Site icon Vistara News

Viral News: ಹೆಣ್ಣುಮಕ್ಕಳು ಫೋಟೊವನ್ನು ಜಾಲತಾಣಗಳ ಡಿಪಿ ಇಡಬಾರದು; ಮಹಿಳಾ ಆಯೋಗ ಹೀಗೆ ಆದೇಶಿಸಿದ್ದೇಕೆ?

Social Media

Bengal Man Slits Wife's Throat, He Didn't Like Her Having Online Friends

ಚೆನ್ನೈ: ಇದೇನಿದ್ದರೂ ಸಾಮಾಜಿಕ ಜಾಲತಾಣಗಳ ಯುಗ. ಎಲ್ಲಿಯೇ ಹೋದರೂ ಚೆಂದದೊಂದು ಫೋಟೊ ತೆಗೆಸಿಕೊಳ್ಳುವ, ಆ ಫೋಟೊವನ್ನು ವಾಟ್ಸ್‌ಆ್ಯಪ್ ಡಿಪಿ (Display Picture), ಸ್ಟೇಟಸ್‌ ಇಡುವ, ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡುವ ಕಾಲ. ಅದರಲ್ಲೂ, ಹೆಣ್ಣುಮಕ್ಕಳಂತೂ ವಾರಕ್ಕೆ ನಾಲ್ಕು ಬಾರಿಯಾದರೂ ಡಿಪಿ ಚೇಂಜ್‌ ಮಾಡುತ್ತಾರೆ. ಆದರೆ, ತಮಿಳುನಾಡು ಮಹಿಳಾ ಆಯೋಗವು, “ಹೆಣ್ಣುಮಕ್ಕಳು ಸಾಮಾಜಿಕ ಜಾಲತಾಣಗಳಲ್ಲಿ (Viral News) ತಮ್ಮ ಫೋಟೊಗಳನ್ನು ಡಿಪಿ ಇಡಬಾರದು” ಎಂದು ಸೂಚಿಸಿದೆ. ಇದು ಈಗ ಚರ್ಚೆಗೆ ಗ್ರಾಸವಾಗಿದೆ.

“ಹೆಣ್ಣುಮಕ್ಕಳು ತಮ್ಮ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳ ಡಿಪಿ ಇಡಬಾರದು. ಸೈಬರ್‌ ಅಪರಾಧಿಗಳು ನಿಮ್ಮ ಫೋಟೊಗಳನ್ನು ಡೌನ್‌ಲೋಡ್‌ ಮಾಡಿಕೊಂಡು, ಅವುಗಳನ್ನು ಅಶ್ಲೀಲವಾಗಿ ತಿರುಚಿ, ಜಾಲತಾಣಗಳಲ್ಲಿ ಹರಡುವ, ನಿಮಗೇ ಬ್ಲ್ಯಾಕ್‌ಮೇಲ್‌ ಮಾಡುವ ಸಾಧ್ಯತೆ ಇರುತ್ತದೆ. ಹಾಗಾಗಿ, ಹೆಣ್ಣುಮಕ್ಕಳು ಡಿಪಿ ಇಡಬಾರದು” ಎಂದು ತಮಿಳುನಾಡು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಎ.ಎಸ್‌.ಕುಮಾರಿ ಸಲಹೆ ನೀಡಿದ್ದಾರೆ.

ಚೆನ್ನೈನಲ್ಲಿ ರಾಷ್ಟ್ರೀಯ ಮಹಿಳಾ ಆಯೋಗ ಹಾಗೂ ತಮಿಳುನಾಡು ಮಹಿಳಾ ಆಯೋಗದಿಂದ ಜಂಟಿಯಾಗಿ ʼಮಹಿಳೆಯರ ಹಕ್ಕುಗಳು ಹಾಗೂ ಸಬಲೀಕರಣʼ ವಿಷಯದ ಕುರಿತು ಸೆಮಿನಾರ್‌ ನಡೆದಿದೆ. ಇದೇ ವೇಳೆ, ಸೈಬರ್‌ ಅಪರಾಧದ ಕುರಿತು ಕೂಡ ಜಗೃತಿ ಮೂಡಿಸಲಾಗಿದೆ. ಪೊಲೀಸ್‌ ಅಧಿಕಾರಿಗಳು, ವಕೀಲರು, ಸಾಮಾಜಿಕ ಕಾರ್ಯಕರ್ತರು ಭಾಗವಹಿಸಿ, ಸೈಬರ್‌ ಅಪರಾಧ, ಆನ್‌ಲೈನ್‌ ದುರ್ಬಳಕೆ ಕುರಿತು ಮಹಿಳೆಯರಿಗೆ ಜಾಗೃತಿ ಮೂಡಿಸಲಾಗಿದೆ.

ಇದನ್ನೂ ಓದಿ: Cyber Crime: ಸೋಷಿಯಲ್‌ ಮೀಡಿಯಾದಲ್ಲಿ ಬೇಕಾಬಿಟ್ಟಿ ಪೋಸ್ಟ್ ಹಾಕಿದ್ರೆ ಪೊಲೀಸ್‌ ವಿಚಾರಣೆ ಗ್ಯಾರಂಟಿ!

ಇದೇ ವೇಳೆ ಮಾತನಾಡಿದ ಎ.ಎಸ್.ಕುಮಾರಿ, “ಕಾಲೇಜು ವಿದ್ಯಾರ್ಥಿನಿಯರು ಹೆಚ್ಚಾಗಿ ಡಿಪಿಗಳನ್ನು ಚೇಂಜ್‌ ಮಾಡುತ್ತಿರುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ಫೋಟೊಗಳನ್ನು ಅಪ್‌ಲೋಡ್‌ ಮಾಡುತ್ತಾರೆ. ಆದರೆ. ಸೈಬರ್‌ ಅಪರಾಧಿಗಳು ನಿಮ್ಮ ಫೋಟೊವನ್ನು ತಿರುಚಲು ಇದರಿಂದ ಆಸ್ಪದ ನೀಡಿದಂತಾಗುತ್ತದೆ. ಇನ್ನು, ಸಾಮಾಜಿಕ ಜಾಲತಾಣಗಳ ಮೂಲಕ ಪರಿಚಯವಾಗುವವರನ್ನು ಯುವತಿಯರು ನಂಬಬಾರದು. ಪ್ರೀತಿಯ ಹೆಸರಿನಲ್ಲಿ ಅವರು ಮಾಡುವ ತಂತ್ರಗಳಿಗೆ ಬಲಿಯಾಗಬಾರದು. ಸಾಮಾಜಿಕ ಜಾಲತಾಣಗಳನ್ನು ಬಳಸುವಾಗ ಭಾರಿ ಎಚ್ಚರಿಕೆಯಿಂದ ಇರಬೇಕು” ಎಂದು ಸಲಹೆ ನೀಡಿದರು.

Exit mobile version