Site icon Vistara News

Madras High Court | ವಿದ್ಯಾರ್ಥಿ ಆತ್ಮಹತ್ಯೆಗೆ ಶಿಕ್ಷಕರ ಮೇಲೆ ಆಪಾದನೆ ಸಲ್ಲದು: ಮದ್ರಾಸ್ ಹೈಕೋರ್ಟ್

Madras Highcourt

ಚೆನ್ನೈ: ಶಾಲೆಯಲ್ಲಿ ವಿದ್ಯಾರ್ಥಿಗಳು ಮಾಡಿಕೊಳ್ಳುವ ಎಲ್ಲ ಅವಘಡಗಳಿಗೆ, ಅದರಲ್ಲೂ ಆತ್ಮಹತ್ಯೆಗಳಿಗೆ ಶಿಕ್ಷಕರ ವಿರುದ್ಧ ಆಪಾದನೆ ಮಾಡುವುದು ಸರಿಯಲ್ಲ ಎಂದು ಮದ್ರಾಸ್ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಎಲ್ಲದಕ್ಕೂ ಶಿಕ್ಷಕರನ್ನೇ ಆಪಾದಿತರನ್ನಾಗಿ ಮಾಡುವುದರಿಂದ ಶಾಲೆಯ ವರ್ಚಸ್ಸಿಗೆ ಧಕ್ಕೆಯಾಗುತ್ತದೆ. ಹಾಗೆಯೇ, ಅದೇ ಶಾಲೆಯಲ್ಲಿ ಓದುತ್ತಿರುವ ಇತರ ಮಕ್ಕಳ ಹಿತಾಸಕ್ತಿಯ ಮೇಲೂ ಇದೂ ಪರಿಣಾಮ ಬೀರುತ್ತದೆ. ಸಂಸ್ಥೆಯ ಇಮೇಜ್‌ಗೆ ಧಕ್ಕೆ ಮಾಡುವುದು ತುಂಬ ಸರಳ. ಆದರೆ, ಸರ್ಕಾರಿ ಶಾಲೆಗಳಲ್ಲಿ ಶಿಸ್ತು ತಂದು, ಉತ್ತಮ ಫಲಿತಾಂಶಗಳನ್ನು ತರುವುದು ತುಂಬ ಕಷ್ಟದ ಟಾಸ್ಕ್ ಎಂದು ಜಸ್ಟೀಸ್ ಎಸ್.ಎಂ.ಸುಬ್ರಮಣಿಯನಮ್ ಅವರು ಅಭಿಪ್ರಾಯಪಟ್ಟಿದ್ದಾರೆ.

ನೀಲಗಿರಿಯ ಶಾಲೆಯಲ್ಲಿ ಓದುತ್ತಿದ್ದ ತಮ್ಮ ಮಗನ ಆತ್ಮಹತ್ಯೆಗೆ ಶಾಲಾ ಹೆಡ್ ಮಾಸ್ಟರ್ ಕಾರಣ. ಅವರ ವಿರುದ್ಧ ಕ್ರಮ ಕೈಗೊಂಡು, 10 ಲಕ್ಷ ರೂ. ಪರಿಹಾರ ನೀಡಬೇಕೆಂದು ಆಗ್ರಹಿಸಿ ಕೆ. ಕಾಲಾ ಎಂಬುವರ ಮದ್ರಾಸ್ ಹೈಕೋರ್ಟ್ ಮೊರೆ ಹೋಗಿದ್ದರು. ಈ ಪ್ರಕರಣದ ವಿಚಾರಣೆ ವೇಳೆ, ಮದ್ರಾಸ್ ಹೈಕೋರ್ಟ್ ಎಲ್ಲದಕ್ಕೂ ಶಿಕ್ಷಕರನ್ನು ಹೊಣೆ ಮಾಡಲಾಗದು ಎಂದು ಅಭಿಪ್ರಾಯಪಟ್ಟಿದೆ.

ಮಕ್ಕಳ ಭೌತಿಕ ಮತ್ತು ಮಾನಸಿಕ ಆರೋಗ್ಯನ್ನು ನಿರಂತರವಾಗಿ ಪೋಷಕರೂ ನಿಗಾ ಇಟ್ಟಿರಬೇಕು. ತರಗತಿಯಲ್ಲಿ ಅನೇಕ ಮಕ್ಕಳ ಕಾಳಜಿಯನ್ನು ಒಬ್ಬನೇ ಶಿಕ್ಷಕ ನೋಡಿಕೊಳ್ಳಬೇಕಾಗುತ್ತದೆ. ಹಾಗಾಗಿ, ಶಿಕ್ಷಕ ಅಥವಾ ಶಿಕ್ಷಕಿ ಪ್ರತಿ ಮಗುವಿನ ಮಾನಸಿಕ ಆರೋಗ್ಯದ ಬಗ್ಗೆ ಕೇರ್ ಮಾಡುವುದು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿದೆ.

ಇದನ್ನೂ ಓದಿ | Suicide Case | ಪೋಷಕರು ಬೈದರು ಎಂದು ಶಿರಸಿಯಲ್ಲಿ ಶಾಲೆಯ ಬಾವಿಗೆ ಹಾರಿ ವಿದ್ಯಾರ್ಥಿ ಆತ್ಮಹತ್ಯೆ

Exit mobile version