ಮುಂಬೈ: ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ ಅವರ ಸಂಸಾರದಲ್ಲಿ ಬಿರುಗಾಳಿ ಎದ್ದಿದೆ. ನವಾಜುದ್ದೀನ್ ಸಿದ್ದಿಕಿ ವಿರುದ್ಧ ಅವರ ಮಾಜಿ ಪತ್ನಿ ಆಲಿಯಾ ಆರೋಪ ಮಾಡಿದ ಬೆನ್ನಲ್ಲೇ, ಎಲ್ಲ ಆರೋಪಗಳಿಗೆ ನಟ ಪ್ರತಿಕ್ರಿಯಿಸಿದ್ದರು. ನಟನ ಪ್ರತಿಕ್ರಿಯೆಗೆ ಈಗ ಆಲಿಯಾ ಪ್ರತಿಕ್ರಿಯಿಸಿದ್ದು, “ನೀನೊಬ್ಬ ಅಪಾಯಕಾರಿ, ಬೇಜವಾಬ್ದಾರಿ ತಂದೆ” ಎಂದು ಆರೋಪ ಮಾಡಿದ್ದಾರೆ.
“ನಾನು ಯಾವುದೇ ಪ್ರತಿಕ್ರಿಯೆ ಕೊಡದೆ ಸುಮ್ಮನಿರುವ ಕಾರಣ ನನ್ನನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲಾಗಿದೆ. ಇದು ಪ್ರತಿಕ್ರಿಯೆ ಅಲ್ಲ, ನನ್ನ ಭಾವನೆಗಳು” ಎಂಬುದಾಗಿ ಇತ್ತೀಚೆಗೆ ನವಾಜುದ್ದೀನ್ ಸಿದ್ದಿಕಿ ಮಾಜಿ ಪತ್ನಿಗೆ ಪತ್ರ ಬರೆದಿದ್ದರು. ಇದಕ್ಕೆ ಆಲಿಯಾ ಕೂಡ ಓಪನ್ ಲೆಟರ್ ಬರೆದಿದ್ದು, ಹಲವು ಆರೋಪ ಮಾಡಿದ್ದಾರೆ. “ನೀನು ಮಗಳನ್ನು ಪುರುಷ ಮ್ಯಾನೇಜರ್‌ನೊಂದಿಗೆ ಬೇರೆ ದೇಶಕ್ಕೆ ಕಳುಹಿಸಿದೆ. ನನ್ನ ಒಪ್ಪಿಗೆಯೇ ಇಲ್ಲದೆ ಹೀಗೆ ಮಾಡಿದೆ. ಆದರೆ, ಒಂದೇ ಹೋಟೆಲ್‌ನಲ್ಲಿದ್ದ ಮಗಳನ್ನು ನಿನ್ನ ಮ್ಯಾನೇಜರ್ ದುರುದ್ದೇಶದಿಂದ ತಬ್ಬಿಕೊಳ್ಳುತ್ತಿದ್ದ. ಇದು ಗೊತ್ತಿದ್ದೂ ನೀನು ಏನೂ ಮಾಡಲಿಲ್ಲ. ಏಕೆಂದರೆ ನೀನು ಅಪಾಯಕಾರಿ ತಂದೆ” ಎಂಬುದಾಗಿ ಆಲಿಯಾ ನವಾಜುದ್ದೀನ್ ದೂರಿದ್ದಾರೆ.
“ನೀನು ಈಗಲೂ ನಿನ್ನ ಮ್ಯಾನೇಜರ್‌ನನ್ನು ನಂಬುತ್ತೀಯಾ. ಒಬ್ಬ ಮಗಳ ತಾಯಿಯಾಗಿ ನಾನು ನಿನಗೆ ವಾಸ್ತವ ಹೇಳಿದರೂ ನೀನು ನಂಬುವುದಿಲ್ಲ. ಅಷ್ಟಕ್ಕೂ, ನನ್ನನ್ನು ಜೈಲಿಗೆ ಕಳುಹಿಸಲು ಏನೆಲ್ಲ ಮಾಡಬೇಕೋ ಎಲ್ಲವನ್ನೂ ಮಾಡಿದ್ದೀಯ. ಆದರೆ ನೀನು ಅದರಲ್ಲಿ ಯಶಸ್ವಿಯಾಗಿಲ್ಲ” ಎಂದು ಪತ್ರ ಬರೆದಿದ್ದಾರೆ. ನವಾಜುದ್ದೀನ್ ಸಿದ್ದಿಕಿ ಕಿರುಕುಳ ನೀಡುತ್ತಿದ್ದ, ಅವರ ಮನೆಯವರೆಲ್ಲ ಸೇರಿ ನನ್ನನ್ನು ಹೊರಹಾಕಿದರು ಎಂಬುದು ಸೇರಿ ಈಗಾಗಲೇ ಆಲಿಯಾ ಹಲವು ಆರೋಪ ಮಾಡಿದ್ದಾರೆ.
ಇದನ್ನೂ ಓದಿ: Nawazuddin Siddiqui: ಪತ್ನಿ ಆರೋಪಕ್ಕೆ ಫಸ್ಟ್‌ಟೈಮ್ ಪ್ರತಿಕ್ರಿಯಿಸಿದ ನವಾಜುದ್ದೀನ್ ಸಿದ್ದಿಕಿ: ಇದು ಎಮೋಷನ್ ಅಂದಿದ್ಯಾಕೆ?