ಹಾವು ಎಂದಾಕ್ಷಣ ಒಂದು ರೀತಿಯ ಭಯ ನಮ್ಮಲ್ಲಿ ಮೂಡುತ್ತದೆ. ಇದು ಸರೀಸೃಪ ಜಾತಿಗೆ ಸೇರಿರುವ ಜೀವಿಯಾಗಿದೆ. ಹಾವುಗಳ ಬಗ್ಗೆ ಮನುಷ್ಯರಿಗೆ ಇರುವ ಸಾಮಾನ್ಯ ಕಲ್ಪನೆ ಅಂದರೆ ಕಚ್ಚಿದರೆ ಸಾವು ಗ್ಯಾರಂಟಿ ಎಂಬುದು. ಆದರೆ, ಎಲ್ಲ ಹಾವುಗಳೂ ವಿಷಪೂರಿತ ಅಲ್ಲ, ಕಚ್ಚುವುದೂ ಇಲ್ಲ. ಇವುಗಳ ಬಗ್ಗೆ ನಮಗೆ ತಿಳಿವಳಿಕೆ ಕಡಿಮೆ ಇರುತ್ತದೆ. ಇನ್ನೊಂದು ವಿಚಾರವೆಂದರೆ ಹಾವು ತಾನಾಗೇ ಬಂದು ಕಚ್ಚುವುದು ಬಹಳವೇ ಕಡಿಮೆ. ಆದರೆ, ಅವುಗಳಿಗೆ ತೊಂದರೆ ಕೊಟ್ಟರೆ ಮಾತ್ರ ಪರಿಣಾಮವನ್ನು ಎದುರಿಸಲು ಸಿದ್ಧರಾಗಿರಬೇಕು. ಭಾರತದಲ್ಲಿ ಕಾಣಸಿಗುವ ಪ್ರಮುಖ ಹಾವುಗಳ ಬಗ್ಗೆ ಇಲ್ಲಿದೆ ಸಣ್ಣ ಝಲಕ್.
ಇದನ್ನೂ ಓದಿ| Snakes in Bangalore | ಕಬ್ಬನ್ ಪಾರ್ಕ್‌ನಲ್ಲಿ ನಾಗರಹಾವು ಸೆರೆ