Site icon Vistara News

Best Chief Minister | ಈ ಬಾರಿಯೂ ಯೋಗಿ ಆದಿತ್ಯನಾಥ್‌ ದೇಶದ ಬೆಸ್ಟ್‌ ಸಿಎಂ, ನಂತರದ ಸ್ಥಾನ ಯಾರಿಗೆ?

Yogi Adityanath waves to media in Mandya

ನವದೆಹಲಿ: ದಕ್ಷ ಆಡಳಿತ, ದಿಟ್ಟ ನಿರ್ಧಾರ, ಅಪರಾಧ ನಿಗ್ರಹಕ್ಕೆ ಕಠಿಣ ಕ್ರಮ ಸೇರಿ ಹಲವು ಯೋಜನೆಗಳಿಂದ ದೇಶದ ಗಮನ ಸೆಳೆದಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ (Yogi Adityanath) ಅವರು ಈ ಬಾರಿಯೂ ದೇಶದ ಅತ್ಯುತ್ತಮ (Best Chief Minister) ಮುಖ್ಯಮಂತ್ರಿ ಎನಿಸಿದ್ದಾರೆ. ಇಂಡಿಯಾ ಟುಡೇ- ಸಿ ವೋಟರ್‌ ಮೂಡ್‌ ಆಫ್‌ ದಿ ನೇಷನ್‌ನ 2023ರ ವರದಿ ಪ್ರಕಟವಾಗಿದ್ದು, ಈ ಬಾರಿಯೂ ಯೋಗಿ ಅವರನ್ನೇ ಜನ ಬೆಸ್ಟ್‌ ಚೀಫ್‌ ಮಿನಿಸ್ಟರ್‌ ಎಂಬುದಾಗಿ ಆಯ್ಕೆ ಮಾಡಿದ್ದಾರೆ.

ಸಮೀಕ್ಷೆಯಲ್ಲಿ ಪಾಲ್ಗೊಂಡವರಲ್ಲಿ ಶೇ.39.1ರಷ್ಟು ಜನ ಯೋಗಿ ಆದಿತ್ಯನಾಥ್‌ ಅವರನ್ನು ‘ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಮುಖ್ಯಮಂತ್ರಿ’ ಎಂದು ಪರಿಗಣಿಸಿದ್ದಾರೆ. ನಂತರದ ಸ್ಥಾನದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ (ಶೇ.16ರಷ್ಟು), ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (ಶೇ.7.3ರಷ್ಟು) ಇದ್ದಾರೆ.

ಕೇಜ್ರಿವಾಲ್‌ ಜನಪ್ರಿಯತೆ ಕುಸಿತ

ಕಳೆದ ವರ್ಷದ ಆಗಸ್ಟ್‌ನಲ್ಲಿ ಪ್ರಕಟವಾದ ಸಮೀಕ್ಷೆಗೆ ಹೋಲಿಸಿದರೆ ಈ ಬಾರಿ ಅರವಿಂದ್‌ ಕೇಜ್ರಿವಾಲ್‌ ಅವರ ಜನಪ್ರಿಯತೆ ಶೇ.6ರಷ್ಟು ಕುಸಿದಿದೆ. ಹಾಗೆಯೇ, ಮಮತಾ ಬ್ಯಾನರ್ಜಿ ಅವರ ಜನಪ್ರಿಯತೆಯು ಶೇ.1ರಷ್ಟು ಇಳಿಕೆಯಾಗಿದೆ ಎಂದು ಸಮೀಕ್ಷೆ ತಿಳಿಸಿದೆ. ಕಳೆದ ಸಮೀಕ್ಷೆಯಲ್ಲಿ ಅರವಿಂದ್‌ ಕೇಜ್ರಿವಾಲ್‌ ಅವರಿಗೆ ಶೇ.22ರಷ್ಟು ಜನ ಬೆಂಬಲ ಇತ್ತು. ದೇಶದ 30 ರಾಜ್ಯಗಳ 1,40,917 ಜನರ ಅಭಿಪ್ರಾಯ ಸಂಗ್ರಹಿಸಿ ಸಮೀಕ್ಷಾ ವರದಿ ಪ್ರಕಟಿಸಲಾಗಿದೆ.

ಇದನ್ನೂ ಓದಿ | Mood of the Nation | ಲವ್​ ಜಿಹಾದ್​ ಮುಸ್ಲಿಂ ಗಂಡಸರ ಗುಪ್ತ ಕಾರ್ಯಸೂಚಿ ಎಂದಿದೆ ಇಂಡಿಯಾ ಟುಡೆ ಸಮೀಕ್ಷೆ

Exit mobile version