ಭೋಪಾಲ್: ಒಂದೆಡೆ ದಕ್ಷಿಣ ಭಾರತದಲ್ಲಿ ಕೇಂದ್ರ ಸರ್ಕಾರ ಹಿಂದಿ ಹೇರಿಕೆ ಮಾಡುತ್ತಿದೆ ಎಂದು ಆರೋಪಿಸಲಾಗುತ್ತಿದೆ. ಮತ್ತೊಂದೆಡೆ, ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಹಿಂದಿ ಪ್ರೇಮ ಮೆರೆದಿದ್ದಾರೆ. “ಸದ್ಯದ ಪರಿಸ್ಥಿತಿಯಲ್ಲಿ ಇಂಗ್ಲಿಷ್ ಇಲ್ಲದೆ ಜೀವನವೇ ನಡೆಯುವುದಿಲ್ಲ ಎಂಬಂತಾಗಿದೆ. ಅಷ್ಟಕ್ಕೂ, ಔಷಧಗಳ ಮೇಲೆ ಶ್ರೀ ಹರಿ ಎಂದು ಬರೆಯಬೇಕು. ಹಾಗೆಯೇ, ಹಿಂದಿಯಲ್ಲೇಕೆ ಔಷಧಗಳ ಹೆಸರು ಮುದ್ರಿಸಬಾರದು” ಎಂದು ಪ್ರಶ್ನಿಸಿದ್ದಾರೆ.
ಭೋಪಾಲ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, “ಇಂಗ್ಲಿಷ್ ಅರ್ಥವಾಗದ ಕಾರಣ, ನಿರರ್ಗಳವಾಗಿ ಮಾತನಾಡಲು, ಮನನ ಮಾಡಿಕೊಂಡು ಅಧ್ಯಯನ ಮಾಡಲು ಆಗದೆ ಎಷ್ಟೋ ವಿದ್ಯಾರ್ಥಿಗಳು ಮೆಡಿಕಲ್ ಕೋರ್ಸ್‌ಅನ್ನು ಅರ್ಧಕ್ಕೇ ಬಿಡುತ್ತಾರೆ. ಈ ಮನಸ್ಥಿತಿ ತೊಲಗಬೇಕು. ನಾನು ಅಮೆರಿಕಕ್ಕೆ ಹೋದರೂ ಹಿಂದಿಯಲ್ಲಿಯೇ ಮಾತನಾಡುತ್ತೇನೆ. ಹಾಗಾಗಿ, ಔಷಧಗಳ ಮೇಲೆ ಹಿಂದಿಯಲ್ಲೂ ಬರೆಯಬೇಕು” ಎಂದು ತಿಳಿಸಿದರು.
ಹಿಂದಿ ಉತ್ತೇಜನಕ್ಕೆ ಕೇಂದ್ರ ಸರ್ಕಾರ ಇತ್ತೀಚೆಗೆ ಹಲವು ಕ್ರಮ ತೆಗೆದುಕೊಳ್ಳುತ್ತಿದೆ. ಹಿಂದಿಯೇತರ ರಾಜ್ಯಗಳನ್ನು ಹೊರತುಪಡಿಸಿ ಎಲ್ಲ ರಾಜ್ಯಗಳ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಹಿಂದಿಯಲ್ಲಿಯೇ ಬೋಧಿಸಬೇಕು ಎಂದು ಸಂಸದೀಯ ಸಮಿತಿಯು ಶಿಫಾರಸು ಮಾಡಿದೆ.
ಇದನ್ನೂ ಓದಿ | Nirmala Sitharaman | ತಮಿಳನ್ನು ಉತ್ತೇಜಿಸಿ, ಆದರೆ ಹಿಂದಿಯನ್ನು ತೆಗಳದಿರಿ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದೇಕೆ?