపోతే కుమారుడి చదువు కోసం ప్రభుత్వం ఆర్థిక సాయం చేస్తుందని భావించిన ఓ తల్లి బస్సు కింద పడి ఆత్మహత్య చేసుకుంది.
కుమారుడి చదువు కోసం రూ.45 వేలు అవసరం అయితే డబ్బుల్లేక మనస్తాపం చెందిన ఆ తల్లి బస్సుకు ఎదురెళ్లి ఆత్మహత్యకు పాల్పడింది. pic.twitter.com/VW2e0YKQ5E