Site icon Vistara News

Viral Video: ಫೋನ್‌ನಲ್ಲೇ ಮುಳುಗಿರಬೇಡ ಎಂದು ಪೋಷಕರು ಬೈದಿದ್ದಕ್ಕೆ ಜಲಪಾತಕ್ಕೆ ಜಿಗಿದ ಯುವತಿ

Woman Jumps Into Waterfall

Woman jumps into waterfall in Chhattisgarh after parents scold her for using mobile phone

ರಾಯ್‌ಪುರ: ಭಾರತ ಸೇರಿ ಪ್ರಪಂಚದಾದ್ಯಂತ ಮೊಬೈಲ್‌ ಈಗ ಗಾಳಿ, ನೀರು, ಆಹಾರದಷ್ಟೇ ಮೂಲಭೂತ ಅವಶ್ಯಕತೆಯಾಗಿದೆ. ಮನುಷ್ಯನ ಅನಿವಾರ್ಯವಾಗಿದೆ. ಮೊಬೈಲ್‌ ಇಲ್ಲದವರು ಹಾಗೂ ಮೂರು ಹೊತ್ತೂ ಮೊಬೈಲ್‌ನಲ್ಲೇ ಮುಳುಗಿರುವವರ ಸಂಖ್ಯೆ ದೊಡ್ಡದಿದೆ. ಛತ್ತೀಸ್‌ಗಢದಲ್ಲಿ ಹೀಗೆ ಮೂರು ಹೊತ್ತೂ ಮೊಬೈಲ್‌ನಲ್ಲಿ ಮುಳುಗಿರುತ್ತಿದ್ದ ಯುವತಿಗೆ ಆಕೆಯ ಪೋಷಕರು ಬೈದರು ಎಂದು ಯುವತಿಯು ಜಲಪಾತಕ್ಕೆ ಜಿಗಿದಿದ್ದಾಳೆ. ಈ ವಿಡಿಯೊ (Viral Video) ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಹೌದು, ಛತ್ತೀಸ್‌ಗಢದ ಬಸ್ತಾರ್‌ ಜಿಲ್ಲೆ ಚಿತ್ರಕೂಟ ಚೌಕಿ ಪ್ರದೇಶದಲ್ಲಿ ಕಳೆದ ಮಂಗಳವಾರ (July 18) ಯುವತಿಯೊಬ್ಬಳು 90 ಅಡಿ ಎತ್ತರದಿಂದ ಜಲಪಾತಕ್ಕೆ ಜಿಗಿದ ವಿಡಿಯೊ ವೈರಲ್‌ ಆಗಿದೆ. ಯಾವಾಗಲೂ ಮೊಬೈಲ್‌ ಬಳಸುತ್ತಿದ್ದ ಕಾರಣ ಸರಸ್ವತಿ ಮೌರ್ಯ ಎಂಬ ಯುವತಿಯ ಪೋಷಕರು ನಾಲ್ಕು ಮಾತು ಬೈದಿದ್ದಾರೆ. ಇಷ್ಟಕ್ಕೇ ಮನನೊಂದ ಯುವತಿಯು ಜಲಪಾತದಿಂದಲೇ ಜಗಿದಿದ್ದಾಳೆ.

ವೈರಲ್‌ ಆದ ವಿಡಿಯೊ ನೋಡಿ

ಮುಂದೇನಾಯ್ತು?

ಯುವತಿಯು ಜಲಪಾತಕ್ಕೆ ಜಿಗಿಯುತ್ತಲೇ ಅಲ್ಲೇ ಇದ್ದ ನಾವಿಕರೊಬ್ಬರು ಆಕೆಯನ್ನು ರಕ್ಷಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಬುದ್ಧಿಮಾತು ಹೇಳಿ, ಆಕೆಯನ್ನು ಪೋಷಕರಿಗೆ ಒಪ್ಪಿಸಿದ್ದಾರೆ. ನಾವಿಕ ಇರಿದ್ದರೆ ಯುವತಿಯು ನೀರುಪಾಲಾಗುವುದು ಖಚಿತವಾಗಿತ್ತು ಎಂದು ತಿಳಿದುಬಂದಿದೆ. ಯುವತಿಯ ಇಂತಹ ನಿರ್ಧಾರದಿಂದ ಪೋಷಕರು ಕಂಗಾಲಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: Self Harming : ವಿದ್ಯಾರ್ಥಿ ಆತ್ಮಹತ್ಯೆ ಕೇಸ್‌; ಪ್ರತಿಷ್ಠಿತ ಕಾಲೇಜಿನ ಮೇಲೆ FIR

ಯುವತಿಯು ಜಿಗಿಯುವ ಮುನ್ನ ಅಲ್ಲಿದ್ದವರು ಬೇಡ, ಜಿಗಿಬೇಡ ಎಂದು ಜೋರಾಗಿ ಕೂಗಿದ್ದಾರೆ. ಇಷ್ಟಾದರೂ ಯುವತಿಯು ಜಲಪಾತಕ್ಕೆ ಜಿಗಿದಿದ್ದಾಳೆ. ಯುವತಿಯು ಜಲಪಾತಕ್ಕೆ ಜಿಗಿದ ವಿಡಿಯೊ ವೈರಲ್‌ ಆಗುತ್ತಲೇ ಜನ ಹಲವು ರೀತಿ ಪ್ರತಿಕ್ರಿಯಿಸಿದ್ದಾರೆ. “ಈಗಿನ ಪೀಳಿಗೆಯ ಯುವಕ-ಯುವತಿಯರಿಗೆ ಮೊಬೈಲ್‌ ಸರ್ವಸ್ವವಾಗಿದೆ. ಇವರು ಮೊಬೈಲ್‌ ಇಲ್ಲದೆ ಬದುಕುವುದಿಲ್ಲ ಎಂಬ ಮನಸ್ಥಿತಿಗೆ ಬಂದಿರುವುದು ದುಃಖಕರ” ಎಂದು ವ್ಯಕ್ತಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ. ತುಂಬ ಜನ ಯುವತಿಗೆ ಬುದ್ಧಿವಾದ ಹೇಳಿದ್ದಾರೆ.

Exit mobile version