ನವದೆಹಲಿ: ತಮ್ಮ ಜನ್ಮದಿನವಾದ ಸೆಪ್ಟೆಂಬರ್ 17, ಭಾನುವಾರ ಪ್ರಧಾನಿ ನರೇಂದ್ರ ಮೋದಿ (PM Modi Birthday) ಅವರು ದಿಲ್ಲಿಯ ದ್ವಾರಕದಲ್ಲಿರುವ ಇಂಡಿಯಾ ಇಂಟರ್‌ನ್ಯಾಷನಲ್ ಕನವೆನ್ಷನ್ ಸೆಂಟರ್ (IICC) ‘ಯಶೋಭೂಮಿ’ಯ (YashoBhoomi) ಮೊದಲ ಹಂತವನ್ನು ಉದ್ಘಾಟಿಸಿದರು. 5,400 ರೂಪಾಯಿ ವೆಚ್ಚದಲ್ಲಿ ಈ ಐಐಸಿಸಿ ಕೇಂದ್ರವನ್ನು ಕೇಂದ್ರ ಸರ್ಕಾರವು ನಿರ್ಮಾಣ ಮಾಡುತ್ತಿದೆ. ಸುಮಾರು 73, 000 ಚದರ ಅಡಿ ಜಾಗದಲ್ಲಿ ಈ ಭವನ ತಲೆ ಎತ್ತಲಿದೆ(PM Narendra Modi).
ಇಂಡಿಯಾ ಇಂಟರ್‌ನ್ಯಾಷನಲ್ ಕನವೆನ್ಷನ್ ಸೆಂಟರ್‌ನಲ್ಲಿ ಒಟ್ಟು 15 ಕನವೆನ್ಷನ್ ರೂಮಗಳಿದ್ದು, ಈ ಪೈಕಿ ಒಂದು ಮುಖ್ಯ ಸಭಾಂಗಣವೂ ಇದೆ. ಬೃಹತ್ ಬಾಲ್ ರೂಮ್, 13 ಮೀಟಿಂಗ್ ರೂಮ್‌ಗಳಿದ್ದು, 11,000 ಗಣ್ಯರಿಗೆ ಆಸನ ವ್ಯವಸ್ಥೆ ಇದರಲ್ಲಿದೆ.
ಭಾರತ್ ಮಂಟಪಮ್, ಯಶೋಭೂಮಿಯಂಥ ಅಂತಾರಾಷ್ಟ್ರೀಯ ಮಟ್ಟದ ಕೇಂದ್ರಗಳು ಜಿ20ಯಂಥ ಸಮಾವೇಶಗಳನ್ನು ನಡೆಸುವ ಸಾಮರ್ಥ್ಯವನ್ನು ಹೊಂದಿದೆ. ಇದರೊಂದಿಗೆ ದಿಲ್ಲಿಯು ಜಗತ್ತಿನ ಕಾನ್ಫೆರನ್ಸ್ ಟೂರಿಸಮ್ ಹಬ್ ಎಂದು ಗುರುತಿಸಿಕೊಳ್ಳಲಿದೆ.
ಯುಶೋಭೂಮಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಭಾರತ್ ಮಂಟಪಂ, ಯಶೋಭೂಮಿಯಂಥ ಕೇಂದ್ರಗಳು ದಿಲ್ಲಿಯನ್ನು ಕಾನ್ಫರೆನ್ಸ್ ಟೂರಿಸಮ್ ಹಬ್ ಆಗಿ ರೂಪಿಸಲಿವೆ. ಯುಶಭೂಮಿಯೊಂದಲೇ ಲಕ್ಷಾಂತರ ಜನರು ಉದ್ಯೋಗಗಳನ್ನು ಪಡೆದುಕೊಳ್ಳಲಿದ್ದಾರೆ ಎಂದು ಹೇಳಿದರು. ಇಂಡಿಯಾ ಇಂಟರ್‌ನ್ಯಾಷನಲ್ ಕನವೆನ್ಷನ್ ಆ್ಯಂಡ್ ಎಕ್ಸ್ ಪೋ ಕೇಂದ್ರವು ಸ್ಥಳೀಯ ಉತ್ಪನ್ನಗಳನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲಿದೆ ಎಂದು ಹೇಳಿದ್ದಾರೆ.
ವಿಶ್ವಕರ್ಮ ಯೋಜನೆಗಾಗಿ ಕೇಂದ್ರ ಸರ್ಕಾರವು 13 ಸಾವಿರ ಕೋಟಿ ರೂಪಾಯಿಯನ್ನು ಐದು ವರ್ಷಗಳ ಕಾಲ ವಿನಿಯೋಗಿಸಿಲದೆ ಇದರಿಂದ ಸುಮಾರು ನೇಕಾರರು, ಅಕ್ಕಸಾಲಿಗರು, ಕಮ್ಮಾರರು, ಲಾಂಡ್ರಿ ಕೆಲಸಗಾರರು ಮತ್ತು ಕ್ಷೌರಿಕರು ಸೇರಿದಂತೆ 30 ಲಕ್ಷ ಕುಟುಂಬಗಳಿಗೆ ಉಪಯೋಗವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಈ ಸುದ್ದಿಯನ್ನೂ ಓದಿ: PM Modi Birthday: ಮೋದಿಗೆ ಶುಭಕೋರಿದ ಗೌಡರು, ಕುಮಾರಸ್ವಾಮಿ; ಡೈನಾಮಿಕ್ ಲೀಡರ್ ಎಂದ ಎಚ್ಡಿಕೆ
ಸಾಂಪ್ರದಾಯಕತೆ ಜತೆ ತಂತ್ರಜ್ಞಾನ ಸೇರಿದರೆ ಎಂಥ ಅದ್ಭುತ ಸಾಧ್ಯ ಎಂಬುದನ್ನು ಜಿ20 ಕ್ರಾಫ್ಟ್ ಬಜಾರ್ ವೇಳೆ ಇಡೀ ಜಗತ್ತು ಗಮನಿಸಿದೆ. ವಿಶ್ವಕರ್ಮ ಗೆಳೆಯರು ತಯಾರಿಸಿದ ವಸ್ತುಗಳನ್ನು ನಾವು ಜಿ20 ವಿಶ್ವನಾಯಕರಿಗೆ ಕಾಣಿಕೆಯಾಗಿ ನೀಡಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಇದೇ ವೇಳೆ ಹೇಳಿದರು.
ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯಡಿ ಸರ್ಕಾರವು ಯಾವುದೇ ಖಾತರಿಯಿಲ್ಲದೆ 3 ಲಕ್ಷದವರೆಗೆ ಸಾಲವನ್ನು ನೀಡುತ್ತದೆ. ಬಡ್ಡಿ ದರವೂ ತೀರಾ ಕಡಿಮೆ ಇರಲಿದೆ. ಆರಂಭದಲ್ಲಿ 1 ಲಕ್ಷ ರೂ. ಸಾಲ ನೀಡಲು ಸರ್ಕಾರ ನಿರ್ಧರಿಸಿದ್ದು, ಅದನ್ನು ಮರುಪಾವತಿಸಿದಾಗ ಸರ್ಕಾರ ವಿಶ್ವಕರ್ಮ ಪಾಲುದಾರರಿಗೆ 2 ಲಕ್ಷ ರೂಪಾಯಿ ಹೆಚ್ಚುವರಿ ಸಾಲವನ್ನು ನೀಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.