ಕ್ಯಾಲಿಫೋರ್ನಿಯಾ: ವಿಶ್ವದ ಮೊಟ್ಟ ಮೊದಲ 3ಡಿ ಪ್ರಿಂಟಿಂಗ್ ತಂತ್ರಜ್ಞಾನದ ರಾಕೆಟ್ ಉಡಾವಣೆಯು ಕೊನೆಯ ಸೆಕೆಂಡ್‌ನಲ್ಲಿ ರದ್ದಾಗಿದೆ. (3D Printed rocket) ಖಾಸಗಿ ಒಡೆತನದಲ್ಲಿ ಈ ಬಾಹ್ಯಾಕಾಶ ಪ್ರಯೋಗವನ್ನು ಕೈಗೊಳ್ಳಲಾಗಿತ್ತು. ಕಡಿಮೆ ವೆಚ್ಚದಲ್ಲಿ ರಾಕೆಟ್ ಉಡಾವಣೆ ಇದರ ಉದ್ದೇಶವಾಗಿತ್ತು. ಆದರೆ ಎರಡನೇ ಹಂತದ ಕೊನೆ ಕ್ಷಣದಲ್ಲಿ ಆಟೊಮೇಶನ್ ತಂತ್ರಜ್ಞಾನದಲ್ಲಿ ದೋಷ ಕಾಣಿಸಿಕೊಂಡಿದ್ದರಿಂದ ಉಡಾವಣೆ ರದ್ದಾಯಿತು.
ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳ ತಂಡ ಮತ್ತೆ ಹೊಸ ದಿನಾಂಕ ನಿಗದಿಪಡಿಸಿ ರಾಕೆಟ್ ಉಡಾವಣೆ ಮಾಡಲು ನಿರ್ಧರಿಸಿದೆ. ಕ್ಯಾಲಿಫೋರ್ನಿಯಾದ ಏರೋಸ್ಪೇಸ್ ಸ್ಟಾರ್ಟಪ್ ರಿಲೇಟಿವಿಟಿ ಸ್ಪೇಸ್ ಈ ರಾಕೆಟ್ ಅನ್ನು ಅಭಿವೃದ್ಧಿಪಡಿಸಿತ್ತು.