Site icon Vistara News

Viral Video: ಭಾರತದಲ್ಲಿ ವಿಶ್ವದಲ್ಲೇ ಎತ್ತರದ ರೈಲಿನ ಪ್ರಾಯೋಗಿಕ ಸಂಚಾರ ಯಶಸ್ವಿ, ಇಲ್ಲಿದೆ ವಿಡಿಯೊ

World’s first 7.2-metre high-rise train set on trial on Delhi-Jaipur route, video out

World’s first 7.2-metre high-rise train set on trial on Delhi-Jaipur route, video out

ಜೈಪುರ: ಕೇಂದ್ರ ಸರ್ಕಾರದ ಪ್ರಯತ್ನದ ಫಲವಾಗಿ ದೇಶದಲ್ಲಿ ರೈಲುಗಳು ಹಾಗೂ ರೈಲು ನಿಲ್ದಾಣಗಳು ಆಧುನೀಕರಣಗೊಂಡಿವೆ. ಇದರ ಭಾಗವಾಗಿ ಇಂದು ದೇಶದ ಹಲವೆಡೆ ಸುಸಜ್ಜಿತ ಹಾಗೂ ಅತ್ಯಾಧುನಿಕ ಸೌಕರ್ಯಗಳುಳ್ಳ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲುಗಳ ಸಂಚಾರ ಆರಂಭವಾಗಿದೆ. ಇದರ ಬೆನ್ನಲ್ಲೇ, ಭಾರತೀಯ ರೈಲ್ವೆಯು ಮತ್ತೊಂದು ಸಾಧನೆ ಮಾಡಿದೆ. ವಿಶ್ವದಲ್ಲೇ ಅತಿ ಎತ್ತರದ ರೈಲು ಎಂದೇ ಖ್ಯಾತಿಯಾದ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿನ ಪ್ರಾಯೋಗಿಕ ಸಂಚಾರ ಯಶಸ್ವಿಯಾಗಿದೆ. ರೈಲು ಸಂಚಾರದ ವಿಡಿಯೊ (Viral Video) ಈಗ ವೈರಲ್‌ ಆಗಿದೆ.

7.2 ಮೀಟರ್‌ ಎತ್ತರದ ದೆಹಲಿ-ಜೈಪುರ-ಅಜ್ಮೇರ್‌ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿನ ಪ್ರಾಯೋಗಿಕ ಸಂಚಾರವು ಜೈಪುರದಲ್ಲಿ ನಡೆದಿದೆ. ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಅವರು ರೈಲು ಸಂಚಾರದ ವಿಡಿಯೊವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಅಶ್ವಿನಿ ವೈಷ್ಣವ್‌ ಟ್ವೀಟ್‌

ಭಾರತೀಯ ರೈಲ್ವೆಯು ದೆಹಲಿ-ಜೈಪುರ ಮಾರ್ಗದಲ್ಲಿ ಹೊಸ ಸೆಮಿ-ಹೈಸ್ಪೀಡ್‌ ರೈಲನ್ನು ನವೀಕರಿಸಿದೆ. ಅಲ್ಲದೆ, ಅಶ್ವಿನಿ ವೈಷ್ಣವ್‌ ಅವರ ಪ್ರಕಾರ, ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲುಗಳು ಡಬಲ್‌ ಡೆಕ್ಕರ್‌ ಆಗಿ ಪರಿವರ್ತನೆ ಆಗಲಿವೆ. ಇದಕ್ಕಾಗಿ ವಿದ್ಯುತ್‌ ವೈರ್‌ಗಳನ್ನು ಎತ್ತರಿಸುವ ಯೋಜನೆ ಅವರ ಮುಂದಿದೆ.

ದೆಹಲಿ-ಜೈಪುರ-ಅಜ್ಮೇರ್‌ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಮಾರ್ಚ್‌ 28ರಂದು ಪ್ರಾಯೋಗಿಕ ಸಂಚಾರ ಕೈಗೊಂಡಿದೆ. ದೆಹಲಿ-ಜೈಪುರ ಮಾರ್ಗದಲ್ಲಿ ಇದೇ ವರ್ಷದ ಏಪ್ರಿಲ್‌ನಲ್ಲಿ ಸಂಚಾರ ಆರಂಭಿಸಲಿದೆ ಎಂದು ತಿಳಿದುಬಂದಿದೆ. ಇದರೊಂದಿಗೆ ದೇಶದಲ್ಲಿ ಸಂಚಾರ ಆರಂಭಿಸಿದ 11ನೇ ವಂದೇ ಭಾರತ್‌ ರೈಲು ಎಂಬ ಖ್ಯಾತಿಗೆ ಭಾಜನವಾಗಲಿದೆ. ಸದ್ಯ, ದೇಶದಲ್ಲಿ 10 ವಂದೇ ಭಾರತ್‌ ರೈಲುಗಳು ಓಡಾಟ ನಡೆಸುತ್ತಿವೆ.

ಇದನ್ನೂ ಓದಿ: Namma Metro : ಕೆ.ಆರ್‌.ಪುರಂ-ವೈಟ್‌ಫೀಲ್ಡ್‌ ಮಾರ್ಗದಲ್ಲಿ ಮೆಟ್ರೊ ರೈಲು ಸಂಚಾರ ಆರಂಭ

Exit mobile version