Site icon Vistara News

Jammu and Kashmir: ನೆಹರು ತಪ್ಪಿನಿಂದ ಪಿಒಕೆ ಸೃಷ್ಟಿ; ಅದು ನಮ್ಮದೇ: ಸಂಸತ್‌ನಲ್ಲಿ ಅಮಿತ್‌ ಶಾ

Vistara Editorial, New bill must help to kashmiri pandit

ನವದೆಹಲಿ: ಪ್ರಧಾನಿ ಪಂಡಿತ ಜವಾಹರ್ ಲಾಲ್ ನೆಹರು (PM Jawahar Lal Nehru) ಅವರ ತಪ್ಪಿನಿಂದಾಗಿ ಪಾಕ್ ಆಕ್ರಮಿತ ಕಾಶ್ಮೀರ ಸೃಷ್ಟಿಯಾಯಿತು(POK). ನೆಹರು ಅವರ ಕೈಗೊಂಡು ಎರಡು ತಪ್ಪು ನಿರ್ಧಾರಗಳಿಂದ ಕಾಶ್ಮೀರವು (Jammu and Kashmir) ದಶಕಗಳಿಂದ ಬಳಲುವಂತಾಗಿದೆ. ಆದರೆ ಎಂದೆಂದಿಗೂ ನಮ್ಮದೇ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಲೋಕಸಭೆಯಲ್ಲಿ ಬುಧವಾರ ಪ್ರತಿಪಾದಿಸಿದರು. 2023ರ ಜಮ್ಮು ಮತ್ತು ಕಾಶ್ಮೀರ ಮೀಸಲು(ತಿದ್ದುಪಡಿ) ವಿಧೇಯಕ ಮತ್ತು ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ(ತಿದ್ದುಪಡಿ) ವಿಧೇಯಕಗಳನ್ನು ಮಂಡಿಸಿ, ಮಾತನಾಡಿದರು(Parliament Session).

ಪ್ರಧಾನಿ ಜವಾಹರಲಾಲ್ ನೆಹರು ಅವರ ಅಧಿಕಾರಾವಧಿಯಲ್ಲಿ ಎರಡು ಪ್ರಮಾದಗಳಿಂದಾಗಿ ಹಲವಾರು ವರ್ಷಗಳ ಕಾಶ್ಮೀರ ಅನುಭವಿಸುತ್ತಾ ಬಂದಿದೆ. ನಮ್ಮ ಪಡೆಗಳು ಗೆಲ್ಲುತ್ತಿರುವಾಗಲೂ ಕದನ ವಿರಾಮ ಘೋಷಿಸಲಾಯಿತು ಮತ್ತು ಪಾಕಿಸ್ತಾನ ಆಕ್ರಮಿತ ಪ್ರದೇಶವು ಅಸ್ತಿತ್ವಕ್ಕೆ ಬಂದದ್ದು ದೊಡ್ಡ ತಪ್ಪು. ಕದನ ವಿರಾಮವನ್ನು ಮೂರು ದಿನಗಳ ಕಾಲ ವಿಳಂಬ ಮಾಡಿದ್ದರೆ, ಪಿಒಕೆ ಭಾರತದ ಭಾಗವಾಗುತ್ತಿತ್ತು. ಇದು ನೆಹರು ಅವರ ಮೊದಲನೇ ತಪ್ಪು ಎಂದು ಅಮಿತ್ ಶಾ ಅವರು ಹೇಳಿದರು.

ನಮ್ಮ ಸಮಸ್ಯೆಯನ್ನು ನೆಹರವು ವಿಶ್ವ ಸಂಸ್ಥೆಗೆ ತೆಗೆದುಕೊಂಡು ಹೋಗಿದ್ದು ಎರಡನೇ ತಪ್ಪು ಎಂದು ಅಮಿತ್ ಶಾ ಹೇಳಿದರು. ಇದೇ ವೇಳೆ ಅವರು ಕಾಶ್ಮೀರ ಪಂಡಿತರ ಹತ್ಯೆಗೆ ಕಾಂಗ್ರೆಸ್ ಕಾರಣ. ಒಂದೊಮ್ಮೆ ಮತ ರಾಜಕಾರಣವನ್ನು ಕೈ ಬಿಟ್ಟಿದ್ದರೆ ಈ ಅಮಾನವೀಯ ಹತ್ಯೆಗಳನ್ನು ತಡೆಯಬಹುದಾಗಿತ್ತು ಎಂದು ಶಾ ಹೇಳಿದರು.

ಪಿಒಕೆ ನಮ್ಮದು, ಅವರಿಗಾಗಿ ಮೀಸಲು ಕ್ಷೇತ್ರಗಳು

ಕಳೆದ 70 ವರ್ಷಗಳಿಂದ ತಮ್ಮ ಹಕ್ಕುಗಳನ್ನು ಕಳೆದುಕೊಂಡಿರುವ ಕಾಶ್ಮೀರದ ಜನರಿಗಾಗಿ ಈ ಎರಡು ವಿಧೇಯಕಗಳನ್ನು ಮಂಡಿಸುತ್ತಿದ್ದೇವೆ. ಭಯೋತ್ಪಾದನೆಯ ಕಾರಣದಿಂದ ಕಾಶ್ಮೀರ ತೊರೆದವರಿಗೆ ಈ ವಿಧೇಯಕಗಳು ನ್ಯಾಯ ಒದಗಿಸಲಿವೆ. ಪಾಕ್ ಆಕ್ರಮಿತ ಕಾಶ್ಮೀರದಿಂದ ವಲಸೆ ಬಂದವರಿಗೆ ಕಾಶ್ಮೀರ ವಿಧಾನಸಭೆಯಲ್ಲಿ ಒಂದು ಸ್ಥಾನವನ್ನು ಮೀಸಲಿಡಲಾಗುವುದು. ಎರಡು ಮಸೂದೆಗಳಲ್ಲಿ ಒಂದು ಕಾಶ್ಮೀರಿ ವಲಸಿಗ ಸಮುದಾಯದ ಇಬ್ಬರನ್ನು ವಿಧಾನಸಭೆಗೆ ನಾಮನಿರ್ದೇಶನ ಮಾಡಲು ಅವಕಾಶ ಕಲ್ಪಿಸುತ್ತದೆ ಎಂದು ಅಮಿತ್ ಶಾ ಅವರು ಹೇಳಿದರು.

ಅವರು (ಕಾಶ್ಮೀರಿ ಪಂಡಿತರು) ಕಾಶ್ಮೀರದಿಂದ ನಿರ್ಗತಿಕರಾದಾಗ, ತಮ್ಮ ದೇಶದಲ್ಲಿ ನಿರಾಶ್ರಿತರಾಗಿ ಬದುಕುವ ಅನಿವಾರ್ಯತೆಯು ಸೃಷ್ಟಿಯಾಯಿತು. ಸುಮಾರು 46,631 ಕುಟುಂಬಗಳು ತಮ್ಮದೇ ದೇಶದಲ್ಲಿ ನಿರಾಶ್ರಿತರಾಗಿದ್ದಾರೆ. ಈ ಮಸೂದೆ ಅವರಿಗೆ ಹಕ್ಕುಗಳನ್ನು ಪಡೆಯಲು, ಈ ಮಸೂದೆ ಅವರಿಗೆ ಪ್ರಾತಿನಿಧ್ಯವನ್ನು ನೀಡುತ್ತದೆ. ಮತ-ಬ್ಯಾಂಕ್ ರಾಜಕೀಯವನ್ನು ಪರಿಗಣಿಸದೆ ಆರಂಭದಲ್ಲಿ ಭಯೋತ್ಪಾದನೆಯನ್ನು ನಿಭಾಯಿಸಿದ್ದರೆ, ಕಾಶ್ಮೀರಿ ಪಂಡಿತರು ಕಣಿವೆಯನ್ನು ತೊರೆಯಬೇಕಾಗಿರಲಿಲ್ಲ. ಈ ಹತ್ಯಾಕಾಂಡವನ್ನು ತಡೆಯುವ ಜವಾಬ್ದಾರಿಯನ್ನು ಹೊತ್ತವರು ಇಂಗ್ಲೆಂಡ್‌ನಲ್ಲಿ ರಜೆಯ ಮಜದಲ್ಲಿದ್ದರು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕಾಂಗ್ರೆಸ್ ವಿರುದ್ಧ ಹರಿ ಹಾಯ್ದರು.

ಕೇಂದ್ರಾಡಳಿತ ಪ್ರದೇಶ ಮೀಸಲು ಕಾಯ್ದೆಗೆ ತಿದ್ದುಪಡಿಯನ್ನು ಬಯಸುವ 2023ರ ಜಮ್ಮು ಮತ್ತು ಕಾಶ್ಮೀರ ಮೀಸಲು ತಿದ್ದುಪಡಿ ವಿಧೇಯಕವನ್ನು ಕೇಂದ್ರ ಸರ್ಕಾರವು 2023ರ ಜುಲೈ 26ರಂದು ಮಂಡಿಸಿತ್ತು. ಈ ಪ್ರದೇಶದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳಿಗೆ ಉದ್ಯೋಗ ಮತ್ತು ಶೈಕ್ಷಣಿಕ ಸಂಸ್ಥೆಗಳಲ್ಲಿ ಮೀಸಲು ಕಲ್ಪಿಸುತ್ತದೆ. ಜತೆಗೆ, ಜಮ್ಮು ಮತ್ತು ಕಾಶ್ಮೀರ ಮರು ಸಂಘಟನಾ ತಿದ್ದುಪಡಿ ವಿಧೇಯಕವು ರಾಜ್ಯಪಾಲರಿಗೆ, ಕಾಶ್ಮೀರ ವಲಸೆ ಸಮುದಾಯದ ಇಬ್ಬರನ್ನು ಅಸೆಂಬ್ಲಿಗೆ ನಾಮ ನಿರ್ದೇಶನ ಮಾಡುವ ಅಧಿಕಾರವನ್ನು ನೀಡುತ್ತದೆ. ನವೆಂಬರ್ 1, 1989ರ ನಂತರ ಕಾಶ್ಮೀರ ಕಣಿವೆಯಿಂದ ಅಥವಾ ಜಮ್ಮು ಮತ್ತು ಕಾಶ್ಮೀರ ರಾಜ್ಯದ ಯಾವುದೇ ಭಾಗದಿಂದ ವಲಸೆ ಬಂದವರು ಮತ್ತು ರಿಲೀಫ್ ಕಮಿಷನರ್‌ನಲ್ಲಿ ನೋಂದಾಯಿಸಲ್ಪಟ್ಟ ವ್ಯಕ್ತಿಗಳನ್ನು ವಲಸಿಗರು ಎಂದು ವ್ಯಾಖ್ಯಾನಿಸಲಾಗಿದೆ.

ಈ ಸುದ್ದಿಯನ್ನೂ ಓದಿ: VK Singh: ಪಾಕ್ ಆಕ್ರಮಿತ ಕಾಶ್ಮೀರವೂ ಭಾರತದ ಜತೆ ಶೀಘ್ರ ವಿಲೀನ! ಸುಳಿವು ಬಿಟ್ಟುಕೊಟ್ಟ ಕೇಂದ್ರ ಸಚಿವ

Exit mobile version