ನವದೆಹಲಿ: ದೇಶದಲ್ಲಿ ಜನ ಬಾಲಿವುಡ್ ನಟ ಸಲ್ಮಾನ್ ಖಾನ್ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುತ್ತಾರೆ. ಇವರು ಯಾವಾಗ ಮದುವೆಯಾಗುತ್ತಾರೋ ಎಂಬ ಚರ್ಚೆಯಂತೂ ನಡೆಯುತ್ತದೆ. ಇಂತಹ ಚರ್ಚೆ, ಪ್ರಶ್ನೆ ಕುರಿತು 52 ವರ್ಷದ ರಾಹುಲ್ ಗಾಂಧಿ ಅವರು ಮೌನ ಮುರಿದಿದ್ದು, ತಮ್ಮ ಕನಸಿನ ಸಂಗಾತಿಯಲ್ಲಿರಬೇಕಾದ ಗುಣಗಳ ಬಗ್ಗೆ ಮಾತನಾಡಿದ್ದಾರೆ.
ಭಾರತ್ ಜೋಡೋ ಯಾತ್ರೆ ಮಧ್ಯೆಯೇ ಯುಟ್ಯೂಬ್ ಚಾನೆಲ್ ಒಂದಕ್ಕೆ ಸದರ್ಶನ ನೀಡಿರುವ ರಾಹುಲ್ ಗಾಂಧಿ, ಮದುವೆ ಕುರಿತ ಪ್ರಶ್ನೆಗೆ ಉತ್ತರಿಸಿದ್ದಾರೆ. “ಇದು ತುಂಬ ಆಸಕ್ತಿದಾಯಕ ಪ್ರಶ್ನೆ. ನನ್ನ ಸಂಗಾತಿಯಾಗುವ ಹೆಣ್ಣುಮಗಳಿಗೆ ಕೆಲ ಗುಣಗಳು ಇರಬೇಕು. ನನ್ನ ತಾಯಿ ಹಾಗೂ ಅಜ್ಜಿ ಇಂದಿರಾ ಗಾಂಧಿ ಅವರ ಗುಣಗಳು ಇದ್ದರೆ ಒಳ್ಳೆಯದು. ಹಾಗೆಯೇ, ಸಂಗಾತಿಯು ನನಗೆ ಎರಡನೇ ತಾಯಿಯಾಗಿ ಇರಬೇಕು” ಎಂದು ತಿಳಿಸಿದ್ದಾರೆ.
ಕಾರುಗಳ ಬಗ್ಗೆ ಆಸಕ್ತಿ ಇಲ್ಲ ಎಂದ ರಾಹುಲ್
ಬೈಕ್, ಕಾರ್ ಕ್ರೇಜ್ ಬಗ್ಗೆ ಉತ್ತರಿಸಿದ ರಾಹುಲ್ ಗಾಂಧಿ, “ನನಗೆ ಕಾರುಗಳು ಹಾಗೂ ಬೈಕ್‌ಗಳ ಬಗ್ಗೆ ಹೆಚ್ಚು ಆಸಕ್ತಿ ಇಲ್ಲ. ಆದರೆ, ನನಗೆ ಡ್ರೈವಿಂಗ್ ಮೋಟರ್ ಬೈಕ್‌ಗಳ ಕುರಿತು ಅಸಕ್ತಿ ಇದೆ. ನನ್ನ ಬಳಿ ಒಂದು ಎಲೆಕ್ಟ್ರಿಕ್ ಸ್ಕೂಟರ್ ಇದೆ, ಎಲೆಕ್ಟ್ರಿಕ್ ಬೈಕ್ ಇಲ್ಲ” ಎಂದು ಹೇಳಿದ್ದಾರೆ.
ಇದನ್ನೂ ಓದಿ | Viral Video | ತಾಯಿಯ ಕೆನ್ನೆ ಹಿಡಿದು ಕೀಟಲೆ ಮಾಡಿದ ರಾಹುಲ್ ಗಾಂಧಿ, ಮಗನ ಚೇಷ್ಟೆಗೆ ನಕ್ಕ ಸೋನಿಯಾ, ಕ್ಯೂಟ್ ವಿಡಿಯೊ ನೋಡಿ