Site icon Vistara News

Year Ender 2023: ಕಳೆದ ವರ್ಷಕ್ಕೆ ಹೋಲಿಸಿದರೆ 2023ರಲ್ಲಿ ಶೇ.58ರಷ್ಟು ಹೆಚ್ಚು ಉದ್ಯೋಗ ಕಡಿತ!

Year Ender 2023, 58 percent job layoffs in 2023 compared to last year

ನವದೆಹಲಿ: 2022ರಲ್ಲಿ ಆರಂಭವಾದ ಉದ್ಯೋಗ ಕಡಿತ ಪ್ರವೃತ್ತಿಯೂ 2023ರಲ್ಲಿ ಮುಂದುವರಿಯಿತು(job layoffs 2023). ಬಹುಶಃ 2024ರಲ್ಲೂ ಈ ಟ್ರೆಂಡ್ ಮುಂದುವರಿಯುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 2022ಕ್ಕೆ ಹೋಲಿಸಿದರೆ 2023ರಲ್ಲಿ ಉದ್ಯೋಗ ಕಡಿತ ಪ್ರಮಾಣ ಶೇ.58ರಷ್ಟು ಹೆಚ್ಚಿತ್ತು. ಆರ್ಥಿಕ ಹಿಂಜರಿತ (Economic recession) ಮತ್ತು ಕೊರೊನಾ ವೈರಸ್ (Covid 19) ಸಾಂಕ್ರಾಮಿಕ ಪರಿಣಾಮ ಜಾಗತಿಕ ಟೆಕ್‌ ಕಂಪನಿಗಳು (Tech Companies) ಸೇರಿದಂತೆ ಬಹುತೇಕ ವಲಯ ಕಂಪನಿಗಳು ಉದ್ಯೋಗ ಕಡಿತವನ್ನು ಆರಂಭಿಸಿದ್ದವು. ಈಗಾಗಲೇ ಹೇಳಿದಂತೆ 2023ರಲ್ಲಿ ಉದ್ಯೋಗ ಕಡಿತ ಪ್ರಮಾಣ ಹೆಚ್ಚಿದ್ದರೂ ಮಾರುಕಟ್ಟೆಯ ಕ್ರಿಯಾಶೀಲತೆ ಹೆಚ್ಚಿತ್ತು(Year Ender 2023).

ಲೇಆಫ್ಸ್.ಎಫ್‌ವೈಐ ಅಂಕಿಸಂಖ್ಯೆಗಳ ಪ್ರಕಾರ, 2023ರಲ್ಲಿ ಒಟ್ಟು 1,175 ಟೆಕ್ ಕಂಪನಿಗಳು 2,60,509 ಉದ್ಯೋಗಿಗಳನ್ನು ವಜಾಗೊಳಿಸಿವೆ. 2022ಕ್ಕೆ ಹೋಲಿಸಿದರೆ 2023ರಲ್ಲಿ ಹೆಚ್ಚು ಉದ್ಯೋಗ ಕಡಿತವಾಗಿದೆ. 2022ರಲ್ಲಿ 1,064 ಟೆಕ್ ಕಂಪನಿಗಳು 1,64,969 ಉದ್ಯೋಗಿಗಳನ್ನು ಮನೆಗೆ ಕಳುಹಿಸಿದ್ದವು. ಅಂದರೆ, 2022ಕ್ಕೆ ಹೋಲಿಸಿದರೆ 2023ರಲ್ಲಿ ಉದ್ಯೋಗ ಕಡಿತ ಪ್ರಮಾಣವು ಶೇ.57.8ರಷ್ಟು ಹೆಚ್ಚಿತ್ತು.

ದೈತ್ಯ ಕಂಪನಿ ಅಮೆಜಾನ್ ಈ ವರ್ಷ ಹೆಚ್ಚಿನ ಸಂಖ್ಯೆಯ ಉದ್ಯೋಗಿಗಳನ್ನು ವಜಾಗೊಳಿಸಿದ್ದು, 17,000 ವೃತ್ತಿಪರರನ್ನು ಬಿಟ್ಟುಕೊಟ್ಟಿದೆ. ನಂತರ ಗೂಗಲ್ 12,000, ಮೆಟಾ 10,000 ಮತ್ತು ಮೈಕ್ರೋಸಾಫ್ಟ್ 10,000 ಉದ್ಯೋಗಗಳನ್ನು ಕಡಿತ ಮಾಡಿದೆ. ಅದೇ ರೀತಿ ಭಾರತದಲ್ಲಿ ಎಜುಟೆಕ್ ಕಂಪನಿಯಾಗಿರುವ ಬೈಜೂಸ್ ಅತಿ ಹೆಚ್ಚು ಉದ್ಯೋಗಿಗಳನ್ನು ಮನೆಗೆ ಕಳುಹಿಸಿದೆ. ಬೈಜೂಸ್ ಒಟ್ಟು 3,500 ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿದೆ. ನಂತರದ ಸ್ಥಾನದಲ್ಲಿ ಅನ್‌ಅಕಾಡೆಮಿಯು ತನ್ನ ಒಟ್ಟು ಉದ್ಯೋಗಗಲ ಪೈಕಿ ಶೇ.12ರಷ್ಟು ಉದ್ಯೋಗ ಕಡಿತ ಮಾಡಿದೆ. ಷೇರ್ ಚಾಟ್ 500, ಸ್ವೀಗ್ಗಿ 380, ಓಲಾ 200 ಮತ್ತು ಫಿಜಿಕ್‌ವಾಲಾ 120 ಉದ್ಯೋಗಗಳನ್ನು ಕಡಿತ ಮಾಡಿವೆ.

ಪರಿಸ್ಥಿತಿಯಲ್ಲಿ ಸುಧಾರಣೆಯಾಗೋವರೆಗೂ ಈ ಉದ್ಯೋಗ ಕಡಿತವು 2026ರವರೆಗೂ ಮುಂದುವರಿಯವ ಸಾಧ್ಯತೆಗಳಿವೆ ಎನ್ನುತ್ತಾರೆ ತಜ್ಞರು. ಬದಲಿ ನೇಮಕಾತಿಗಳು ಜಿಸಿಸಿಗಳು, ಡೇಟಾ ಸೆಂಟರ್‌ಗಳು, ಬಿಎಫ್‌ಎಸ್‌ಐಗಳಲ್ಲಿನ ಟೆಕ್ ಸೆಂಟರ್‌ಗಳು, ಆಟೋಮೋಟಿವ್‌ಗಳು ಮತ್ತು ಇಆರ್‌ ಮತ್ತು ಡಿ ಉದ್ಯಮಗಳಲ್ಲಿ ಪ್ರವೇಶ ಮಟ್ಟದ ಮತ್ತು ಮಧ್ಯಮ ಮಟ್ಟದ ಪಾತ್ರಗಳನ್ನು ಕೇಂದ್ರೀಕರಿಸುತ್ತವೆ.

ಉದ್ಯೋಗ ಕಡಿತದ ಪ್ರವೃತ್ತಿಯು ಹೆಚ್ಚಿನ ವಲಯಗಳಲ್ಲಿ ಪಿರಮಿಡ್‌ನ ಕೆಳಭಾಗದಲ್ಲಿ ಸಾಧಾರಣವಾಗಿ ಉಳಿದಿದೆ. ನೇಮಕಾತಿಗೆ ಹೋಲಿಸಿದರೆ ಶೇಕಡಾ 2 ರಿಂದ 3 ರಷ್ಟು ಮಾತ್ರ ಉದ್ಯೋಗ ಕಡಿತವಾಗುತ್ತಿದೆ. ಹಸಿರು ಸಾಫ್ಟ್‌ವೇರ್ ಅಭಿವೃದ್ಧಿಗಳನ್ನು ಉತ್ತೇಜಿಸುವ ಮೂಲಕ, ಕ್ಲೌಡ್ ನೆಟ್‌ವರ್ಕ್‌ಗಳನ್ನು ವಿಸ್ತರಿಸುವ ಮೂಲಕ ಮತ್ತು ಗ್ರಾಹಕ ಇಂಟರ್ಫೇಸ್ ಪರಿಹಾರಗಳು/ಸೇವೆಗಳನ್ನು ಹೆಚ್ಚಿಸುವ ಮೂಲಕ ಜಾಗತಿಕ ನಿರೀಕ್ಷೆಗಳನ್ನು ಪೂರೈಸಲು ಭಾರತಕ್ಕೆ ಸವಾಲಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಈ ಸುದ್ದಿಯನ್ನೂ ಓದಿ: Year Ender 2023: ಜಗತ್ತನ್ನೇ ಬೆರಗುಗೊಳಿಸಿದ ಭಾರತದ ಟಾಪ್ 10 ಕ್ಷಣಗಳು!

Exit mobile version