Site icon Vistara News

ನೇಮಕಾತಿ ವೇಳೆ ಹೆಣ್ಣುಮಕ್ಕಳ ಎದೆ ಅಳತೆ ಮಾಡುವುದು ಘನತೆಗೆ ಧಕ್ಕೆ; ಹೈಕೋರ್ಟ್‌ ಆಕ್ರೋಶ

Court Order

2 get death penalty over 2005 blast in Shramjeevi express

ಜೈಪುರ: ಸರ್ಕಾರದ ನೇಮಕಾತಿ ವೇಳೆ ದೈಹಿಕ ಪರೀಕ್ಷೆ ಹೆಸರಿನಲ್ಲಿ ಹೆಣ್ಣುಮಕ್ಕಳ ಎದೆಯ ಅಳತೆ (Chest Measurement) ಮಾಡುವುದು ಕ್ರೂರ ಹಾಗೂ ಅತಿರೇಕದ ಕ್ರಮ ಎಂದು ರಾಜಸ್ಥಾನ ಹೈಕೋರ್ಟ್‌ (Rajasthan High Court) ಆಕ್ರೋಶ ಹೊರಹಾಕಿದೆ. ಹಾಗೆಯೇ, ನೇಮಕಾತಿ ವೇಳೆ ಹೆಣ್ಣುಮಕ್ಕಳಿಗೆ ಮುಜುಗರವಾಗದಂತೆ ನೋಡಿಕೊಳ್ಳಿ ಎಂದು ಸರ್ಕಾರಕ್ಕೆ ಖಡಕ್‌ ಆದೇಶ ಹೊರಡಿಸಿದೆ.

ರಾಜಸ್ಥಾನದಲ್ಲಿ ಅರಣ್ಯಾಧಿಕಾರಿಗಳ (Forest Guard) ನೇಮಕಾತಿಯ ದೈಹಿಕ ದಕ್ಷತೆ ಪರೀಕ್ಷೆ (Physical Efficiency Test) ವೇಳೆ ಸ್ತನಗಳ ಗಾತ್ರದ ಆಧಾರದ ಮೇಲೆ ಅನರ್ಹಗೊಳಿಸಿದ್ದನ್ನು ಪ್ರಶ್ನಿಸಿ ಮೂವರು ಮಹಿಳಾ ಅಭ್ಯರ್ಥಿಗಳು ಸಲ್ಲಿಸಿದ ಅರ್ಜಿಯ ವಿಚಾರಣೆ ವೇಲೆ ನ್ಯಾಯಮೂರ್ತಿ ದಿನೇಶ್‌ ಮೆಹ್ತಾ ಅವರು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

“ರಾಜ್ಯದಲ್ಲಿ ಅರಣ್ಯಾಧಿಕಾರಿಗಳು ಸೇರಿ ಯಾವುದೇ ಹುದ್ದೆಯ ನೇಮಕಾತಿ ವೇಳೆ ಹೆಣ್ಣುಮಕ್ಕಳ ಎದೆ ಅಳತೆ ಮಾಡುವುದು ಕ್ರೂರತನಕ್ಕೆ ಸಮನಾದುದು. ಇದು ಸಂವಿಧಾನದಲ್ಲಿ ಹೆಣ್ಣುಮಕ್ಕಳಿಗೆ ನೀಡಿದ ಖಾಸಗಿ ಹಕ್ಕುಗಳು ಹಾಗೂ ಅವರ ಘನತೆಗೆ ತಂದಂತಾಗುತ್ತದೆ. ಹಾಗಾಗಿ, ನೇಮಕಾತಿ ವೇಳೆ ದೈಹಿಕ ಪರೀಕ್ಷೆ ಮಾಡುವಾಗ ಹೆಣ್ಣುಮಕ್ಕಳ ಘನತೆಗೆ ಧಕ್ಕೆ ತರದ ಕ್ರಮಗಳನ್ನು ಅನುಸರಿಸಬೇಕು” ಎಂದು ಆದೇಶಿಸಿದರು.

ಇದನ್ನೂ ಓದಿ: Khushbu Sundar: ಅಮ್ಮನ ಘನತೆಗೆ ಧಕ್ಕೆ ತರುತ್ತಿದ್ದೀರಿ ಎಂದು ಖುಷ್ಬೂ ಮಗಳಿಗೆ ನೆಟ್ಟಿಗರ ಕ್ಲಾಸ್‌

“ಸಂವಿಧಾನದ 14 ಹಾಗೂ 21ನೇ ಪರಿಚ್ಛೇದದ ಪ್ರಕಾರ ಯಾವುದೇ ಕಾರಣಕ್ಕೂ ಮಹಿಳೆಯರ ಘನತೆಗೆ ಧಕ್ಕೆಯಾಗಬಾರದು. ಹಾಗೆಯೇ, ಅವರ ಖಾಸಗಿತನಕ್ಕೆ ಕುಂದುಂಟಾಗಬಾರದು. ಇದನ್ನು ಗಮನದಲ್ಲಿಟ್ಟುಕೊಂಡು ನೇಮಕಾತಿ ನಡೆಸಬೇಕು. ಇಂತಹ ಕ್ರಮಗಳು ಮಹಿಳೆಯರ ಮಾನಸಿಕ ಆರೋಗ್ಯದ ಮೇಲೆಯೂ ಪರಿಣಾಮ ಬೀರುತ್ತದೆ” ಎಂದು ನ್ಯಾಯಮೂರ್ತಿ ದಿನೇಶ್‌ ಮೆಹ್ತಾ ಸ್ಪಷ್ಟಪಡಿಸಿದರು.

Exit mobile version