ಲಖನೌ: ದೇಶಾದ್ಯಂತ ದಿನೇದಿನೆ ಯುವಕ-ಯುವತಿಯರೇ ಹೃದಯಾಘಾತದಿಂದ ಮೃತಪಡುತ್ತಿರುವ ಪ್ರಕರಣಗಳು ಜಾಸ್ತಿಯಾಗುತ್ತಿವೆ. ಮಧ್ಯಪ್ರದೇಶದಲ್ಲಿ ಕಳೆದ ಗುರುವಾರ ಸಾಯಿಬಾಬಾ ಮಂದಿರದಲ್ಲಿಯೇ ಯುವಕನೊಬ್ಬ ಹೃದಯಾಘಾತದಿಂದ ಮೃತಪಟ್ಟಿರುವ ಬೆನ್ನಲ್ಲೇ ಉತ್ತರ ಪ್ರದೇಶದಲ್ಲಿ ಮದುವೆ ದಿನವೇ ೨೧ ವರ್ಷದ ಯುವತಿಯು (Heart Attack At Wedding) ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಲಖನೌನ ಮಲಿಹಾಬಾದ್ (Malihabad) ನಗರ ವ್ಯಾಪ್ತಿಯ ಭದ್ವಾನ ಗ್ರಾಮದಲ್ಲಿ ಡಿಸೆಂಬರ್ ೩ರಂದು ಶಿವಾಂಗಿ ಶರ್ಮಾ ವಿವಾಹ ಇತ್ತು. ಪತಿಯಾಗುವವನ ಜತೆ ವೇದಿಕೆ ಮೇಲೆ ಶಿವಾಂಗಿ ಸಂತಸದಿಂದ ಕಾಲ ಕಳೆಯುತ್ತಿದ್ದರು. ಆದರೆ, ಹಾರ ಬದಲಾಯಿಸಿದ ಬಳಿಕ ಶಿವಾಂಗಿ ಕುಸಿದಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಅಷ್ಟೊತ್ತಿಗಾಗಲೇ ಆಕೆ ಮೃತಪಟ್ಟಿದ್ದರು ಎಂದು ತಿಳಿದುಬಂದಿದೆ. ಇದಕ್ಕೆ ಹಠಾತ್ ಹೃದಯಾಘಾತವೇ ಕಾರಣ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.
ಮದುವೆಗಿಂತ ೧೫-೨೦ ದಿನಕ್ಕೂ ಮೊದಲು ರಕ್ತದೊತ್ತಡ ಹಾಗೂ ಜ್ವರದಿಂದ ಬಳಲುತ್ತಿದ್ದ ಶಿವಾಂಗಿ ಚಿಕಿತ್ಸೆ ಪಡೆದಿದ್ದರು. ಇದಾದ ಬಳಿಕ ಸುಧಾರಿಸಿಕೊಂಡಿದ್ದರೂ ಹಸೆಮಣೆ ಏರಬೇಕಾದ ದಿನವೇ ಹಸುನೀಗಿದ್ದಾರೆ. ಶಿವಾಂಗಿ ವೇದಿಕೆ ಮೇಲಿರುವ ವಿಡಿಯೊ ವೈರಲ್ ಆಗಿದೆ.
ಇದನ್ನೂ ಓದಿ | Heart Attack | ಸಾಯಿಬಾಬಾ ಮಂದಿರದಲ್ಲಿ ಭಕ್ತನಿಗೆ ಹೃದಯಾಘಾತ, ದೇವರ ಪಾದದಡಿಯಲ್ಲೇ ಸಾವು, ಇದೆಂಥಾ ದುರ್ವಿಧಿ!