ಚೆನ್ನೈ: ತನ್ನಲ್ಲಿಗೆ ಬರುತ್ತಿದ್ದ ಪುರುಷರನನ್ನೇ ಕೊಲೆ ಮಾಡಿ ದೇಹವನ್ನು ಹಲವು ತುಂಡುಗಳಾಗಿ ಕತ್ತರಿಸಿ ಎಸೆದ ವೇಶ್ಯೆಯೊಬ್ಬಳನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ. ಕೊಲೆಯಾದ ವ್ಯಕ್ತಿ ಚೆನ್ನೈ ಇಂಟರ್ನ್ಯಾಷನಲ್ ಏರ್ಪೋರ್ಟ್ನಲ್ಲಿ ವಿಮಾನಯಾನ ಸಂಸ್ಥೆಯೊಂದರಲ್ಲಿ ಗ್ರೌಂಡ್ ಸ್ಟಾಪ್ ಕೆಲಸ ಮಾಡುತ್ತಿದ್ದರು. ಮಾರ್ಚ್ನಲ್ಲಿ ಕಣ್ಮರೆಯಾಗಿದ್ದ ಅವರ ಪತ್ತೆಗೆ ಪೊಲೀಸರು ಹುಡುಕಾಟ ನಡೆಸಿದಾಗ ಕೊಲೆ ನಡೆದಿರುವುದು ಬಹಿರಂಗಗೊಂಡಿದೆ. ಮಹಿಳೆ ತುಂಡು ಮಾಡಿದ ದೇಹವನ್ನು ಕಂಡ ಕಂಡಲ್ಲಿ ಎಸೆಯಲು ಬೇರೆ ಗಿರಾಕಿಗಳ ನೆರವು ಪಡೆದುಕೊಂಡಿದ್ದಳು.
ಕೊಲೆಯಾದವರನ್ನು ಎಮ್ ಜಯನಾಥನ್ ಎಂದು ಗುರುತಿಸಲಾಗಿದೆ. ಆರೋಪಿ ಮಹಿಳೆ ಜಿ ಭಾಗ್ಯಲಕ್ಷ್ಮಿ ಕೊಲೆ ಮಾಡಿದ ಬಳಿಕ ದೇಹವನ್ನು ತುಂಡು ಮಾಡಲು ಬೇರೆ ಗಿರಾಕಿಗಳ ನೆರವು ಪಡೆದುಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಜಯನಾಥನ್ ಅವರು ನಾಗನಲ್ಲೂರು ಪ್ರದೇಶದ ನಿವಾಸಿಯಾಗಿದ್ದು ಸಹೋದರಿಯ ಜತೆ ವಾಸವಿದ್ದರು. ಅವರು ಆರೋಪಿ ಭಾಗ್ಯಲಕ್ಷ್ಮೀಯ ಬಳಿಗೆ ಆಗಾಗ ಹೋಗುತ್ತಿದ್ದರು. ಈ ವೇಳೆ ಅವರ ನಡುವೆ ಆತ್ಮೀಯತೆ ಸೃಷ್ಟಿಯಾಗಿತ್ತು. ಅವರಿಬ್ಬರು ದೇವಸ್ಥಾನವೊಂದರಲ್ಲಿ ಮದುವೆ ಕೂಡ ಆಗಿ ಪ್ರತ್ಯೇಕಗೊಂಡಿದ್ದರು. ಆದರೆ, ಅವರಿಬ್ಬರ ವಿವಾಹದ ಬಗ್ಗೆ ಕುಟುಂಬದ ಸದಸ್ಯರಿಗೆ ಮಾಹಿತಿ ಇರಲಿಲ್ಲ ಎನ್ನಲಾಗಿದೆ.
ಮಾರ್ಚ್ 18ರಂದು ಜಯನಾಥನ್ ನಾಪತ್ತೆಯಾದ ಹಿನ್ನೆಲೆಯಲ್ಲಿ ಅವರ ಸಹೋದರಿ ದೂರು ದಾಖಲಿಸಿದ್ದರು. ಪೊಲೀಸರು ಮೊಬೈಲ್ ಫೋನ್ ನೆಟ್ವರ್ಕ್ ಆಧಾರದಲ್ಲಿ ಪರಿಶೀಲನೆ ನಡೆಸಿದಾಗ ಭಾಗ್ಯಲಕ್ಷ್ಮಿಯ ಮನೆಗೆ ಹೋಗಿರುವುದು ಗೊತ್ತಾಗಿದೆ. ಪೊಲೀಸರು ಹೋಗಿ ವಿಚಾರಿಸಿದಾಗ ಗೊಂದಲಕಾರಿ ಹೇಳಿಕೆ ನೀಡಿದ ಕಾರಣ ಹೇಳಿಕೆ ನೀಡಿದ ಕಾರಣ ಪೊಲೀಸರು ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಘಟನೆ ಬೆಳಕಿಗೆ ಬಂದಿದೆ.
ಪ್ಲಾಸ್ಟಿಕ್ನಲ್ಲಿ ತುಂಬಿ ಎಸೆದಿದ್ದರು
ಜಯನಾಥನ್ ಅವರನ್ನು ಕೊಲೆ ಮಾಡಿದ್ದ ಭಾಗ್ಯ ಲಕ್ಷ್ಮಿ ಚೆನ್ನೈನಲ್ಲಿ ತನಗೆ ಪರಿಚಯ ಇರುವ ಇನ್ನಷ್ಟು ಮಂದಿಯನ್ನು ಕರೆಸಿಕೊಂಡು ದೇಹವನ್ನು ಹಲವು ತುಂಡು ಮಾಡಿದ್ದರು. ಬಳಿಕ ಪ್ರತ್ಯೇಕವಾಗಿ ಪ್ಲಾಸ್ಟಿಕ್ ಬ್ಯಾಗ್ಗಳಲ್ಲಿ ತುಂಬಿಸಿ ಕೋವಲಮ್ ಪ್ರದೇಶದಲ್ಲಿ ಎಸೆದಿದ್ದರು. ಎರಡ್ಮೂರು ಬಾರಿ ಬಸ್ನಲ್ಲಿ ಹೋಗಿ ಎಸೆದು ಬಂದಿದ್ದರೆ ಇನ್ನೆರಡು ಬಾರಿ ಬಾಡಿಗೆ ಕಾರಿನಲ್ಲಿ ಹೋಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ