Site icon Vistara News

Money Guide : ನಿವೃತ್ತಿ ಬಳಿಕ ಹಣದ ಚಿಂತೆ; ಈ 10 ಟಿಪ್ಸ್​ ಪಾಲಿಸಿದರೆ ನೋ ಟೆನ್ಷನ್​!

Money Guide

ನಿವೃತ್ತಿ ಬಳಿಕ ಹಣದ ಸಮಸ್ಯೆ ಬಂದರೆ ಏನು ಮಾಡುವುದು ಎಂಬ ಚಿಂತೆ ಉದ್ಯೋಗಸ್ಥರಿಗೆ ಇದ್ದದ್ದೆ. ಯಾಕೆಂದರೆ ಸಂಬಳ ಬರುವ ಉದ್ಯೋಗವೊಂದು ಇಲ್ಲದಾದಾಗ ಎಲ್ಲವೂ ತಾಪತ್ರಯ ಎನಿಸಿಬಿಡುತ್ತದೆ. ದೈನಂದಿನ ಖರ್ಚಿಗೆ ಸೇರಿದಂತೆ ಎಲ್ಲ ಹಣಕಾಸಿನ ಅಗತ್ಯಗಳನ್ನು ಪೂರೈಸುವುದು ಹೇಗೆ ಎಂಬ ಆತಂಕ ಇರುತ್ತದೆ. ಆದರೆ, ಬಹುತೇಕ ಮಂದಿ ಚಿಂತೆ ಮಾತ್ರ ಮಾಡುತ್ತಾರೆಯೇ ಹೊರತು ಅದಕ್ಕೊಂದು ಯೋಜನೆ ಹಾಕಿಕೊಳ್ಳುವುದಿಲ್ಲ. ಆದರೆ, ದುಡಿಮೆಯ ಅವಧಿಯಲ್ಲಿ ದುಡ್ಡು ಉಳಿಸಲು (Money Guide) ಮನಸ್ಸು ಮಾಡಿದರೆ ಈ ಚಿಂತೆ ಎಂದಿಗೂ ಇರುವುದಿಲ್ಲ.

ದುಡಿದ ದುಡ್ಡಿನಲ್ಲಿ ಉಳಿತಾಯ (Money Saving) ಮಾಡುವುದೂ ಉತ್ತಮ ಕಲೆ. ದುಡಿಮೆಯ ದಿನಗಳಲ್ಲಿ ಒಂದಿಷ್ಟು ಮೊತ್ತವನ್ನು ಉಳಿತಾಯದ ಮಾಡಿದರೆ, ನಿವೃತ್ತಿಯ ದಿನಗಳನ್ನು (Retirement Life) ನೆಮ್ಮದಿಯಾಗಿ ಕಳೆಯಬಹುದು. ಇಲ್ಲದಿದ್ದರೆ, ದುಡಿಯುವ ಕಸುವು ಇಲ್ಲದ ಸಮಯದಲ್ಲಿ ಹಣಕ್ಕಾಗಿ ಪರದಾಡಬೇಕಾಗುತ್ತದೆ. ಹಾಗಾಗಿ, ನಿಮ್ಮ ವೃತ್ತಿಯ ಆರಂಭದ ದಿನಗಳಿಂದಲೇ ನಿವೃತ್ತಿಯ ಬಗ್ಗೆ ಪ್ಲ್ಯಾನ್ ಮಾಡಿ(Plan for Retirement life), ಹಣವನ್ನು ಉಳಿತಾಯ ಮಾಡಬೇಕು. ನಿವೃತ್ತಿಯ ಅಂಚಿಗೆ ಬರುವಷ್ಟರಲ್ಲಿ ದೊಡ್ಡ ಮೊತ್ತದ ಉಳಿತಾಯ ನಿಮಗಾಗಿ ಕಾಯುತ್ತಿರುತ್ತದೆ. ಹಾಗಾಗಿ, ಈಗನಿಂದಲೇ ನೀವು ಉಳಿತಾಯ ಮತ್ತು ನಿವೃತ್ತಿಯ ದಿನಗಳಿಗಾಗಿ ಹೂಡಿಕೆಯ ಪ್ಲ್ಯಾನ್ ಮಾಡುವುದು ಶುರು ಮಾಡಿ(Money Guide).

ನಿವೃತ್ತಿಗಾಗಿ ಹಣ ಉಳಿಸುವ ಮಾರ್ಗಗಳು….

1.ಉಳಿತಾಯ ಯೋಜನೆ ಬೇಗ ಆರಂಭಿಸಿ

ಉತ್ತಮ ನಿವೃತ್ತಿ ಜೀವನಕ್ಕಾಗಿ ವೃತ್ತಿ ಆರಂಭದ ದಿನಗಳಿಂದಲೇ ಉಳಿತಾಯವನ್ನು ಆರಂಭಿಸಬೇಕು. ಚಿಕ್ಕ ಮೊತ್ತದ ಸೇವಿಂಗ್ ಕೂಡ ನಿವೃತ್ತಿ ಹೊತ್ತಿಗೆ ಬಹುದೊಡ್ಡ ಮೊತ್ತವಾಗಿ ಬದಲಾಗಿರುತ್ತದೆ.

2.ಉಳಿತಾಯಕ್ಕೊಂದು ಗುರಿ ಇರಲಿ

ನಿಮ್ಮ ನಿರೀಕ್ಷಿತ ವೆಚ್ಚಗಳು ಮತ್ತು ಜೀವನಶೈಲಿಯ ಆಧಾರದ ಮೇಲೆ ನಿವೃತ್ತಿಗಾಗಿ ನಿಮಗೆ ಎಷ್ಟು ಹಣ ಬೇಕು ಎಂದು ನಿರ್ಧರಿಸಿ. ಹಣದುಬ್ಬರ ಮತ್ತು ಆರೋಗ್ಯ ವೆಚ್ಚಗಳಂತಹ ಅಂಶಗಳನ್ನು ಪರಿಗಣಿಸಿ ಸೇವಿಂಗ್ ಆರಂಭಿಸಿ. ಸ್ಪಷ್ಟವಾದ ನಿವೃತ್ತಿ ಗುರಿಯನ್ನು ಹಾಕಿಕೊಳ್ಳುವುದರಿಂದ ಹಣ ಉಳಿಕೆಯಲ್ಲಿ ಸ್ಪಷ್ಟತೆ ದೊರೆಯುತ್ತದೆ.

3. ನಿವೃತ್ತಿ ಬಳಿಕದ ಆಯವ್ಯಯ ಸಿದ್ದಪಡಿಸಿ

ನಿಮ್ಮ ಸದ್ಯದ ಆದಾಯ ಮತ್ತು ವೆಚ್ಚದ ಅನುಸಾರ ನಿಮ್ಮ ನಿವೃತ್ತಿಯ ಬಜೆಟ್ ತಯಾರಿಸಿ. ಅನವಶ್ಯವಾಗಿ ಎಲ್ಲೆಲ್ಲಿ ಹಣ ಪೋಲಾಗುತ್ತಿದೆ ಎಂದು ಗುರುತಿಸಿಕೊಳ್ಳಿ ಮತ್ತು ಅಂಥ ಹಣವನ್ನು ಉಳಿಕೆಯ ಪಟ್ಟಿಗೆ ಸೇರಿಸಿ. ಈ ಮೂಲಕ ರಿಟೈರ್ ಫಂಡ್ ಕ್ರೋಡೀಕರಿಸಬಹುದು.

4. ನಿವೃತ್ತಿಯ ನಂತದ ಖಾತೆ ತೆರೆಯಿರಿ

ಭಾರತದಲ್ಲಿ ನಾನಾ ಅಕೌಂಟ್‌ಗಳು ಚಾಲ್ತಿಯಲ್ಲಿವೆ. ಅವುಗಳ ಮೂಲಕ ರಿಟೈರ್ಮೆಂಟ್ ಪ್ಲ್ಯಾನ್ ಮಾಡಬಹುದು. ಇಪಿಎಫ್, ಪಿಪಿಎಫ್, ಎನ್‌ಪಿಎಸ್, ಎಫ್‌ಡಿ ಇತ್ಯಾದಿ ಖಾತೆಗಳ ಮೂಲಕ ಸೇವಿಂಗ್‌ ಹೆಚ್ಚಿಸುತ್ತಾ ಹೋದಂತೆ ನಿವೃತ್ತಿ ಸಮಯದಯಲ್ಲಿ ತುಂಬಾ ಸಹಕಾರಿಯಾಗುತ್ತದೆ.

5.ಹೂಡಿಕೆ ಪ್ರಮಾಣ ಹೆಚ್ಚಲಿ

ಷೇರುಗಳು, ನಿರ್ದಿಷ್ಟ ಆದಾಯ ತರುವ ಹೂಡಿಕೆಗಳು, ರಿಯಲ್ ಎಸ್ಟೇಟ್ ಸೇರಿದಂತೆ ಇನ್ನಿತರ ಹೂಡಿಕೆಗಳನ್ನು ಆಯ್ದುಕೊಳ್ಳಬಹುದು. ನೀವು ಯಾವುದೇ ರೀತಿಯ ಹೂಡಿಕೆಯ ಸಾಧನವನ್ನು ಆಯ್ಕೆ ಮಾಡಿಕೊಳ್ಳಿ. ಆದರೆ, ಅದಕ್ಕಿಂತ ಮುಂಚೆ ಅದರ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡು ಮುಂದುವರಿಯರಿ.

6.ಅನವಶ್ಯಕ ವೆಚ್ಚ ಬೇಡ

ನಿಮ್ಮ ನಿವೃತ್ತಿಯ ದಿನಗಳು ಅತ್ಯುತ್ತಮವಾಗಿರಬೇಕು ಎಂದಾದರೆ, ಈಗಿನಿಂದಲೂ ಅನವಶ್ಯ ವೆಚ್ಚಗಳನ್ನು ದೂರ ಮಾಡಿ. ನಿಮ್ಮ ರಿಟೈರ್ಮೆಂಟ್‌ ಖಾತೆಗಳಿಗೆ ಆಟೋಮೆಟಿಕ್ ಆಗಿ ದುಡ್ಡು ಪೇ ಆಗುವ ಹಾಗೆ ಮಾಡಿ. ನಿಮ್ಮ ಸಂಬಳದಲ್ಲಿ ಇನ್‌ಕ್ರಿಮೆಂಟ್ ಆದಾಗಲೆಲ್ಲ. ಈ ರೀತಿಯ ಪರಿಹಾರವನ್ನು ಕಂಡುಕೊಳ್ಳಬಹುದು.

7.ಪರ್ಯಾಯ ಉಳಿತಾಯದ ಆಲೋಚನೆ ಇರಲಿ

ಮ್ಯೂಚವಲ್ ಫಂಡ್ಸ್, ಷೇರುಗಳು, ಬಾಂಡ್‌ಗಳಂಥ ಪರ್ಯಾಯ ಉಳಿತಾಯದ ಮಾರ್ಗಗಳನ್ನು ಹುಡುಕಿಕೊಳ್ಳಬಹುದು. ಕೇವಲ ಹಣವನ್ನು ಫಿಕ್ಸೆಡ್ ಡಿಪಾಸೆಟ್ ಮಾಡುವುದು ಮಾತ್ರವೇ ಉಳಿತಾಯದ ಮಾರ್ಗವಲ್ಲ. ಉಳಿತಾಯದ ಜತೆಗೆ ಹಣ ಹೆಚ್ಚಾಗುವ ಮಾರ್ಗಗಳಿವೆ. ಅವುಗಳನ್ನು ಶೋಧಿಸಬಹುದು. ಆದರೆ, ಮುನ್ನೆಚ್ಚರಿಕೆ ವಹಿಸುವುದು ಅತ್ಯಗತ್ಯ.

ಈ ಸುದ್ದಿಯನ್ನೂ ಓದಿ : Money Guide: ನಿಶ್ಚಿತ ಠೇವಣಿಗೆ ಯಾವ ಬ್ಯಾಂಕ್‌ನಲ್ಲಿ ಎಷ್ಟು ಬಡ್ಡಿದರ? ಇಲ್ಲಿದೆ ವಿವರ

8.ತೆರಿಗೆ ಕುರಿತ ಮಾಹಿತಿ ಇರಲಿ

ತೆರಿಗೆ ಕಾನೂನುಗಳು, ಹೂಡಿಕೆ ಆಯ್ಕೆಗಳು ಮತ್ತು ನಿವೃತ್ತಿ ಯೋಜನೆ ತಂತ್ರಗಳಲ್ಲಿನ ಬದಲಾವಣೆಗಳ ಬಗ್ಗೆ ನಿಮಗೆ ಅಪ್‌ಡೇಟೆಡ್ ಮಾಹಿತಿ ಇರುವುದು ಉತ್ತಮ. ತಿಳುವಳಿಕೆಯುಳ್ಳ ಹಣಕಾಸಿನ ನಿರ್ಧಾರಗಳನ್ನು ಮಾಡಲು ಈ ರೀತಿಯ ಅಪ್‌ಡೇಟೆಡ್ ಮಾಹಿತಿ ಇದ್ದರೆ ಬೆಸ್ಟ್ ಹೂಡಿಕೆ ಮಾಡಲು ಸಾಧ್ಯವಾಗುತ್ತದೆ.

9.ರಿಟೈರ್ಮೆಂಟ್ ಫಂಡ್ ವೆಚ್ಚ ಮಾಡಬೇಡಿ

ಯಾವುದೇ ಕಾರಣಕ್ಕೂ ನಿಮ್ಮ ನಿವೃತ್ತಿ ಉಳಿತಾಯವನ್ನು ಇತರ ವೆಚ್ಚಗಳಿಗಾಗಿ ಬಳಸಲು ಹೋಗಲೇಡಿ. ಉಳಿತಾಯದ ಹಣವನ್ನು ಬಳಸಲಾರಂಭಿಸಿದರೆ, ನಿವೃತ್ತಿಯ ಸಮಯದಲ್ಲಿ ಮತ್ತೆ ನೀವು ಹಣವಿಲ್ಲದೇ ಪರದಾಡಬೇಕಾಗುತ್ತದೆ. ಹಾಗಾಗಿ, ಎಂಥದ್ದೇ ಸಂದರ್ಭದಲ್ಲಿ ನಿವೃತ್ತಿಗಾಗಿ ತೆಗೆದಿಟ್ಟ ಅಥವಾ ಸೇವಿಂಗ್ ಮಾಡಿದ ಹಣವನ್ನು ಸದ್ಯದ ವೆಚ್ಚಕ್ಕೆ ಬಳಸಲು ಮುಂದಾಗಬೇಡಿ.

10.ತುರ್ತು ನಿಧಿ ಇರಲಿ

ಅನಿರೀಕ್ಷಿತ ವೆಚ್ಚಗಳಿಗಾಗಿ ತುರ್ತು ನಿಧಿಯನ್ನು ನಿರ್ವಹಣೆ ಮಾಡುವುದು ಉತ್ತಮ. ಯಾಕೆಂದರೆ, ತುರ್ತು ನಿಧಿ ನಿಮ್ಮ ಬಳಿ ಇದ್ದರೆ ನೀವು ನಿಮ್ಮ ಸೇವಿಂಗ್ಸ್‌ ಅನ್ನು ವೆಚ್ಚಗಳಿಗೆ ಬಳಸಲು ಮುಂದಾಗುವುದಿಲ್ಲ. ಇಲ್ಲದಿದ್ದರೆ, ಉಳಿತಾಯದ ಹಣವನ್ನೇ ನೀವು ತುರ್ತು ಅಗತ್ಯಗಳಿಗೆ ಬಳಸುತ್ತೀರಿ. ಆಗ ನಿಮ್ಮ ನಿವೃತ್ತಿಯ ಎಲ್ಲ ಪ್ಲ್ಯಾನ್ ಹಾಳಾಗುತ್ತದೆ.

Exit mobile version