Site icon Vistara News

Worlds Most Powerful Passports: ಪಾಸ್‌ಪೋರ್ಟ್‌ ಸೂಚ್ಯಂಕದಲ್ಲಿ ಸಿಂಗಾಪುರ ನಂ.1; ಭಾರತಕ್ಕೆ ಎಷ್ಟನೇ ಸ್ಥಾನ?

World's Most Powerful Passports

ವಾರ್ಷಿಕ ಜಾಗತಿಕ ಪಾಸ್‌ಪೋರ್ಟ್ ಸೂಚ್ಯಂಕದಲ್ಲಿ (Worlds Most Powerful Passports) ಭಾರತೀಯ ಪಾಸ್‌ಪೋರ್ಟ್ (indian Passports) 82ನೇ ಸ್ಥಾನದಲ್ಲಿದೆ. ಅಂತಾರಾಷ್ಟ್ರೀಯ ವಾಯುಯಾನ ಸಾರಿಗೆ ಅಸೋಸಿಯೇಷನ್ (International Air Transport Association) ಅಂಕಿ ಅಂಶಗಳನ್ನು ಆಧರಿಸಿ ಯುಕೆ ಮೂಲದ ಹೆನ್ಲಿ ಪಾಸ್‌ಪೋರ್ಟ್ ಇಂಡೆಕ್ಸ್‌ (UK-based Henley Passport Index) ಈ ಶ್ರೇಯಾಂಕವನ್ನು ನೀಡಿದೆ.

ಇಂಡೋನೇಷ್ಯಾ, ಮಲೇಷ್ಯಾ ಮತ್ತು ಥೈಲ್ಯಾಂಡ್‌ನಂತಹ ಜನಪ್ರಿಯ ಸ್ಥಳಗಳು ಸೇರಿದಂತೆ 58 ದೇಶಗಳು ಭಾರತೀಯರಿಗೆ ವೀಸಾ-ಮುಕ್ತ ಪ್ರವೇಶಕ್ಕೆ ಅನುಮತಿ ನೀಡುತ್ತದೆ. ಹೆನ್ಲಿ ಪಾಸ್‌ಪೋರ್ಟ್ ಸೂಚ್ಯಂಕವು ಆ ದೇಶಗಳ ಸಾಮಾನ್ಯ ಪಾಸ್‌ಪೋರ್ಟ್‌ಗಳು ತಮ್ಮ ನಾಗರಿಕರಿಗೆ ಅನುಮತಿಸುವ ಪ್ರಯಾಣ ಸ್ವಾತಂತ್ರ್ಯದ ಪ್ರಕಾರ ದೇಶಗಳ ಜಾಗತಿಕ ಶ್ರೇಯಾಂ ಕವಾಗಿದೆ.

ಅಗ್ರಸ್ಥಾನದಲ್ಲಿ ಸಿಂಗಾಪುರ

ಸಿಂಗಾಪುರವು ಪಾಸ್‌ಪೋರ್ಟ್ ಸೂಚ್ಯಂಕದಲ್ಲಿ ಮುಂಚೂಣಿಯಲ್ಲಿದೆ. ಇತ್ತೀಚಿನ ಶ್ರೇಯಾಂಕದ ಪ್ರಕಾರ ವಿಶ್ವದ ಅತ್ಯಂತ ಶಕ್ತಿಶಾಲಿ ಪಾಸ್‌ಪೋರ್ಟ್ ಎಂಬ ಶೀರ್ಷಿಕೆಯನ್ನು ಇದು ಮತ್ತೆ ಪಡೆದುಕೊಂಡಿದೆ.

ಈ ದೇಶದ ನಾಗರಿಕರು ಈಗ ಪ್ರಪಂಚದಾದ್ಯಂತ 227ರಲ್ಲಿ 195 ಪ್ರಯಾಣದ ಸ್ಥಳಗಳಿಗೆ ವೀಸಾ-ಮುಕ್ತವಾಗಿ ಪ್ರವೇಶ ಪಡೆಯಬಹುದು. ಶ್ರೇಯಾಂಕದ ಪ್ರಕಾರ ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್ ಮತ್ತು ಸ್ಪೇನ್ ಜಂಟಿಯಾಗಿ ಎರಡನೇ ಸ್ಥಾನದಲ್ಲಿದೆ. ಇದು ಪ್ರತಿ 192 ಸ್ಥಳಗಳಿಗೆ ವೀಸಾ-ಮುಕ್ತ ಪ್ರವೇಶವನ್ನು ಹೊಂದಿದೆ.

ಆಸ್ಟ್ರಿಯಾ, ಫಿನ್ಲೆಂಡ್, ಐರ್ಲೆಂಡ್, ಲಕ್ಸೆಂಬರ್ಗ್, ನೆದರ್ಲ್ಯಾಂಡ್ಸ್, ದಕ್ಷಿಣ ಕೊರಿಯಾ ಮತ್ತು ಸ್ವೀಡನ್ ಪೂರ್ವ ವೀಸಾ ಇಲ್ಲದೆಯೇ 191 ಸ್ಥಳಗಳಿಗೆ ಪ್ರವೇಶವನ್ನು ಹೊಂದಿರುವ ಏಳು ರಾಷ್ಟ್ರಗಳು ಶ್ರೇಯಾಂಕದಲ್ಲಿ 3 ನೇ ಸ್ಥಾನದಲ್ಲಿದೆ.

ಯುಕೆ, ಬೆಲ್ಜಿಯಂ, ಡೆನ್ಮಾರ್ಕ್, ನ್ಯೂಜಿಲೆಂಡ್, ನಾರ್ವೆ ಮತ್ತು ಸ್ವಿಟ್ಜರ್ಲೆಂಡ್ ಗೆ ವೀಸಾ ಮುಕ್ತ ಗಮ್ಯಸ್ಥಾನ ಪ್ರವೇಶ 190 ಕ್ಕೆ ಕುಸಿದಿದ್ದರೂ ಈ ರಾಷ್ಟ್ರಗಳು ಜಂಟಿಯಾಗಿ ನಾಲ್ಕನೇ ಸ್ಥಾನದಲ್ಲಿದೆ.


ಅಮೆರಿಕಕ್ಕೆ ದಶಕದಿಂದಲೂ 8ನೇ ಸ್ಥಾನ

ಇನ್ನು ಯುಎಸ್ ಈಗ 186 ಗಮ್ಯಸ್ಥಾನಗಳಿಗೆ ವೀಸಾ ಮುಕ್ತ ಪ್ರವೇಶ ಪಡೆಯಬಹುದು. ದಶಕದಿಂದಲೂ 8ನೇ ಸ್ಥಾನದಲ್ಲಿ ಯುಎಸ್ ಉಳಿದಿದೆ ಎಂದು ಸೂಚ್ಯಂಕ ಹೇಳಿದೆ.

ಅಂತಾರಾಷ್ಟ್ರೀಯ ವಾಯುಯಾನ ಸಾರಿಗೆ ಅಸೋಸಿಯೇಷನ್ ಪ್ರಕಾರ ಏರ್‌ಲೈನ್ಸ್ 2024ರಲ್ಲಿ ಈ ವರೆಗೆ ಸರಿಸುಮಾರು 39 ಮಿಲಿಯನ್ ವಿಮಾನಗಳು 22,000 ಮಾರ್ಗಗಳಲ್ಲಿ ಸುಮಾರು 5 ಶತಕೋಟಿ ಜನರನ್ನು ಒಂದೆಡೆಯಿಂದ ಇನ್ನೊಂದೆಡೆಗೆ ಸಾಗಿಸಿದೆ. ಏರ್ ಕಾರ್ಗೋ 62 ಮಿಲಿಯನ್ ಟನ್‌ ಸರಕುಗಳನ್ನು ಸಾಗಿಸಿದೆ. ಇದು ಒಟ್ಟು 8.3 ಟ್ರಿಲಿಯನ್ ಡಾಲರ್ ವಹಿವಾಟನ್ನು ನಡೆಸಿದೆ.

ಇದನ್ನೂ ಓದಿ: NEET: ಕರ್ನಾಟಕ ಬಳಿಕ ಪಶ್ಚಿಮ ಬಂಗಾಳದಲ್ಲೂ ನೀಟ್‌ ಪರೀಕ್ಷೆ ವಿರುದ್ಧ ನಿರ್ಣಯ; ಹೆಚ್ಚಾಯ್ತು ಆಕ್ರೋಶ

ನಮ್ಮ ಉದ್ಯಮವು ಈ ವರ್ಷ ಸುಮಾರು 1 ಟ್ರಿಲಿಯನ್ ಡಾಲರ್ ಆದಾಯವನ್ನು ದಾಖಲಿಸುವ ನಿರೀಕ್ಷೆಯಿದೆ. ಆದರೂ ವೆಚ್ಚಗಳು 936 ಶತಕೋಟಿ ಡಾಲರ್ ಆಗಿದ್ದು, ಏರಿಕೆಯಾಗುತ್ತಲೇ ಇದೆ. ನಿವ್ವಳ ಲಾಭವು 30.5 ಶತಕೋಟಿ ಡಾಲರ್ ಆಗಿದೆ. ಎಂದು ಅಂತಾರಾಷ್ಟ್ರೀಯ ವಾಯುಯಾನ ಸಾರಿಗೆ ಅಸೋಸಿಯೇಷನ್ ನ ಡೈರೆಕ್ಟರ್ ಜನರಲ್ ವಿಲ್ಲಿ ವಾಲ್ಶ್ ಹೇಳಿದ್ದಾರೆ.

2006ರಲ್ಲಿ ಈ ಸೂಚ್ಯಂಕ ಪ್ರಾರಂಭವಾದ ಬಳಿಕ ವೀಸಾ ಮುಕ್ತ ಪ್ರವೇಶ ಪಡೆಯಲು 185 ಪ್ರದೇಶಗಳಲ್ಲಿ 152 ಸ್ಥಳಗಳನ್ನು ಸೇರಿಸುವ ಮೂಲಕ ಯುಎಇ ಮೊದಲ ಬಾರಿಗೆ ಟಾಪ್ 10ರಲ್ಲಿ ಸ್ಥಾನ ಪಡೆದಿದೆ.

Exit mobile version