Site icon Vistara News

Ram Mandir : ಯೋಗಿ ನೇತೃತ್ವದಲ್ಲಿ ಆಯೋಧ್ಯೆಗೆ ಭೇಟಿ ನೀಡಿದ ಉತ್ತರ ಪ್ರದೇಶ ಶಾಸಕರು

Yogi Adityanath

ಲಖನೌ: ಉತ್ತರ ಪ್ರದೇಶದ ಸ್ಪೀಕರ್ ಸತೀಶ್ ಮಹಾನಾ ಅವರು ಆಯೋಜಿಸಿದ್ದ ಅಯೋಧ್ಯೆ ರಾಮ ಮಂದಿರ (Ram Mandir) ಪ್ರವಾಸದ ಭಾಗವಾಗಿ, ಭಾರತೀಯ ಜನತಾ ಪಕ್ಷ (ಬಿಜೆಪಿ) ಶಾಸಕರು ಮತ್ತು ಎಂಎಲ್ಸಿಗಳು ಭಾನುವಾರ ಅಯೋಧ್ಯೆಯ ರಾಮ ಮಂದಿರದ ದರ್ಶನ ಮಾಡಿದರು. ಬಿಜೆಪಿ ಅಲ್ಲದೆ ಕಾಂಗ್ರೆಸ್, ಬಹುಜನ ಸಮಾಜ ಪಕ್ಷ (ಬಿಎಸ್ಪಿ) ಮತ್ತು ರಾಷ್ಟ್ರೀಯ ಲೋಕ ದಳ (ಆರ್​​ಎಲ್​ಡಿ) ಕಾರ್ಯಕರ್ತರು ಭಾನುವಾರ ದೇವಾಲಯ ಪಟ್ಟಣಕ್ಕೆ ಪ್ರಯಾಣ ಬೆಳೆಸಿದರು. ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಪ್ರವಾಸ ತಪ್ಪಿಸಿಕೊಂಡಿದ್ದಾರೆ. ಹೀಗಾಗಿ ಅವರ ಪಕ್ಷದ ಶಾಸಕರು ಗೈರುಹಾಜರಾಗಿದ್ದರು.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಮಹಾನಾ ಅವರು ಶಾಸಕರನ್ನು ರಾಮ ಮಂದಿರ ಸಂಕೀರ್ಣಕ್ಕೆ ಕರೆದೊಯ್ದರು, ಸಿಎಂ ಪುಣೆಯಿಂದ ಅಯೋಧ್ಯೆಗೆ ವಿಮಾನದ ಮೂಲಕ ಆಗಮಿಸಿದರು. ಮಹಾನಾ ಅವರು ಲಕ್ನೋದಿಂದ ಅಯೋಧ್ಯೆಗೆ 10 ಬಸ್​ಗಳಲ್ಲಿ ಶಾಸಕರನ್ನು ಮುನ್ನಡೆಸಿದರು. ಕಾಂಗ್ರೆಸ್ ಶಾಸಕ ಆರಾಧನಾ ಮಿಶ್ರಾ ಮೋನಾ ಮತ್ತು ಬಿಎಸ್ಪಿ ಶಾಸಕ ಉಮಾಶಂಕರ್ ಸಿಂಗ್ ಮತ್ತು ಆರ್​ಎಲ್​​ಡಿ ಶಾಸಕರು ಮಹಾನಾ ಅವರೊಂದಿಗೆ ಪ್ರಯಾಣಿಸಿದರು.

ಅಖಿಲೇಶ್​ ಯಾದವ್ ಶನಿವಾರ ವಿಧಾನಸಭೆಯಲ್ಲಿ ಸ್ಪೀಕರ್​ಗೆ ಹೀಗೆ ಹೇಳಿದ್ದರು: “ನಿಮ್ಮ ಆಹ್ವಾನದ ಮೇರೆಗೆ ನಾನು ಅಯೋಧ್ಯೆಗೆ ಹೋಗುವುದಿಲ್ಲ. ರಾಮ್ ಲಲ್ಲಾ ನನ್ನನ್ನು ಕರೆದಾಗ ನಾನು ಹೋಗುತ್ತೇನೆ. ಮೊದಲು ನಾನು ಶಿವನ ಆರಾಧನಾ ಮಾಡುತ್ತೇನೆ. ನಂತರ ನನ್ನ ಇಡೀ ಕುಟುಂಬದೊಂದಿಗೆ ಅಯೋಧ್ಯೆಗೆ ಹೋಗುತ್ತೇನೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ : Narendra Modi : ದಲಿತರು, ಒಬಿಸಿಗಳೇ ಮೋದಿ ಗ್ಯಾರಂಟಿಯ ಫಲಾನುಭವಿಗಳು ಎಂದ ಪ್ರಧಾನಿ

ಯಾದವ್ ಹೋಗಲು ನಿರ್ಧರಿಸಿದಾಗ ಎಲ್ಲಾ ಎಸ್ಪಿ ಶಾಸಕರು ಅಯೋಧ್ಯೆಗೆ ಹೋಗುತ್ತಾರೆ ಎಂದು ಮೂಲಗಳು ತಿಳಿಸಿವೆ. ಎಸ್ಪಿ ಶಾಸಕರ ಅನುಪಸ್ಥಿತಿಯನ್ನು ಬಿಜೆಪಿ ಟೀಕಿಸಿದ್ದು, ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ, 1990ರಲ್ಲಿ ರಾಮಭಕ್ತರ ಮೇಲೆ ಗುಂಡು ಹಾರಿಸಲು ಆದೇಶಿಸಿದವರು ಇವರೇ ಎಂದು ಕಿಡಿಕಾರಿದ್ದಾರೆ.

ಎಸ್ಪಿ ಶಾಸಕರೊಂದಿಗೆ ಯಾದವ್ ಅವರನ್ನು ಆಹ್ವಾನಿಸಿದ್ದೆ ಆದರೆ ದುರದೃಷ್ಟವಶಾತ್ ಅವರು ಆಹ್ವಾನವನ್ನು ತಿರಸ್ಕರಿಸಿದರು ಎಂದು ಮಹಾನಾ ಹೇಳಿದ್ದಾರೆ. ಜನವರಿ 22ರಂದು ನಡೆಯುವ ಪ್ರಾಣ ಪ್ರತಿಷ್ಠಾನ ಸಮಾರಂಭದ ಆಹ್ವಾನವನ್ನು ಯಾದವ್ ಈ ಹಿಂದೆ ತಿರಸ್ಕರಿಸಿದ್ದರು. ಅಯೋಧ್ಯೆಯಲ್ಲಿ, ಸಿಎಂ ಮತ್ತು ಸ್ಪೀಕರ್, ಶಾಸಕರೊಂದಿಗೆ ಹನುಮಾನ್ ಗರ್ಹಿ ದೇವಾಲಯ ಮತ್ತು ರಾಮ್ ದೇವಾಲಯ ಸಂಕೀರ್ಣಕ್ಕೆ ಭೇಟಿ ನೀಡಲಿದ್ದಾರೆ, ಅಲ್ಲಿ ಅವರು ರಾಮ್ ಲಲ್ಲಾ ದರ್ಶನ ಪಡೆಯಲು ಮತ್ತು ದೇವಾಲಯದ ಸಂಕೀರ್ಣದಲ್ಲಿ ಭೋಗ್ ಸೇವಿಸಲು ನಾಲ್ಕು ಗಂಟೆಗಳ ಕಾಲ ಕಳೆಯಲಿದ್ದಾರೆ.

Exit mobile version