Site icon Vistara News

UP Police: ಮನೆಯ ಪಕ್ಕ ಮೂತ್ರ ವಿಸರ್ಜಿಸಿದ ಮಹಿಳೆಯ ಖಾಸಗಿ ಅಂಗಕ್ಕೆ ರಾಡ್‌ನಿಂದ ಹೊಡೆದರು!

woman urinated next to the house was hit with a rod on her private part

ಶಹಜಹಾನ್‌ಪುರ: ಮನೆಯ ಪಕ್ಕ ಮೂತ್ರ ವಿಸರ್ಜನೆ ಮಾಡಿದ್ದಾರೆಂದು (Peeing Near Neighbour house) ಆರೋಪಿಸಿ ಮಹಿಳೆಯೊಬ್ಬಳ ಖಾಸಗಿ ಭಾಗಕ್ಕೆ, ಆಕೆಯ ನೆರೆಹೊರೆಯವರೇ ಹೊಡೆದ ಘಟನೆ ನಡೆದಿದೆ(Woman hit on her Private Part). 35 ವರ್ಷದ ಮಹಿಳೆಯ ಮೇಲೆ ತೀವ್ರವಾಗಿ ಹಲ್ಲೆ ಮಾಡಿದ್ದರಿಂದ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾಳೆ ಎಂದು ಉತ್ತರ ಪ್ರದೇಶದ ಪೊಲೀಸರು (UP Police) ತಿಳಿಸಿದ್ದಾರೆ. ಮಹಿಳೆಯ ಖಾಸಗಿ ಅಂಗಕ್ಕೆ ಕಬ್ಬಿಣ ರಾಡ್‌ನಿಂದ ಹೊಡೆದಿದ್ದರಿಂದ, ಮಹಿಳೆ ಮೂರ್ಛೆ ಹೋಗಿದ್ದಳು ಎಂದು ಪೊಲೀಸರು ಹೇಳಿದ್ದಾರೆ.

ಈ ಅವಮಾನವೀಯ ಘಟನೆಯು ಉತ್ತರ ಪ್ರದೇಶದ ಶಹಜಹಾನ್‌ಪುರದ ರಾಮಚಂದ್ರ ಮಿಷನ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯಲ್ಲಿ ನಡೆದಿದೆ. ಸಂತ್ರಸ್ತ ಮಹಿಳೆಯು ತನ್ನ ಮನೆಯ ಸಮೀಪವಿರುವ ಚರಂಡಿಯಲ್ಲಿ ಮೂತ್ರ ವಿಸರ್ಜಿಸಿದ್ದಾಳೆ. ಆಗ ಆಕೆ ಮತ್ತು ನೆರೆಹೊರೆಯವರ ಮಧ್ಯೆ ಜಗಳ ನಡೆದಿದೆ. ಕೊನೆಗೆ ನೆರೆ ಹೊರೆಯವರು ಆಕೆ ತೀವ್ರವಾಗಿ ಥಳಿಸಿದ್ದಾರೆ ಎಂದು ಪೊಲೀಸ್ ಠಾಣೆಯ ಸರ್ಕಲ್ ಆಫೀಸರ್ ಬಿಎಸ್ ವೀರ್ ಕುಮಾರ್ ತಿಳಿಸಿದ್ದಾರೆ.

ನೆರೆಹೊರೆಯವರು ಕಬ್ಬಿಣದ ರಾಡ್‌ನಿಂದ ಸಂತ್ರಸ್ತೆಯ ಖಾಸಗಿ ಭಾಗಗಳಿಗೆ ಹೊಡೆದಿದ್ದಾರೆ, ಇದರಿಂದಾಗಿ ಆಕೆಗೆ ಗಂಭೀರ ಗಾಯಗಳಾಗಿದ್ದು, ಮೂರ್ಛೆ ಹೋಗಿದ್ದಾಳೆ ಎಂದು ಅವರು ಹೇಳಿದರು. ಮಹಿಳೆಯನ್ನು ಕೂಡಲೇ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಿಷನ್ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ ಬಿಎಸ್ ವೀರ್ ಕುಮಾರ್ ಅವರು ಹೇಳಿದ್ದಾರೆ.

ಸಂತ್ರಸ್ತೆಗೆ ತೀವ್ರವಾಗಿ ಥಳಿಸಿದವರ ವಿರುದ್ದ, ಐಪಿಸಿಯ ಸಂಬಂಧಿತ ಸೆಕ್ಷನ್ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಮತ್ತು ಈ ವಿಷಯದ ಬಗ್ಗೆ ವಿವರವಾದ ತನಿಖೆ ನಡೆಯುತ್ತಿದೆ ಎಂದು ಮಿಷನ್ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ ಬಿಎಸ್ ವೀರ್ ಕುಮಾರ್ ಅವರು ಹೇಳಿದ್ದಾರೆ. ಆದರೆ, ಈವರೆಗೂ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರನ್ನೂ ಬಂಧಿಸಿದ ಬಗ್ಗೆ ಮಾಹಿತಿ ಇಲ್ಲ.

ಈ ಸುದ್ದಿಯನ್ನೂ ಓದಿ: ಹಿಂದೂ ಬಾಲಕನಿಗೆ ಮುಸ್ಲಿಂ ವಿದ್ಯಾರ್ಥಿಗಳಿಂದ ಕಪಾಳಮೋಕ್ಷ ಶಿಕ್ಷೆ, ಉತ್ತರ ಪ್ರದೇಶದಲ್ಲಿ ಟೀಚರ್ ಅರೆಸ್ಟ್

Exit mobile version