Site icon Vistara News

Yogi Adityanath: ಯಮ ನಿಮಗಾಗಿ ಕಾಯುತ್ತಿರುತ್ತಾನೆ; ಕ್ರಿಮಿನಲ್‌ಗಳಿಗೆ ಯೋಗಿ ಖಡಕ್ ವಾರ್ನಿಂಗ್

Yogi Adityanath

Yogi Adityanath's 'Ram Naam Satya' Warning To Those Involved In Crimes

ಲಖನೌ: ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್‌ (Yogi Adityanath) ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಅಪರಾಧಿಗಳನ್ನು ಮಟ್ಟಹಾಕುವ ರೀತಿ ಬದಲಾಗಿದೆ. ಗಂಭೀರ ಕ್ರಿಮಿನಲ್‌ ಅಪರಾಧ ಪ್ರಕರಣಗಳ ಆರೋಪಿಗಳನ್ನು ಎನ್‌ಕೌಂಟರ್‌ ಮಾಡುವುದು, ಸಾರ್ವಜನಿಕ ಆಸ್ತಿಪಾಸ್ತಿ ಸೇರಿ ಯಾವುದೇ ಕೃತ್ಯದಲ್ಲಿ ತೊಡಗಿದವರ ಮನೆಗಳಿಗೆ ಬುಲ್ಡೋಜರ್‌ ನುಗ್ಗಿಸುವದು ಸೇರಿ ಹಲವು ರೀತಿಯ ಕ್ರಮ ತೆಗೆದುಕೊಂಡಿದ್ದಾರೆ. ಈಗ ಕ್ರಿಮಿನಲ್‌ಗಳಿಗೆ, ಪುಂಡರಿಗೆ ಯೋಗಿ ಮತ್ತೊಂದು ಎಚ್ಚರಿಕೆ ನೀಡಿದ್ದಾರೆ. “ಹೆಣ್ಣುಮಕ್ಕಳ ತಂಟೆಗೆ ಹೋದರೆ, ಅವರನ್ನು ಮುಟ್ಟಿದರೆ ಯಮರಾಜ ನಿಮಗಾಗಿ ಕಾಯುತ್ತಿರುತ್ತಾನೆ” ಎಂದು ಎಚ್ಚರಿಸಿದ್ದಾರೆ.

ಉತ್ತರ ಪ್ರದೇಶದ ಅಂಬೇಡ್ಕರ್‌ ನಗರದಲ್ಲಿ ಬಾಲಕಿಯೊಬ್ಬಳನ್ನು ಚುಡಾಯಿಸಿದ ಇಬ್ಬರ ಕಾಲಿಗೆ ಗುಂಡು ಹಾರಿಸಿ, ಅವರನ್ನು ಬಂಧಿಸಿದ ಬಳಿಕ ಯೋಗಿ ಆದಿತ್ಯನಾಥ್‌ ಇಂತಹ ಎಚ್ಚರಿಕೆ ನೀಡಿದ್ದಾರೆ. “ರಾಜ್ಯದಲ್ಲಿ ಯಾರಾದರೂ ಈ ರೀತಿ ಹೆಣ್ಣುಮಕ್ಕಳನ್ನು ಚುಡಾಯಿಸುವುದು, ಅವರಿಗೆ ಕಿರುಕುಳ ನೀಡುವುದು ಮಾಡಿದರೆ, ಅಂತಹವರಿಗೆ ಯಮರಾಜ ಕಾಯುತ್ತಿರುತ್ತಾನೆ. ಕಾನೂನು ಸುವ್ಯವಸ್ಥೆ ಕಾಪಾಡುವ ದಿಸೆಯಲ್ಲಿ ಸರ್ಕಾರ ರಾಜಿ ಆಗುವುದಿಲ್ಲ. ಕಠಿಣ ಕ್ರಮಗಳಿಂದಲೇ ಅಪರಾಧಿಗಳಿಗೆ ತಕ್ಕ ಪಾಠ ಕಲಿಸಲಾಗುತ್ತದೆ” ಎಂದು ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.

ಚುಡಾಯಿಸಿದವರ ಬಂಧನದ ವಿಡಿಯೊ

ಏನಿದು ದುಪಟ್ಟಾ ಕೇಸ್?‌

ಅಂಬೇಡ್ಕರ್‌ ನಗರದಲ್ಲಿ 17 ವರ್ಷದ ಬಾಲಕಿ ಶಾಲೆಯಿಂದ ತಮ್ಮ ಮನೆಗೆ ವಾಪಸಾಗುತ್ತಿದ್ದಳು. ಈ ವೇಳೆ, ಶಹಾಬಾಜ್ ಮತ್ತು ಆತನ ಸಹೋದರ ಅರ್ಬಾಜ್ ಅವರು ಹಂಸವರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಡ್ಡಗಟ್ಟಿದ್ದರು. ಆರೋಪಿಗಳಿಬ್ಬರು ಮೋಟಾರ್ ಸೈಕಲ್‌ನಲ್ಲಿ ಹೋಗುತ್ತಿದ್ದರು. ಆಕೆಯನ್ನು ಚುಡಾಯಿಸುವುದಕ್ಕಾಗಿ ಆಕೆಯ ದುಪಟ್ಟಾ ಎಳೆದಿದ್ದರು. ಆಗ ಆಕೆ ನೆಲಕ್ಕೆ ಬಿದ್ದಿದ್ದಳು. ಇದೇ ವೇಳೆ, ಫೈಸಲ್ ಎಂಬಾತ ಮತ್ತೊಬ್ಬ ಯುವಕ ಬೈಕ್‌ನಲ್ಲಿ ಅಲ್ಲಿಂದ ಪಾಸಾಗುತ್ತಿದ್ದ. ಕೆಳಗೆ ಬಿದ್ದಿದ್ದ ಯುವತಿಯ ತಲೆಯ ಮೇಲೆ ಬೈಕ್ ಹತ್ತಿಸಿ ಪರಾರಿಯಾಗಿದ್ದಾನೆ. ಇದರಿಂದ ತೀವ್ರವಾಗಿ ಗಾಯಯಗೊಂಡಿದ್ದ ಯುವತಿ ರಕ್ತಸ್ರಾವದಿಂದಾಗಿ ಮೃತಪಟ್ಟಿದ್ದಳು.

ಇದನ್ನೂ ಓದಿ: Viral Video: ಯುಪಿಯಲ್ಲಿ ಹುಡುಗಿಯನ್ನು ಚುಡಾಯಿಸಿ, ಆಕೆ ಸಾವಿಗೆ ಕಾರಣರಾದವರ ಕಾಲಿಗೆ ಬಿತ್ತು ಗುಂಡು!

ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಗಳು ಘಟನಾ ಸ್ಥಳದಿಂದ ತಪ್ಪಿಸಿಕೊಂಡು ಪರಾರಿಯಾಗುವ ಯತ್ನದಲ್ಲಿದ್ದರು. ಈ ಪೈಕಿ ಇಬ್ಬರು ಹಿಡಿಯುಲು ಮಂದಾದ ಉತ್ತರ ಪ್ರದೇಶದ ಪೊಲೀಸರು ಅವರ ಕಾಲಿಗೆ ಗುಂಡು ಹಾರಿಸಿದ್ದಾರೆ ಮತ್ತು ಬಳಿಕ ಅವರನ್ನು ಬಂಧಿಸಿದ್ದಾರೆ. ಮೂರನೇ ಆರೋಪಿ ಅಪ್ರಾಪ್ತನಾಗಿದ್ದು, ಆತ ತನ್ನ ಕಾಲನ್ನು ತಾನೇ ಮುರಿದುಕೊಂಡು ಪೊಲೀಸರಿಗೆ ಶರಣಾಗಿದ್ದಾನೆ. ಸಪೋರ್ಟ್‌ ಬಳಸಿಕೊಂಡು ಗಾಯಾಳು ಆರೋಪಿಗಳನ್ನು ಪೊಲೀಸರು ತೆಗೆದುಕೊಂಡು ಹೋಗುತ್ತಿರುವ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಆದರೆ, ಆರೋಗ್ಯದ ಕುರಿತಾದ ಯಾವುದೇ ಮಾಹಿತಿಯನ್ನು ಪೊಲೀಸರು ನೀಡಿಲ್ಲ.

Exit mobile version